4:31 AM Monday21 - April 2025
ಬ್ರೇಕಿಂಗ್ ನ್ಯೂಸ್
Karnataka BJP | ಹಾವೇರಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ಸರಕಾರದ ವಿರುದ್ಧ… DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ…

ಇತ್ತೀಚಿನ ಸುದ್ದಿ

CPL ಸೀಸನ್ 2 ಕ್ರಿಕೆಟ್ ಪಂದ್ಯಾಟ: ನೈಂಟಿ ವಾರಿಯರ್ಸ್ ವಿನ್ನರ್; ರಾಯಲ್ ಸ್ಟೈಕರ್ಸ್ ರನ್ನರ್

18/02/2025, 18:03

ಮಂಗಳೂರು(reporterkarnataka.com): ಕ್ರಿಕೆಟ್ ಕಾಶಿ ನಗರದ ಉರ್ವಾ ಮೈದಾನದಲ್ಲಿ ಕೆನರಾ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಎಸೋಸಿಯೇಷನ್( CSCA ) ಅಧ್ಯಕ್ಷ ವಿನೋದ್ ಪಿಂಟೋ ತಾಕೋಡೆ ಅವರ ನಾಯಕತ್ವದಲ್ಲಿ CPL ಸೀಸನ್ 2 ಕ್ರಿಕೆಟ್ ಪಂದ್ಯಾಟ ಫೆಬ್ರವರಿ 15 ಮತ್ತು 16ರಂದು
ವಿಜ್ರಂಭಣೆಯಿಂದ ನಡೆಯಿತು.
ರೋಹನ್ ಕಾರ್ಪೋರೇಷನ್ ಮಾಲಕರಾದ ರೋಹನ್ ಮೊಂತೇರೋ ಅವರ ಅಧ್ಯಕ್ಷತೆಯಲ್ಲಿ ಕ್ರಿಕೆಟ್ ಪಂದ್ಯಾಟದ ಉದ್ಘಾಟನಾ ಸಮಾರಂಭ ನೆರವೇರಿತು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್ ,ಲೋಟಸ್ ಪ್ರಾಪರ್ಟಿ ಮೆನೇಜಿಂಗ್ ಪಾರ್ಟ್ ನರ್ ಸಂಪತ್ ಶೆಟ್ಟಿ, ಉದ್ಯಮಿ ರಘ ಪ್ರಶಾಂತ್ ಪಿಂಟೋ,ಬಿಜೈ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಅಶೋಕ್ ಪಿಂಟೊ ಉಪಸ್ಥಿತರಿದ್ದರು.
ಸ್ಟ್ಯಾನಿ ಅಲ್ವಾರಿಸ್ ಹಾಗೂ ರೋಹನ್ ಮೊಂತೇರೊ ಅವರು ಮಾತನಾಡಿ ಶುಭ ಹಾರೈಸಿದರು.
CSCA ಅಧ್ಯಕ್ಷರಾದ ವಿನೋದ್ ಪಿಂಟೋ ತಾಕೋಡೆ ಗಣ್ಯರನ್ನು ಸ್ವಾಗತಿಸಿದರು. ಜೈಸನ್ ಪಿರೇರಾ ಶಿರ್ತಾಡಿ ಕಾರ್ಯಕ್ರಮ ನಿರೂಪಿಸಿದರು.


ಈ ಸಂದರ್ಭದಲ್ಲಿ ಅಂಡರ್ ಆರ್ಮ್ ಕ್ರಿಕೆಟ್ ತೀರ್ಪುಗಾರರಾಗಿ 40 ವರುಷ ಸೇವೆ ನೀಡಿದ ರೊಲ್ಯಾಂಡ್ ಪಿಂಟೋ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಮಂಗಳೂರು ಡಯಾಸಿಸ್ ಗೆ ಒಳಪಟ್ಟ 10 ತಂಡಗಳು ಈ ಪಂದ್ಯಾಟದಲ್ಲಿ ಭಾಗವಹಿಸಿದ್ದು ಎಲ್ಲಾ 10 ತಂಡದ ಮಾಲಕರನ್ನು ಸನ್ಮಾನಿಸಲಾಯಿತು.
ಎರಡು ದಿನಗಳ ಕಾಲ ಲೀಗ್ ಮಾದರಿಯಲ್ಲಿ ಹೊನಲು ಬೆಳಕಿನಲ್ಲಿ ಕ್ರಿಕೆಟ್ ಪಂದ್ಯಾಟಗಳು ಸಾಗಿ ಬಂದವು.
ಈ ಸಂದರ್ಭದಲ್ಲಿ ಅನೇಕ ಗಣ್ಯರು ಅಗಮಿಸಿ ಶುಭ ಹಾರೈಸಿದರು.
ಪ್ರಮುಖವಾಗಿ ಅನಿವಾಸಿ ಉದ್ಯಮಿ ಐವರಿ ಗ್ರ್ಯಾಂಡ್ ರಿಯಲ್ ಎಸ್ಟೇಟ್ ಮಾಲಕರಾದ ಮೈಕಲ್ ಡಿಸೋಜ ಅವರು ಸರಿ ಸುಮಾರು ಒಂದು ಗಂಟೆಯ ಕಾಲ ಆಟಗಾರರೊಡನೆ ಬೆರೆತು ಪಂದ್ಯಾಟ ವೀಕ್ಷಿಸಿದರು.
ಫೆ.16ರಂದು ರಾತ್ರಿ 9:30ಕ್ಕೆ ಪಂದ್ಯಾಟಗಳು ಕೊನೆಗೊಂಡು ಸಮಾರೋಪ ಸಮಾರಂಭ ನಡೆಸಲಾಯಿತು,
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಡಯಾಸಿಸ್ ನ PRO ರೋಯ್ ಕ್ಯಾಸ್ತೆಲಿನೋ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಅನಿವಾಸಿ ಉದ್ಯಮಿ, ಚಲನಚಿತ್ರ ನಿರ್ಮಾಪಕ ಲೆಫ್ಟಿನೆಂಟ್ ಜನರಲ್ ಅಂಬ್ಯಾಸಿಡರ್ ಪ್ರ್ಯಾಂಕ್ ಫೆರ್ನಾಂಡಿಸ್,
ನಿಧಿ ಲ್ಯಾಂಡ್ ಚೇರ್ಮನ್ ಮತ್ತು ಎಂಡಿ ಪ್ರಶಾಂತ್ ಸನಿಲ್ ಅವರು ಹಾಜರಿದ್ದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಮಟ್ಟದ ತ್ರೋಬಾಲ್ ಆಟಗಾರ್ತಿ ವಿಲೋನಾ ಡಿಕುನ್ನಾ ಅವರನ್ನು ಸನ್ಮ್ಮಾನಿಸಲಾಯಿತು.
CSCA ಅಧ್ಯಕ್ಷ ವಿನೋದ್ ಪಿಂಟೋ ಸ್ವಾಗತಿಸಿದರು. ಗ್ರೀಷ್ಮಾ ಸಲ್ಡಾನಾ ಕಾರ್ಯಕ್ರಮ ನಿರೂಪಿಸಿದರು.

