ಇತ್ತೀಚಿನ ಸುದ್ದಿ
ಎಸ್ ಟಿ ಮೀಸಲಾತಿಗೆ ಸರಕಾರದ ಮೀನಮೇಷ: ತಳವಾರ ಸಮುದಾಯ ಆಕ್ರೋಶ; ಕಲಬುರ್ಗಿ ಚಲೋ ಎಚ್ಚರಿಕೆ
23/02/2022, 18:13
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ತಳವಾರ್ ಹಾಗೂ ಪರಿವಾರ ಸಮುದಾಯಗಳು ಎಸ್ ಟಿ ಮೀಸಲಾತಿಗಾಗಿ ಸುಮಾರು 40
ವರ್ಷಗಳಿಂದ ಹೋರಾಟ ಮಾಡುತ್ತಲೇ ಬರುತ್ತಿದೆ. ಆದರೆ ಸರಕಾರ ಮಾತ್ರ ತಳವಾರ ಹಾಗೂ ಪರಿವಾರ ಸಮುದಾಯದವರ ಜೊತೆ ಕಣ್ಣಾಮುಚ್ಚಾಲೆ ಆಟವಾಡುತ್ತಿದೆ ಎಂದು ಸಮಾಜದ ಮುಖಂಡು ಆರೋಪಿಸಿದ್ದಾರೆ.
ಎಸ್ ಟಿ ಮೀಸಲಾತಿಗಾಗಿ ಕೇಂದ್ರ ಸರ್ಕಾರ ಎರಡು ವರ್ಷಗಳ ಹಿಂದೆಯೇ ಗ್ರೀನ್ ಸಿಗ್ನಲ್ ನೀಡಿದ್ದರು ರಾಜ್ಯ ಸರ್ಕಾರ್ ಮಾತ್ರ ಪ್ರತಿಷ್ಠೆ ಮೆರೆಯುತ್ತಿದೆ ಎಂದು ತಳವಾರ್ ಸಮಾಜದ ಮುಖಂಡರು ದೂರಿದ್ದಾರೆ.
ಸಿಂಧಗಿ ಉಪ ಚುನಾವಣೆಯಲ್ಲಿ ಸರಕಾರ ಎಸ್ ಟಿ ಮೀಸಲಾತಿ ಪ್ರಮಾಣ ಪತ್ರ ನೀಡಲು ಭರವಸೆ ನೀಡಿತ್ತು. ನೆಪ ಮಾತ್ರಕ್ಕೆ ಎನ್ನುವಂತೆ ದಿನಾಂಕ 29 ಜನವರಿ 2022 ರಂದು ತಳವಾರ ಹಾಗೂ ಪರಿವಾರ ಎಸ್ಟಿ ಮೀಸಲಾತಿ ಗೆ ಅಧಿಕೃತವಾಗಿ ಸೇರಿಸುವಂತೆ ಘೋಷಣೆ ಮಾಡಿದರು ಸಹ ಕೆಲ ರಾಜಕಾರಣಿಗಳ ಕೈ ವಾಡದಿಂದ ತಾಂತ್ರಿಕ ದೋಷದ ನೆಪ ಹೇಳುತ್ತಿದ್ದಾರೆ
ಹೀಗೆ ಸರ್ಕಾರ ಬಡವರ ತುಟಿಗೆ ತುಪ್ಪ ಸವರೋದನ್ನ ಬಿಟ್ಟು ನ್ಯಾಯುತವಾಗಿ ನಮಗೆ ಸಿಗಬೇಕಾದ ಹಕ್ಕು ನಮಗೆ ಕೊಡಿ. ಇಲ್ಲವಾದಲ್ಲಿ ಬರುವ ಮಾರ್ಚ್ 15 ರಂದು ಗುಲ್ಬರ್ಗ ಚಲೋ ರ್ಯಾಲಿಯಣ್ಣ ಹಮ್ಮಿಕೊಂಡಿದ್ದು ಸರಕಾರಕ್ಕೆ ಹಾಗೂ ಪಡದೆಯ ಅಂಚಿನಲ್ಲಿ ಸಮುದಾಯದ ವಿರುದ್ದ ಪಿತೂರಿ ಹುಡುತ್ತಿರುವ ರಾಜಕಾರಣಿಗಳ ಹೆಸರು ಬಹಿರಂಗಿಸಿ ರಾಜ್ಯದೆಂತ ತಳವಾರ್ ಸಮುದಾಯದ ಹೋರಾಟ ಮಾಡಲಾಗುವುದು
ಎಂದು ಮುಖಾಂಡರು ಹಾಗೂ ವಕೀಲಾರದ ಅಶೋಕ ಗುಳಗಾವಿ ಮಾಧ್ಯಮದ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ಗಂಟೆ ರವಾನಿಸಿದರು