ಇತ್ತೀಚಿನ ಸುದ್ದಿ
ಸಾಲು ಸಾಲು ಸರಕಾರಿ ರಜೆ: ಕಾಫಿನಾಡಿನಲ್ಲಿ ಪ್ರವಾಸಿಗರ ಪ್ರವಾಹ; ಮುಳ್ಳಯ್ಯನಗಿರಿಯಲ್ಲಿ ಭಾರೀ ಟ್ರಾಫಿಕ್ ಜಾಮ್
01/11/2024, 14:28
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.ಕಂ
ಸಾಲು-ಸಾಲು ರಜೆ ಹಿನ್ನೆಲೆಯಲ್ಲಿ ಕಾಫಿನಾಡು ಚಿಕ್ಕಮಗಳೂರು ಪ್ರವಾಸಿಗರ ಪ್ರವಾಹದಿಂದ ತುಂಬಿ ಹೋಗಿದೆ.
ಮುಳ್ಳಯ್ಯನಗಿರಿಯಲ್ಲಿ ಬೆಳ್ಳಂ ಬೆಳಗ್ಗೆ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ. ಭಾರೀ ಪ್ರವಾಸಿಗರ ಆಗಮನದಿಂದ ಗಿರಿ ತುದಿಯಲ್ಲಿ ಟ್ರಾಫಿಕ್ ಜಾಮ್ ನಡೆದಿದೆ. ಹೋಗಿರುವ ವಾಹನಗಳು ವಾಪಸ್ ಬರೋದಕ್ಕೆ ಜಾಗವೇ ಇಲ್ಲದಂತೆ ಟ್ರಾಫಿಕ್ ಜಾಮ್ ಉಂಟಾಗಿದೆ. ಟ್ರಾಫಿಕ್ ನಿಯಂತ್ರಿಸಲು ಪೊಲೀಸರು, ಸ್ಥಳಿಯರ ಹರಸಾಹಸ ಪಟ್ಟಿದ್ದಾರೆ. ನಿರಂತರ ಮಳೆಯಿಂದ ಇಮ್ಮಡಿಗೊಂಡಿರೋ ಮುಳ್ಳಯ್ಯನಗಿರಿ ಸೌಂದರ್ಯ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಪ್ರಕೃತಿ ಸೊಬಗನ್ನ ಕಂಡು ಪ್ರವಾಸಿಗರು ಮೂಕವಿಸ್ಮಿತರಾಗಿದ್ದಾರೆ. ಸಿಂಗಲ್ ರಸ್ತೆಯ ಗಿರಿ ತುದಿಯಲ್ಲಿ ಟ್ರಾಫಿಕ್ ಡ್ರೈವಿಂಗ್ ಕಿರಿಕಿರಿ ಉಂಟು ಮಾಡಿದೆ.
ಸ್ವಲ್ಪ ಎಚ್ಚರ ತಪ್ಪಿದರೂ ದೊಡ್ಡ ಅನಾಹುತ ಸಂಭವಿಸಲಿದೆ.