ಇತ್ತೀಚಿನ ಸುದ್ದಿ
ಸರಕಾರದ ಯೋಜನೆ ಪ್ರತಿ ಮನೆ ಮನೆಗೆ ತಲುಪಿಸಲು ಅಮೃತ ಸಮುದಾಯ ಯೋಜನೆ ಅನುಷ್ಠಾನ: ಡಾ.ನಾಗರತ್ನ ಕೆ. ಎ.
07/01/2022, 00:40
ಬಂಟ್ವಾಳ(reporterkarnataka.com): ಸರಕಾರದ ಯೋಜನೆಯು ಪ್ರತಿ ಗ್ರಾಮದ ಮನೆ ಮನೆಗೂ ತಲುಪುವ ಉದ್ದೇಶದಿಂದ ಅಮೃತ ಸಮುದಾಯ ಯೋಜನೆಯನ್ನು ಮುಖ್ಯಮಂತ್ರಿ ಬೊಮ್ಮಾಯಿ ಬೆಂಗಳೂರಿನಲ್ಲಿ ಚಾಲನೆ ನೀಡಿದರು.
ಇದರ ಸಾಂಕೇತಿಕ ಚಾಲನೆಯನ್ನು ಬಂಟ್ವಾಳ ಅಮ್ಟಾಡಿ ಪಿಡಿಓ ರವಿ.ಟಿ.ಅಮ್ಟಾಡಿ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಸೇವಾ ಯೋಜನೆಯು ಅಮ್ಟಾಡಿಯಲ್ಲಿ ಒಂದು ವಾರಗಳ ಕಾಲ ಶಿಬಿರ ಮಾಡಿ ಜನರ ಮನಸ್ಸನ್ನು ಗೆದ್ದು,ರಾಷ್ಟ್ರೀಯ ಸೇವಾ ಯೋಜನೆಯಿಂದ ಅಭಿವೃದ್ಧಿ ಕಾರ್ಯ ನಡೆಯಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಯಾಗಿ ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಡಾ. ನಾಗರತ್ನ ಕೆ. ಎ. ಮಾತನಾಡಿ, ಸರಕಾರ ಯೋಜನೆಯು ಬಡತನತನ ರೇಖೆಗಿಂತ ಕೆಳಗಿರುವ ಮನೆ ಮನೆಗೂ ತಲುಪಿ ಬಡತನ ಮುಕ್ತವಾಗುವ ನಿಟ್ಟಿನಲ್ಲಿ ಸರಕಾರ ಅಮೃತ ಸಮುದಾಯ ಯೋಜನೆಯನ್ನು ಅನುಷ್ಠಾನ ಗೊಳಿಸಲಾಗಿದೆ. ಇಡೀ ರಾಜ್ಯದಲ್ಲಿ 750 ಗ್ರಾಮಗಳನ್ನು ದತ್ತು ಸ್ವೀಕಾರ ಮಾಡಿದೆ. ಅದನ್ನು ರಾಷ್ಟ್ರೀಯ ಸೇವಾ ಯೋಜನೆಯ ಘಟಕಗಳ ಮೂಲಕ ಜಿಲ್ಲೆಯಲ್ಲಿ ಸಕಾರಗೊಳಿಸಲಾಗುವುದು,
ರಾಸೆಯೋ ಯೋಜನಾಧಿಕಾರಿಗಳನ್ನು, ಸ್ವಯಂ ಸೇವಕರನ್ನು ಆಯ್ಕೆ ಮಾಡಲಾಗಿದೆ. ಗ್ರಾಮ ಪಂಚಾಯತ್ ಕಾರ್ಯಾಲಯಗಳ ಸಹಯೋಗದಲ್ಲಿ ನಡೆಸಲಾಗುವುದು ಎಂದರು.
ಬಂಟ್ವಾಳ ಪ್ರಥಮ ದರ್ಜೆ ಕಾಲೇಜಿನ ರಾ. ಸೇ.ಯೋ ಯೋಜನಾಧಿಕಾರಿ ಹೈದರಾಲಿ ಶಿಬಿರದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್, ಉಪಾಧ್ಯಕ್ಷ ಸುನೀಲ್ ಕೆ., ಮಾಜಿ ಅಧ್ಯಕ್ಷೆ ಭಾರತಿ ಚೌಟ, ಕಾರ್ಯದರ್ಶಿ ಲಕ್ಷ್ಮಿ ನಾರಾಯಣ ಕೆ, ಕ್ಲರ್ಕ್ ಗಣೇಶ್ ಕೆ., ಬಿಲ್ ಕಲೆಕ್ಟರ್ ಚೇತನ್ ಪೂಜಾರಿ ಹಾಗೂ ಸಿಬ್ಬಂದಿಗಳಾದ ಪವಿತ್ರಾ, ಮಲ್ಲಿಕಾ, ಸುಶೀಲಾ, ಪಂಚಾಯತ್ ಸದಸ್ಯ ಫೇಲಿಕ್ಸ್ ಡಿ. ಸೋಜ, ಮಾಜಿ ಅಧ್ಯಕ್ಷೆ ಭಾರತೀ ಚೌಟ,ಉಪಸ್ಥಿತರಿದ್ದರು.
ಬಂಟ್ವಾಳ ಪ್ರಥಮ ದರ್ಜೆ ಕಾಲೇಜಿನ ರಾ.ಸೆ.ಯೋ ಸ್ವಯಂ ಸೇವಕರು ಭಾಗವಹಿಸಿದ್ದರು.