5:19 AM Friday19 - September 2025
ಬ್ರೇಕಿಂಗ್ ನ್ಯೂಸ್
Kodagu | ಕುಶಾಲನಗರ: ಕಾವೇರಿ ನದಿಯಲ್ಲಿ ಮುಳುಗಿ ಕಾಡಾನೆ ದಾರುಣ ಸಾವು ಮಡಿಕೇರಿ ನಗರಸಭೆಯ ಮೇಲೆ ಲೋಕಾಯುಕ್ತ ದಿಢೀರ್ ದಾಳಿ: ಸಾರ್ವಜನಿಕರ ದೂರಿಗೆ ಸ್ಪಂದನೆ ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಸ್ತಾಕ್: ತಡೆ ಕೋರಿ ಸಲ್ಲಿಸಿದ ಅರ್ಜಿ ಸುಪ್ರೀಂಕೋರ್ಟ್… ಪಂಚ ಗ್ಯಾರಂಟಿ ಯೋಜನೆಗಳಿಗೆ 98 ಸಾವಿರ ಕೋಟಿ; ಅಭಿವೃದ್ಧಿಗೆ 8 ಸಾವಿರ ಕೋಟಿ:… New Delhi | ಕಾಂಗ್ರೆಸ್ ಸರಕಾರದ ಪಂಚೇಂದ್ರಿಯಗಳು ನಿಷ್ಕ್ರಿಯವಾಗಿವೆ: ಕೇಂದ್ರ ಸಚಿವ ಕುಮಾರಸ್ವಾಮಿ… Bangaluru | ರೈತ ಮುಖಂಡರ ನಿಯೋಗ ಸಿಎಂ ಸಿದ್ದರಾಮಯ್ಯ ಭೇಟಿ: ರೈತರ ಸಮಸ್ಯೆ… ಕೃಷ್ಣಾ ಮೇಲ್ದಂಡೆ ಯೋಜನೆ: ಮುಳುಗಡೆ ರೈತರ ನೀರಾವರಿ ಜಮೀನಿಗೆ 40 ಲಕ್ಷ, ಒಣಭೂಮಿಗೆ… Belagavi | ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗೆ ಬಡ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ ಕೂಡಲೇ ಕೈಬಿಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.…

ಇತ್ತೀಚಿನ ಸುದ್ದಿ

ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್ ಕಾರ್ಕಳದ ಅಳಿಯ !

09/12/2021, 18:55

ಕಾರ್ಕಳ(reporterkarnataka.com) : ತಮಿಳುನಾಡಿನ ಕುನೂರು ಬಳಿ ದುರಂತಕ್ಕೀಡಾದ ಸೇನಾ ಹೆಲಿಕಾಪ್ಟರ್ ನಲ್ಲಿ ಮಡಿದ ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್ ಅವರು ಉಡುಪಿ ಜಿಲ್ಲೆಯ ಕಾರ್ಕಳದ ಅಳಿಯ ಆಗಿದ್ದಾರೆ.

ಹರ್ಜಿಂದರ್ ಸಿಂಗ್ ಅವರು ಕಾರ್ಕಳ ಮೂಲದ ಆಗ್ನೆಸ್ ಪ್ರಫುಲ್ಲ ಮಿನೇಜಸ್ ಅವರನ್ನು ಮದುವೆಯಾಗಿದ್ದರು. ದುರಂತಕ್ಕೀಡಾದ ಹೆಲಿಕಾಪ್ಟರ್ ನಲ್ಲಿ ಮರಣವನ್ನಪ್ಪಿದ  

ಹರ್ಜಿಂದರ್ ಸಿಂಗ್ ಅವರು ಸೇನೆಯಲ್ಲಿ ಕರ್ತವ್ಯದಲ್ಲಿದ್ದ ಕಾರ್ಕಳ ಮೂಲದ ಆಗ್ನೆಸ್ ಪ್ರಫುಲ್ಲ ಮಿನೇಜಸ್ ಅವರನ್ನು ಪ್ರೇಮ ವಿವಾಹ ಆಗಿದ್ದರು.

ಕಾರ್ಕಳ ಸಾಲ್ಮರದ ದಿವಂಗತ ಫೆಲಿಕ್ಸ್ ಮಿನೇಜಸ್ ಮತ್ತು ಮೇರಿ ಮಿನೇಜಸ್ ದಂಪತಿಯ ಪುತ್ರಿಯಾದ ಆಗ್ನೆಸ್ ಪ್ರಫುಲ್ಲ ಮಿನೇಜಸ್ ಸದ್ಯ ಸೇನೆಯಲ್ಲಿ ಇಂಡಿಯನ್ ಆರ್ಮಿಯಲ್ಲಿ ಲೆಫ್ಟಿನೆಂಟ್ ಆಗಿ ಕರ್ತವ್ಯ ಸಲ್ಲಿಸುತ್ತಿದ್ದಾರೆ.

ಮದುವೆಯಾದ ಬಳಿಕ ತಂದೆ- ತಾಯಿ ನೆಲೆಸಿದ್ದ ಸಾಲ್ಮರಕ್ಕೆ ದಂಪತಿ ಹಲವು ಬಾರಿ ಭೇಟಿ ನೀಡಿದ್ದರು. ರಜೆ ಸಂದರ್ಭಗಳಲ್ಲಿ ಹರ್ಜಿಂದರ್ ಸಿಂಗ್ ಮತ್ತು ಆಗ್ನೆಸ್ ಊರಿಗೆ ಬಂದು ಹೋಗುತ್ತಿದ್ದರು. ಆಗ್ನೆಸ್ ಪ್ರಫುಲ್ಲ ಅವರ ತಾಯಿ ಮೇರಿ ಮಿನೇಜಸ್ ಈಗಲೂ ಸಾಲ್ಮರದಲ್ಲಿಯೇ ವಾಸವಿದ್ದಾರೆ. ನಿನ್ನೆ

ಹೆಲಿಕಾಪ್ಟರ್ ದುರಂತ ವಿಷಯ ತಿಳಿಯುತ್ತಿದ್ದಂತೆ, ಮನೆಯಲ್ಲಿ ಸ್ಮಶಾನ ಮೌನ ನೆಲೆಸಿದೆ.

ಇತ್ತೀಚಿನ ಸುದ್ದಿ

ಜಾಹೀರಾತು