ಇತ್ತೀಚಿನ ಸುದ್ದಿ
ಎಸ್ ಸಿಐ ಮಂಗಳೂರು ಲೀಜನ್ ಮಾಸಿಕ ಸಭೆ: ವಿವಿಧ ಕ್ಷೇತ್ರಗಳ ಮೂವರು ಸಾಧಕರಿಗೆ ಸನ್ಮಾನ
02/02/2022, 22:53
ಮಂಗಳೂರು(reporterkarnataka.com): ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಮಂಗಳೂರು ಲೀಜನ್ ನ ಮಾಸಿಕ ಸಭೆಯು ನಗರದ ಹೋಟೆಲ್ ಮಾಯಾ ಇಂಟರ್ ನ್ಯಾಶನಲ್ ನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮೂವರು ಸಾಧಕರನ್ನು ಸನ್ಮಾನಿಸಲಾಯಿತು.
ಕಳೆದ 25 ವರ್ಷಗಳಿಂದ ಗಿಡ- ಮರಗಳನ್ನು ನೆಟ್ಟು ಪೋಷಣೆ ಮಾಡುತ್ತಿರುವ ಪರಿಸರ ಪ್ರೇಮಿ ಕೃಷ್ಣಪ್ಪ, ಕಡು ಬಡತನದಲ್ಲಿ ಹುಟ್ಟಿ ಒಪ್ಪೊತ್ತಿನ ಗಂಜಿಗೂ ಪರದಾಡುತ್ತಾ, ಗಂಡನ ಕಳೆದುಕೊಂಡ ಬಳಿಕ ತನ್ನೆರಡು ಹೆಣ್ಣು ಮಕ್ಕಳನ್ನು ಸಾಕಲು ಪರದಾಡಿ ಗಂಡನಲ್ಲಿದ್ದ ಅಂಬ್ಯುಲೆನ್ಸ್ ನ ಚಾಲಕಿಯಾಗಿ ಇದೀಗ 12 ಅಂಬ್ಯುಲೆನ್ಸ್ ಮಾಲಕಿಯಾಗಿ,
ನೊಂದವರ ಧ್ವನಿಯಾಗಿರುವ ರಾಧಿಕಾ ಸುರೇಶ್ ಹಾಗೂ ಗುರುಪುರ ಪರಿಸರದ ಅತ್ಯಂತ ಜನಾನುರಾಗಿ ವೈದ್ಯರಾದ ಸಿದ್ದೀಕ್ ಅವರನ್ನು ಸನ್ಮಾನಿಸಲಾಯಿತು.
ವಿವಿಧ ಕ್ಷೇತ್ರಗಳಲ್ಲಿ ಮಹಾನ್ ಸಾಧನೆ ಮಾಡಿದ ಈ ಮೂವರು ಸಾಧಕರಿಗೆ ಶಾಲು ಹೊದಿಸಿ, ಪೇಟ ತೊಡಿಸಿ, ಫಲ ಪುಷ್ಪ ನೀಡಿ ಅಭಿನಂದಿಸಲಾಯಿತು.
ಸನ್ಮಾವನ್ನು ಸ್ವೀಕರಿಸಿದ ಮೂವರು ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಸಭೆಯ ಅಧ್ಯಕ್ಷತೆಯನ್ನು ಸೀನಿಯರ್ ಚೇಂಬರ್ ಇಂಟರ್ ನ್ಯಾಶನಲ್ ಮಂಗಳೂರು ಲೀಜನ್ ಅಧ್ಯಕ್ಷ ಹರಿಪ್ರಸಾದ್ ಕಾರಮೊಗರಗುತ್ತು ವಹಿಸಿದ್ದರು.
ಮಾಸಿಕ ಸಭೆಯ ಕಾರ್ಯಸೂಚಿಯನ್ನು ಮಂಡಿಸಿದರು. ಸಭೆಯಲ್ಲಿ ಹೊಸದಾಗಿ ಸೀನಿಯರ್ ಚೇಂಬರ್ ಗೆ ಸೇರ್ಪಡೆ ಗೊಂಡವರನ್ನು ಸ್ವಾಗತಿಸಲಾಯಿತು.
ಭಾರತೀಯ ಸೀನಿಯರ್ ಚೇಂಬರ್ ವಾಣಿಯನ್ನು ಎಸ್ ಸಿಐನ ಫ್ಲೇವಿ ಗ್ಲ್ಯಾಡಿಸ್ ಡಿಮೆಲ್ಲೊ ವಾಚಿಸಿದರು. ಪರಿಸರವಾದಿ ಕೃಷ್ಣಪ್ಪ ಅವರ ಸಾಧನೆಯ ಸನ್ಮಾನ ಪತ್ರವನ್ನು ಎಸ್ ಸಿಐನ ಲತಾ ಕಲ್ಲಡ್ಕ,ರಾಧಿಕಾ ಅವರ ಸನ್ಮಾನ ಪತ್ರವನ್ನು ಕೋಶಾಧಿಕಾರಿ ರಂಜಿತ್ ಶೆಟ್ಟಿ ಹಾಗೂ ಡಾ. ಸಿದ್ದೀಕ್ ಅವರ ಸನ್ಮಾನ ಪತ್ರವನ್ನು ಎಸ್ ಸಿಐನ ಸುಬ್ರಹ್ಮಣ್ಯ ವಾಚಿಸಿದರು.
ಸಭೆಯಲ್ಲಿ ಎಸ್ ಸಿಐನ ಹೀರಾಚಂದ್, ಸುರೇಶ್, ಪ್ರಶಾಂತ್, ಅಶೋಕ್, ಕಿಶೋರ್ ಫೆರ್ನಾಂಡಿಸ್, ಮಾಲತಿ ಶೆಟ್ಟಿ, ನಿರ್ಮಲಾ ಎ., ಪ್ರಭಾಕರ್, ರಜಾಕ್, ಖಾಲಿದ್, ಮಂಗಳೂರು ಬ್ಲೂಂನ ಅಕ್ಷಯ್ ಹಾಗೂ ಎನ್ ಜಿಒ ಆಶಾಲತಾ ಮುಂತಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ಶಾಲಿನಿ ಪ್ರಶಾಂತ್ ಸುವರ್ಣ ವಂದಿಸಿದರು.