7:12 AM Tuesday22 - April 2025
ಬ್ರೇಕಿಂಗ್ ನ್ಯೂಸ್
Karnataka BJP | ಹಾವೇರಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ಸರಕಾರದ ವಿರುದ್ಧ… DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ…

ಇತ್ತೀಚಿನ ಸುದ್ದಿ

ಸದಾಶಿವನಗರ ಬ್ಯಾಡ್ಮಿಂಟನ್ ಲೀಗ್: ಬಿಎಂಆರ್ಜಿ ಫೈರಿ ಫಾಲ್ಕನ್ಸ್‌ಗೆ ಪ್ರಶಸ್ತಿ

05/02/2025, 17:44

ಬೆಂಗಳೂರು(reporterkarnataka.com): ಬಿ.ಆರ್.ಶ್ರೀಧರ್ ಒಡೆತನದ ಬಿಎಂಆರ್‍ಜಿ-ಫೈರಿ ಫಾಲ್ಕನ್ಸ್ ಇತ್ತೀಚೆಗೆ ಮುಕ್ತಾಯಗೊಂಡ ಸದಾಶಿವನಗರ ಬ್ಯಾಡ್ಮಿಂಟನ್ ಲೀಗ್‍ನಲ್ಲಿ ತೀವ್ರ ಪೈಪೋಟಿಯಿಂದ ಕೂಡಿದ್ದ ಫೈನಲ್‍ನಲ್ಲಿ ಥಂಡರ್ ಡ್ರಾಗನ್ಸ್ ತಂಡವನ್ನು 3-1 ಅಂತರದಿಂದ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತು.
ಎರಡೂ ತಂಡಗಳು ತಮ್ಮೆಲ್ಲ ಕೌಶಲಗಳನ್ನು ಒರೆಗೆ ಹೆಚ್ಚಿದ ಪಂದ್ಯ ಕೊನೆ ಕ್ಷಣದವರೆಗೂ ಪ್ರೇಕ್ಷಕರನ್ನು ತುದಿಗಾಗಲ್ಲಿ ನಿಲ್ಲುವಂತೆ ಮಾಡಿತು. ಚಾಂಪಿಯನ್‍ಶಿಪ್ ಗೆಲ್ಲಲೇಬೇಕೆಂಬ ಕೆಚ್ಚಿನಿಂದ ಹೋರಾಡಿದ ನಾಯಕ ರಿತೇಶ್ ಸುರೇಶ್ ನೇತೃತ್ವದ ತಂಡ ಅಂತಿಮವಾಗಿ ಪ್ರಾಬಲ್ಯ ಮೆರೆಯಿತು. ಆದಾಗ್ಯೂ, ನಿಶಾಂತ್ ನೇತೃತ್ವದ ಥಂಡರ್ ಡ್ರಾಗನ್ಸ್ ತಮ್ಮ ತಂಡದ ಸಾಮಥ್ರ್ಯವನ್ನು ಕೀಳಂದಾಜುಮಾಡುವಂತಿಲ್ಲ ಎಂದು ಸಾಬೀತುಪಡಿಸಿತು.