*ಕ್ರಿಕೆಟ್ ಪಂದ್ಯಾಟದಲ್ಲಿ ಗೆದ್ದ ತಂಡಗಳ ವಿವರ :*

1) ಅನಿಲ್ ಮಾಲಕತ್ವದ ನೈಂಟಿ ವಾರಿಯರ್ಸ್ ಕೂಳೂರು ಒಂದು ಲಕ್ಷ ನಗದು ಹಾಗೂ ಟ್ರೋಫಿ
2) ಮರ್ವಿನ್ ಲೋಬೊ, ಜಿತೇಶ್, ರೋಶನ್ ಇವರ ಮಾಲಕತ್ವದ ರೋಯಲ್ ಸ್ಟೈಕರ್ಸ್ ತಂಡವು 60 ಸಾವಿರ ನಗದು ಹಾಗೂ ಟ್ರೋಫಿ
3) ಲೈನಲ್ ಹಾಗೂ ನವೀನ್ ಮಾಲಕತ್ವದ ಎಲ್ ಡೋ ರಾಡೋ ತಂಡವು 20 ಸಾವಿರ ನಗದು ಹಾಗೂ ಟ್ರೋಫಿ
4) ರಿಚ್ಚರ್ಡ್ ಹಾಗೂ ರಾಜೇಶ್ ಮಾಲಕತ್ವದ
ಜೆಬಿ ವಾರಿಯರ್ಸ್ ತಂಡವು 20 ಸಾವಿರ ನಗದು ಹಾಗೂ ಟ್ರೋಫಿ

*ವೈಯುಕ್ತಿಕ ಬಹುಮಾನಗಳು:*
ಬೆಸ್ಟ್ ಅಲ್ಲ್ರೌಂಡರ್- ಜೀವನ್ ನೈಂಟಿ ವಾರಿಯರ್ಸ್,
ಮೆನ್ ಆಫ಼್ ದಿ ಟೂರ್ನಮೆಂಟ್- ಗ್ಲೆನ್ಸನ್ ನೈಂಟಿ ವಾರಿಯರ್ಸ್,
ಇಮ್ಯಾಜಿನ್ ಪ್ಲೇಯರ್- ನಿತಿನ್ ರೋಯಲ್ ಸ್ಟ್ರೈಕರ್ಸ್ ,
ಬೆಸ್ಟ್ ಬ್ಯಾಟ್ಸಮನ್ – ಫ್ರಾನ್ಸಿಸ್ ರೋಯಲ್ ಸ್ಟೈಕರ್ಸ್,
ಬೆಸ್ಟ್ ಫೀಲ್ಡರ್- ವಿಶ್ವಾಸ್ FM ಸ್ಟ್ರೆಕರ್ಸ್, ಆರೆಂಜ್ ಕ್ಯಾಪ್ ಹೋಲ್ಡರ್ – ಫ್ರಾನ್ಸಿಸ್ ರೋಯಲ್ ಸ್ಟ್ರೆಕರ್ಸ್,
ಪರ್ಪಲ್ ಕ್ಯಾಪ್ ಹೋಲ್ಡರ್- ಮೇಲ್ರೊಯ್ ನೈಂಟಿ ವಾರಿಯರ್ಸ್

ಇತ್ತೀಚಿನ ಸುದ್ದಿ

ಜಾಹೀರಾತು