ಇತ್ತೀಚಿನ ಸುದ್ದಿ
ಸ್ಕೂಟರ್ ಗೆ ಖಾಸಗಿ ಎಕ್ಸ್ ಪ್ರೆಸ್ ಬಸ್ ಡಿಕ್ಕಿ ಪ್ರಕರಣ: ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಸಾವು
23/10/2023, 12:26

ಮಂಗಳೂರು(reporterkarnataka.com): ನಗರದ ಅಂಬೇಡ್ಕರ್ ವೃತ್ತದ ಬಳಿ ಖಾಸಗಿ ಎಕ್ಸ್ ಪ್ರೆಸ್ ಬಸ್ಸೊಂದು ಸ್ಕೂಟರಿಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸ್ಕೂಟರ್ ಸವಾರ ಕೃಷ್ಣರಾಜ್ ಭಟ್(75) ಅವರು ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.
ಕೃಷ್ಣರಾಜ್ ಭಟ್ ಅವರು ಸೆ. 26ರಂದು ಮಧ್ಯಾಹ್ನ ತನ್ನ ಸ್ಕೂಟರನ್ನು ಚಲಾಯಿಸಿಕೊಂಡು ಜ್ಯೋತಿ ಅಂಬೇಡ್ಕರ್ ಸರ್ಕಲ್ ನಿಂದ ಹಂಪನಕಟ್ಟೆ ಕಡೆಗೆ ಹಾದು ಹೋಗಿರುವ ರಸ್ತೆಯಲ್ಲಿ ಹೋಗುತ್ತಿದ್ದಾಗ ಹೋಟೇಲ್ ವುಡ್ ಸೈಡ್ ಬಳಿ ಆನಂದ್ ಹೆಸರಿನ ಖಾಸಗಿ ಎಕ್ಸ್ ಪ್ರೆಸ್ ಬಸ್ಸಿನ ಚಾಲಕ ಭೋಜರಾಜ್ ಎಂಬಾತನು ವೇಗವಾಗಿ ಹಂಪನಕಟ್ಟೆ ಕಡೆಗೆ ಚಲಾಯಿಸಿಕೊಂಡು ಹೋಗುವ ಭರದಲ್ಲಿ ನಿರ್ಲಕ್ಷ್ಯತನದಿಂದ ಓವರ್ ಟೇಕ್ ಮಾಡುತ್ತಾ
ಸ್ಕೂಟರಿಗೆ ಡಿಕ್ಕಿ ಹೊಡೆದಿದ್ದ.ಸ್ಕೂಟರ್ ಸಮೇತ ಚಾಲಕ
ಬಿದ್ದ ವೇಳೆ ಸ್ಕೂಟರಿನ ಕೆಳಗೆ ಸವಾರರ ಬಲ ಕಾಲು ಸಿಲುಕಿ ಮುಂದಕ್ಕೆ ಜಾರಿ ಹೋದ ಕಾರಣ ಬಲಕಾಲಿಗೆ ಗಂಭೀರ ಗಾಯಗೊಂಡಿದ್ದರು.
ಎಡಪಕ್ಕೆಲುಬಿಗೆ ಗಂಭೀರ ಸ್ವರೂಪದ ಗಾಯವಾಗಿತ್ತು. ಗಾಯಾಳುವನ್ನು ಬಸ್ ಚಾಲಕನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಕೊಲಾಸೋ ಆಸ್ಪತ್ರೆಗೆ ದಾಖಲಿಸಿ ಐಸಿಯು ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ
ಚಿಕಿತ್ಸೆ ಫಲಕಾರಿಯಾಗದೆ ಅ.21ರಂದು ಗಾಯಾಳು ಮೃತಾಪಟ್ಟಿದ್ದಾರೆ.