ಇತ್ತೀಚಿನ ಸುದ್ದಿ
ಸೆಮಿ ಲಾಕ್ ಡೌನ್: ಮಂಗಳೂರಿನಲ್ಲಿ ಹೆಚ್ಚಿದ ವಾಹನ ದಟ್ಟಣೆ; ಸ್ವತಃ ಫೀಲ್ಡಿಗಿಳಿದ ಪೊಲೀಸ್ ಕಮಿಷನರ್
22/06/2021, 19:43
ಮಂಗಳೂರು(reporterkarnataka news): ನಗರದಲ್ಲಿ ಸೆಮಿ ಲಾಕ್ ಡೌನ್ ಜಾರಿಗೆ ಬಂದ ಹಿನ್ನೆಲೆಯಲ್ಲಿ ಮಂಗಳವಾರ ನಗರದಲ್ಲಿ ಭಾರಿ ವಾಹನ ದಟ್ಟಣೆ ಹೆಚ್ಚಿದ್ದು, ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರು ಸ್ವತಃ
ಫೀಲ್ಡಿಗಿಳಿದರು.
ಮಾಸ್ಕ್ ಧರಿಸದೆ ಓಡಾಡುವವರಿಗೆ ಮತ್ತು ಅನಗತ್ಯ ಸತ್ತಾಟಕ್ಕೆ ಬಂದವರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಿ ಕಳುಹಿಸಲಾಯಿತು. ಸ್ವತಃ ಪೊಲೀಸ್ ಕಮಿಷನರ್ ಅವರೇ ಮಾಸ್ಕ್ ಅಗತ್ಯವನ್ನು ಮನದಟ್ಟು ಮಾಡಿದರು. ಸಂಶಯಾಸ್ಪದ ವಾಹನಗಳನ್ನು ನಿಲ್ಲಿಸಿ ಆರ್ ಸಿ, ಡಿಎಲ್, ಇನ್ಸೂರೆನ್ಸ್ ತಪಾಸಣೆ ಮಾಡಿದರು. ಟಿಂಟ್ ಹಾಕಿದ ಕಾರುಗಳನ್ನು ನಿಲ್ಲಿಸಿ ಟಿಂಟ್ ತೆಗೆದು ದಂಡ ವಿಧಿಸಿದರು.