5:58 AM Monday20 - April 2026
ಬ್ರೇಕಿಂಗ್ ನ್ಯೂಸ್
ಚಿರತೆಯಿಂದ ಅತ್ತೆಯ ಕಾಪಾಡಿದ ಸೊಸೆಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ: ಸಚಿವ ಲಕ್ಷ್ಮಿ… ಮೈಸೂರು | ಕಾವೇರಿ ನದಿಯಲ್ಲಿ ಮುಳುಗಿ 6 ಜನ‌ ಜಲಸಮಾಧಿ: ದರ್ಗಾಕ್ಕೆ ಬಂದವರು… ಎನ್ ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರುವ ಭಯದಿಂದ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸುತ್ತಿಲ್ಲ:… ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣ: ಸಂತ್ರಸ್ತರ ಕುಟುಂಬಕ್ಕೆ ಕಡೆಗೂ ಸಿಕ್ತು ಸರ್ಕಾರಿ ನೌಕರಿ… ಎನ್. ಆರ್. ಪುರ | ಭದ್ರಾ ನದಿಯ ಬ್ಯಾಕ್ ವಾಟರ್ ನಲ್ಲಿ ಈಜಲು… ಬನ್ನೇರುಘಟ್ಟಕ್ಕೆ ದಕ್ಷಿಣ ಆಫ್ರಿಕಾದಿಂದ ಹೊಸ ಅತಿಥಿಗಳು: ಸಚಿವ ಈಶ್ವರ್ ಖಂಡ್ರೆಯಿಂದ 4 ಚೀತಗಳಿಗೆ… ನವ ಮಂಗಳೂರು ಬಂದರಿಗೆ ಐಷಾರಾಮಿ ಕ್ರೂಸ್ ಹಡಗು ಆಗಮನ: ಕರಾವಳಿ ಪ್ರವಾಸೋದ್ಯಮಕ್ಕೆ ಉತ್ತೇಜನ ಹಾಸನದಲ್ಲಿ ಮೂರು ದಿನಗಳ ಆಪರೇಷನ್‌ ಯಶಸ್ವಿ: ನರಹಂತಕ ಕಾಡಾನೆ ಸೆರೆ ಬಳ್ಳಾರಿ | ಪ್ಯಾರಚೂಟ್ ತರಬೇತಿ ವೇಳೆ ತಾಂತ್ರಿಕ ದೋಷ: 50 ಅಡಿ ಎತ್ತರದಿಂದ… ತೀರ್ಥಹಳ್ಳಿಯಲ್ಲಿ ಕುಡಿಯುವ ನೀರಿನ ಬಾವಿಗೆ ವಿಷ: ಪ್ರಕರಣ ದಾಖಲು

ಇತ್ತೀಚಿನ ಸುದ್ದಿ

ಗಬ್ಬದ ಹಸು ಕದ್ದು ಕೊಂದ ಪ್ರಕರಣ: ಕೊಂಡಂಗೇರಿಯ 3 ಮಂದಿ ಆರೋಪಿಗಳ ಬಂಧನ

16/09/2025, 19:08

ಗಿರಿಧರ್ ಕೊಂಪುಳಿರ ಮಡಿಕೇರಿ

info.reporterkarnata@gmail.com

ಮೈತಾಡಿ ಗ್ರಾಮದ ನಿವಾಸಿ ಬೊಳ್ಳಪಂಡ ಎಂ.ಭೀಮಯ್ಯ ಅವರ ಒಂದು ಹಸು ಕಳ್ಳತನವಾಗಿರುವ ಕುರಿತು ದೂರನ್ನು ವಿರಾಜಪೇಟೆ ಗ್ರಾಮಾಂತರ ಪೊಲೀಸರಿಗೆ ನೀಡಿದ ಅನ್ವಯ ಪೊಲೀಸರು ಶೀಘ್ರಗತಿಯಲ್ಲಿ ತನಿಖೆ ಕೈಗೊಂಡು ಮೂರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕರಣದ ಆರೋಪಿಗಳ ಪತ್ತೆಗಾಗಿ ಮಹೇಶ್ ಕುಮಾರ್.ಎಸ್, ಡಿ.ಎಸ್‌.ಪಿ, ವಿರಾಜಪೇಟೆ ಉಪವಿಭಾಗ, ವೃತ್ತ ನಿರೀಕ್ಷಕರಾದ ಅನೂಪ್ ಮಾದಪ್ಪ, ಠಾಣಾಧಿಕಾರಿ ಲತಾ.ಎನ್.ಜೆ, ವಾಣಿಶ್ರೀ, ಪಿಎಸ್‌ಐ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳಾದ ಸಾಜನ್, ಜೋಸ್ ನಿಶಾಂತ್, ಸಂತೋಷ್ ಚೌಹನ್, ಅಬ್ದುಲ್ ಮಜೀದ್, ಬೋಪಣ್ಣ ರವರುಗಳ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ ಸೆಪ್ಟೆಂಬರ್ 13 ರಂದು 3 ಜನ ಆರೋಪಿಗಳಾದ, ಮೊಹಮ್ಮದ್ ಆಶಿಕ್, 22 ವರ್ಷ, ಕೊಂಡಂಗೇರಿ ಗ್ರಾಮ, ಶಾಹಿದ್, 25 ವರ್ಷ, ಕೊಂಡಂಗೇರಿ ಗ್ರಾಮ,ಹ್ಯಾರೀಸ್, 34 ವರ್ಷ ಕೊಂಡಂಗೇರಿ ಗ್ರಾಮ. ಇವರುಗಳನ್ನು ದಸ್ತಗಿರಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಆರೋಪಿಗಳು ಇನ್ನಷ್ಟು ಇದೇ ರೀತಿಯ ಹಸು ಕಳ್ಳತನ ಕೃತ್ಯಗಳನ್ನು ನಡೆಸಿರುವ ಶಂಕೆ ಇದ್ದು ಪೊಲೀಸರ ತನಿಕೆಯಿಂದ ಬಯಲಾಗಬೇಕಾಗಿದೆ. ಈ ಭಾಗದಲ್ಲಿ ಹಲವರು ಈಗಾಗಲೇ ತಮ್ಮ ಹಸುಗಳನ್ನು ಕಳೆದುಕೊಂಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು