11:08 AM Friday5 - July 2024
ಬ್ರೇಕಿಂಗ್ ನ್ಯೂಸ್
ಶ್ರಮ ಸಂಸ್ಕೃತಿ ಗೌರವಿಸುವ ಹಬ್ಬ ಮಣ್ಣೆತ್ತಿನ ಅಮಾವಾಸ್ಯೆ: ಉತ್ತರ ಕರ್ನಾಟಕದಲ್ಲೆಡೆ ಭಾರೀ ಸಂಭ್ರಮ ಮಂಗಳೂರಿನ ವಿವಿಧಡೆ ಟ್ರಾಫಿಕ್ ಪೊಲೀಸರಿಂದ ಕರ್ಕಶ ಹಾರ್ನ್, ಎಲ್ಇಡಿ ಲೈಟ್ ತೆರವು ಕಾರ್ಯಾಚರಣೆ ಹುಣಸಗಿ: ವಿದ್ಯಾನಂದ ಶರಣರ 18ನೇ ವರ್ಷದ ಪುಣ್ಯಸ್ಮರಣೆ; ಸತ್ಸಂಗ ಸಂಜೀವಿನಿ ಕೂಟ ನೀಟ್ ಪರೀಕ್ಷೆ ಹಗರಣ: ಕೇಂದ್ರ ಸರಕಾರ ವಿರುದ್ಧ ಕಾಂಗ್ರೆಸ್, ಎನ್ ಎಸ್ ಯುಐ… ಚಾರ್ಮಾಡಿ ಘಾಟಿಯಲ್ಲಿ ಕಸ ಎಸೆದ ಎಳನೀರು ವಾಹನದ ಚಾಲಕನ ಮೇಲೆ ಕೇಸ್; ಚಾಲಕನಿಂದಲೇ… ಪಿಎಂ ಮೋದಿ ಭೇಟಿಯಾದ ಸಿಎಂ ಸಿದ್ದರಾಮಯ್ಯ: ಕಲ್ಯಾಣ ಕರ್ನಾಟಕ ಅಭಿವೃದ್ದಿ, ಬೆಂಗಳೂರಿನಲ್ಲಿ ಸುರಂಗ… 1.80 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಬೆಳಗೇರಾ ಸೇತುವೆ ಸಂಚಾರಕ್ಕೆ ರೆಡಿ: ಹೋರಾಟಕ್ಕೆ ಸಂದ… ಶಹಪುರ್ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಬಾಲಕರ ವಸತಿ ನಿಲಯದ ಬದನೆ ಸಾಂಬಾರಿನಲ್ಲಿ ಹುಳ… ನಿಮ್ಮ ಕನಸಿನ ಮನೆಯನ್ನು ಬಹುಮಾಮವಾಗಿ ಗೆಲ್ಲಬೇಕೆ ? ಹಾಗಿದ್ದರೆ ಇಲ್ಲಿದೆ ಸುವರ್ಣಾವಕಾಶ ಫುಟ್ ಪಾತ್ ಇರುವುದು ಸಾರ್ವಜನಿಕರಿಗೆ; ಅನಧಿಕೃತ ಗೂಡಂಗಡಿಗಳ ತೆರವಿಗೆ ಕ್ರಮ: ಮೇಯರ್ ಸುಧೀರ್…

ಇತ್ತೀಚಿನ ಸುದ್ದಿ

ರಿಪೋರ್ಟರ್ ಕರ್ನಾಟಕ ವಾಯ್ಸ್ ಆಫ್ ಆರಾಧನಾ: ಮೇ ತಿಂಗಳ ವಿಜೇತರಾಗಿ ಬೆಂಗಳೂರಿನ ಕನಸು ಹಾಗೂ ಸುಳ್ಯದ ಶ್ರೇಯಾ ಮೇರ್ಕಜೆ ಆಯ್ಕೆ