ಕತ್ತುಕತ್ತಿನ ಕಾಳಗದಲ್ಲಿ ಅಮೋಘ ಪ್ರತಿಹೋರಾಟ ಸಂಘಟಿಸಿ ಫಾಲ್ಕನ್ಸ್‌ನ ಮೊದಲ ಡಬಲ್ಸ್ ಜೋಡಿಯು ಮೂರನೇ ಸೆಟ್‍ನಲ್ಲಿ ಪಂದ್ಯವನ್ನು ಗೆಲುವಿನ ನಗೆ ಬೀರಿತು. ಈ ಆವೇಗ-ಬದಲಾಯಿಸುವ ಗೆಲುವು ಫಾಲ್ಕನ್ಸ್‍ಗೆ ಪ್ರಶಸ್ತಿ ಪಡೆಯಲು ಅಗತ್ಯ ಹುಮ್ಮಸ್ಸು ನೀಡಿತು.
ಕೊನೆಯಲ್ಲಿ, ಬಿಎಂಆರ್‍ಜಿ ಫೈರಿ ಫಾಲ್ಕನ್ಸ್ 3-1 ಅಂತರದಲ್ಲಿ ಥಂಡರ್ ಡ್ರ್ಯಾಗನ್ಸ್ ತಂಡವನ್ನು ಸೋಲಿಸಿ ವಿಜಯಶಾಲಿಯಾಯಿತು. ತಂಡದ ಅಸಾಧಾರಣ ಸಾಂಘಿಕ ಕೆಲಸ, ಚುರುಕುತನ ಮತ್ತು ದೃಢಸಂಕಲ್ಪ ಫಲ ನೀಡಿದ್ದು, ಸದಾಶಿವನಗರ ಬ್ಯಾಡ್ಮಿಂಟನ್ ಲೀಗ್‍ನ ಚಾಂಪಿಯನ್ ಕಿರೀಟವನ್ನು ಮುಡಿಗೇರಿಸಿಕೊಂಡಿತು.
ವೆಂಕಟೇಶ್, ಧಾರಿಣಿ, ವಿಜಯ್, ರಿತೇಶ್, ನಿರ್ಮಲಾ, ತನುಷ್, ಶಶಿಕಾಂತ್, ಹರ್‍ಪ್ರೀತ್, ಸತೀಶ್, ಅಶೋಕ್ ಶೆಟ್ಟಿ ಮತ್ತು ರವಿಶಂಕರ್ ಫಾಲ್ಕನ್ಸ್ ತಂಡವನ್ನು ಪ್ರತಿನಿಧಿಸಿದ್ದರು.
ಜನವರಿ 17 ಮತ್ತು ಫೆಬ್ರವರಿ 1 ರ ನಡುವೆ ಸದಾಶಿವನಗರ ಕ್ಲಬ್‍ನಲ್ಲಿ, ಬಹು ನಿರೀಕ್ಷಿತ ಪಂದ್ಯಾವಳಿಯನ್ನು ಸದಾಶಿವನಗರ ಕ್ಲಬ್ ಆಯೋಜಿಸಿತ್ತು. ಕರ್ನಾಟಕ ರಾಜ್ಯ ಬಿಲಿಯಡ್ರ್ಸ್ ಅಸೋಸಿಯೇಷನ್ (ಕೆಎಸ್‍ಬಿಎ) ಬ್ಯಾಡ್ಮಿಂಟನ್ ವಿಭಾಗ ಸಹಯೋಗ ನೀಡಿತ್ತು.
ರೋರಿಂಗ್ ಲಯನ್ಸ್; ಸ್ಟಾಲಿಯನ್ ವಿಝಾಡ್ರ್ಸ್; ಬಿಎಂಆರ್‍ಜಿ ಫೈರಿ ಫಾಲ್ಕನ್ಸ್; ಥಂಡರ್ ಡ್ರಾಗನ್ಸ್; ವೈಲ್ಡ್ ವೂಲ್ವ್ಸ್ ಮತ್ತು ಬೆಂಗಳೂರು ಬುಲ್ಸ್ ಹೀಗೆ ಲೀಗ್‍ನಲ್ಲಿ ಆರು ತಂಡಗಳು ಭಾಗವಹಿಸಿದ್ದವು. ಲೀಗ್ 60ಕ್ಕೂ ಹೆಚ್ಚು ಪ್ರತಿಭಾವಂತ ಬ್ಯಾಡ್ಮಿಂಟನ್ ಆಟಗಾರರನ್ನು ಒಟ್ಟುಗೂಡಿಸಿತು.

ಇತ್ತೀಚಿನ ಸುದ್ದಿ

ಜಾಹೀರಾತು