ಇತ್ತೀಚಿನ ಸುದ್ದಿ
ರೋಪ್ ಸ್ಪರ್ಧೆ: ಅಂತಾರಾಷ್ಟ್ರೀಯ ಮಟ್ಟಕ್ಕೆ ಅಯ್ಕೆ ಯಾಗಿದ ಕಾರ್ಕಳದ ಬಾಲೆ ಕೃಪಾ ನಾಯಕ್
18/10/2022, 19:44
ಕಾರ್ಕಳ(reporter Karnataka.com): ಜಂಪ್ ರೋಪ್ ಸ್ಪರ್ಧೆಯಲ್ಲಿ ಕಾರ್ಕಳದ ಬಾಲೆಯೊಬ್ಬಳು ಅಂತಾರಾಷ್ಟ್ರೀಯ ಮಟ್ಟಕ್ಕೆ ಅಯ್ಕೆ ಯಾಗಿದ್ದಾಳೆ. ಕೃಪಾ ನಾಯಕ್ ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿದ ಪುಟ್ಟ ಪೋರಿ.
ಮೂಲತಃ ಕಾರ್ಕಳ ತಾಲೂಕಿನ ಕಡ್ತಲ ದರ್ಬುಜೆಯ ಕೃಷ್ಣ ಹಾಗೂ ಸುಶಿಲ ನಾಯಕ್ ದಂಪತಿಯ ಪುತ್ರಿಯಾಗಿರುವ ಕೃಪಾ ನಾಯಕ್ ಪ್ರಶಕ್ತ ಮುಂಬಯಿ ಪಿಯುಸಿ ಶಿಕ್ಷಣ ಪಡೆಯುತ್ತಿದ್ದಾಳೆ.
ಸಾಧನೆಗಳು: ಕ್ರೀಡೆಯಲ್ಲಿ ಅತೀವ ಆಸಕ್ತಿ ಹೊಂದಿದ್ದ ಕೃಪಾ ನಾಯಕ್ 12 ನೆ ವಯಸ್ಸಿನಲ್ಲಿ ಮುಂಬಯಿ ನಲ್ಲಿ ನಡೆದ ರಾಜ್ಯಮಟ್ಟದ ಜಂಪ್ ರೋಪ್ ನಲ್ಲಿ ಬೆಳ್ಳಿ ಪದಕ ಪಡೆದಿದ್ದಳು. 2014 ಪುದುಚೇರಿ ಯಲ್ಲಿ ನಡೆದ ರಾಷ್ಟ್ರೀಯ ಜಂಪ್ ರೋಪ್ ಚಾಂಪಿಯನ್ ಶಿಪ್ ನಲ್ಲಿ ಬಂಗಾರದ ಪದಕ. 2016 ರಲ್ಲಿ ಬಿಹಾರದ ಪಾಟ್ನಾದಲ್ಲಿ ನಡೆದ ರಾಷ್ಟ್ರೀಯ ಜಂಪ್ ರೋಪ್ ಸ್ಪರ್ಧೆಯಲ್ಲಿ ಬಂಗಾರದ ಪದಕ ಪಡೆದಿದ್ದಾರೆ ,ಈ ಬಾರಿ ಜಂಪ್ ರೋಪ್ ಫೆಡರೇಶನ್ ಆಫ್ ಇಂಡಿಯಾ ವತಿಯಿಂದ ಮುಂಬಯಿ ನಲ್ಲಿ ನಡೆದ ಏಶಿಯ ದೇಶದಗಳನ್ನೊಳಗೊಂಡ ಏಶಿಯನ್ ಜಂಪ್ ರೋಪ್ ಇಂಟರ್ನ್ಯಾಷನಲ್ ಚಾಂಪಿಯನ್ ಶಿಪ್ ನಲ್ಲಿ ಗುಂಪಿನ ಪದಕವನ್ನು ಪಡೆದಿದ್ದಾಳೆ.
2022 ರ ಡಿಸೆಂಬರ್ ನಲ್ಲಿ ಶ್ರೀಲಂಕಾ ದ ಕೊಲಂಬೊ ನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಮಟ್ಟದ ಜಂಪ್ ರೋಪ್ ಸ್ಪರ್ಧೆಗೆ ಅಯ್ಕೆಯಾಗಿದ್ದಾಳೆ.
ಏಶ್ಯಾನ್ ಲಾರ್ಜ್ ಸೆಟ್ ಸಾಲ್ಸಾ ಪರ್ ಮರಸ್ ಸ್ಪರ್ಧೆ ಯಲ್ಲಿ ಏಷ್ಯಾನ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆ ನಿರ್ಮಿಸಿದ್ದಾಳೆ.
ಯಕ್ಷ ಚತುರೆ ಕೃಪಾ: ಕೇವಲ ಕ್ರೀಡೆಯಲ್ಲಿಯೂ ಮಾತ್ರವಲ್ಲದೆ ಯಕ್ಷಗಾನದಲ್ಲೂ ಮಿಂಚುತ್ತಿದ್ದಾಳೆ. ಮುಂಬಯಿಯ ತೆಂಕು ಬಡಗು ತಿಟ್ಟಿನ ಯಕ್ಷಗಾನದ ಲ್ಲಿಯು ಬಣ್ಣ ತುಂಬುತಿದ್ದಾಳೆ .ಮುಂಬಯಿ ಯ ಪ್ರಸಿದ್ಧ ಯಕ್ಷಗಾನ ತರಬೇತಿ ಸಂಸ್ಥೆ ಭ್ರಾಮರಿ ಯಕ್ಷ ನೃತ್ಯ ಚಾರಿಟೇಬಲ್ ಟ್ರಸ್ಟ್ ನ ಸದಾನಂದ ಶೆಟ್ಟಿ ಯವರ ಗರಡಿಯಲ್ಲಿ ಪಳಗಿ ಅಗ್ನಿ,ಅನ್ನ ಪೂರ್ಣೇಶ್ವರಿ,ಗೋಪಾಲ ,ಹರಿ ಹರ ಮುಂತಾದ ವೇಷಗಳನ್ನು ರಂಗಸ್ಥಳದ ಲ್ಲಿ ಮಿಂಚು ಹರಿಸುತಿದ್ದಾಳೆ. ಕೃಷ್ಣ ನಾಯಕ್ ಯಕ್ಷಗಾನ ವೇಷಧಾರಿ ಅವರ ಪ್ರೇರಣೆಯೆ ಸಾಕ್ಷಿಯಾಗಿದೆ.