09/06/2024, 15:38

ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಮೇ ತಿಂಗಳ ಟಾಪರ್ ಆಗಿ ಬೆಂಗಳೂರಿನ ಕನಸು ಕೆ. ಹಾಗೂ ಸುಳ್ಯದ ಶ್ರೇಯಾ ಮೇರ್ಕಜೆ ಅವರು ಆಯ್ಕೆಯಾಗಿದ್ದಾರೆ.
ಕನಸು ಕೆ. ಬೆಂಗಳೂರಿನ ಕುಶಾಲ್ ಮತ್ತು ಶ್ವೇತಾ ದಂಪತಿ ಪುತ್ರಿ. ಈಕೆ ಬೆಂಗಳೂರಿನ ಕಾಟನ್ ಪೆಟ್ ಪ್ರೆಸಿಡೆಂಟ್ ಸ್ಕೂಲಿನ ಒಂದನೇ ತರಗತಿಯ ವಿದ್ಯಾರ್ಥಿನಿ. ನೃತ್ಯ, ಯೋಗ, ಸಂಗೀತ, ಭರತನಾಟ್ಯ ಇವುಗಳಲ್ಲಿ ತನ್ನದೇ ಆದಂತಹ ಚಾಪನ್ನು ಮೂಡಿಸಿದ್ದಾಳೆ. ನೃತ್ಯ ಗುರು ವಿದುಷಿ ರೇಖಾ ಜಗದೀಶ್ ಅವರ ಬಳಿ 3 ವರ್ಷಗಳಿಂದ ಭರತನಾಟ್ಯ ತರಬೇತಿ ಪಡೆದು ಸುಮಾರು 30ಕ್ಕಿಂತಲೂ ಹೆಚ್ಚಿನ ವೇದಿಕೆಯಲ್ಲಿ ನೃತ್ಯ ಪ್ರದರ್ಶನವನ್ನು ನೀಡಿ ಹಲವಾರು ಪ್ರಶಸ್ತಿ ಪತ್ರಗಳು, ಮೋಮೆಂಟೋಸ್ ಮತ್ತು ಮೆಡಲ್ ಗಳನ್ನು ಪಡೆದಿದ್ದಾಳೆ. ಟಿವಿ ಶೋಗಳಲ್ಲಿ ಭಾಗವಹಿಸಿದ್ದಾಳೆ. ಸಿರಿಗನ್ನಡ ವಾಹಿನಿಯಲ್ಲಿ ಲಿಟಲ್ ಕಿಲಾಡಿ ಶೋ ಹಾಗೂ ಉದಯ ಕಾಮಿಡಿ ಚಾನೆಲ್ ನಲ್ಲಿ ಪುಟಾಣಿ ಏಜೆಂಟ್ 123 ಭಾಗವಹಿಸಿ ಬಹುಮಾನ ಈಕೆಯದ್ದಾಗಿದೆ. ಅಷ್ಟೇ ಅಲ್ಲದೆ ಕರ್ನಾಟಕ ಎಚಿವರ್ಸ್ ಬುಕ್ ಆಫ್ ರೆಕಾರ್ಡ್ ನಲ್ಲಿ
ಕೂಡ ಸ್ಥಾನ ಪಡೆದಿದ್ದಾಳೆ. ಹಲವಾರು ನೃತ್ಯ ಕಾಂಪಿಟೇಶನ್ ಗಳಲ್ಲಿ ಭಾಗವಹಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿರುವ ಕನಸು, ಹಲವಾರು ಆನ್ಲೈನ್ ಪ್ರೋಗ್ರಾಮ್ ಗಳಲ್ಲಿ ಭಾಗವಹಿಸಿದ ಎತ್ತಿದ ಕೈ. ಜಾಕಿ ಬುಕ್ ಆಫ್ ರೆಕಾರ್ಡ್ ರವರ ವತಿಯಿಂದ ನಡೆಸಿದ ಶ್ರೀ ಕೃಷ್ಣ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಈಕೆಯದ್ದಾಗಿದೆ.
ಸುಳ್ಯ ತಾಲೂಕು ಅಮರಮುಡ್ನೂರು ಗ್ರಾಮದ ಗುರುಪ್ರಸಾದ್ ಮೇರ್ಕಜೆ ಮತ್ತು ಪ್ರಮೀಳಾ ಮೇರ್ಕಜೆ ದಂಪತಿ ಪುತ್ರಿಯಾದ ಶ್ರೇಯಾ ಮೇರ್ಕಜೆ ಸುಳ್ಯ ಎನ್ ಎಂಸಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ ಬಹುಮುಖ ಪ್ರತಿಭೆ. ಈಕೆ
ನೃತ್ಯ ಅಭಿನಯ, ಕ್ರೀಡೆ, ನಿರೂಪಣೆ, ಸಂಗೀತ, ಭರತನಾಟ್ಯಗಳಲ್ಲಿ ತನ್ನದೇ ಆದಂತಹ ಚಾಪನ್ನು ಮೂಡಿಸಿದ್ದಾಳೆ. ನೃತ್ಯ ಗುರುಗಳು ಸುಧೀರ್ ಉಳ್ಳಾಲ್ ಅವರಿಂದ ನೃತ್ಯ ತರಬೇತಿಯನ್ನು ಪಡೆದು 700ಕ್ಕಿಂತಲೂ ಹೆಚ್ಚಿನ ವೇದಿಕೆಯಲ್ಲಿ ನೃತ್ಯ ಪ್ರದರ್ಶನವನ್ನು ನೀಡಿದ ಕೀರ್ತಿ ಶ್ರೇಯಾಳದ್ದಾಗಿದೆ. ಶ್ರೇಯಾ 7 ತಿಂಗಳ ಮಗು ಇರುವಾಗಲೇ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಡೆದ ಮುದ್ದು ಕೃಷ್ಣ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಹಾಗೂ ಚಿನ್ನದ ನಾಣ್ಯ ಪಡೆದಿದ್ದಾಳೆ. ಹೀಗೆ ಈಕೆಯ ಕಲಾ ಜರ್ನಿಯು ಮುಂದುವರೆಯಿತು. ಭರತನಾಟ್ಯವನ್ನು ಗುರುಗಳಾದ ವಿಧುಷಿ ವಿದ್ಯಾಶ್ರೀ ರಾಧಾಕೃಷ್ಣ ಮಂಗಳೂರು ಇವರ ಜೊತೆ ಕಲಿಯುತಿದ್ದಾಳೆ. ಮಂಗಳೂರಿನ ರಿಯಾಲಿಟಿ ಶೋಗಳಾದ ಡಾನ್ಸ್ ಕುಡ್ಲ ಡಾನ್ಸ್, ಡಾನ್ಸ್ ಟು ಡಾನ್ಸ್ ಹಾಗೂ ಕುಡ್ಲ ಗೊಟ್ ಟ್ಯಾಲೆಂಟ್ ರಿಯಾಲಿಟಿ ಷೋಗಳಲ್ಲಿ ಪ್ರಶಸ್ತಿಯನ್ನು ಪಡೆದಿದ್ದಾಳೆ. ಜೀ ಕನ್ನಡದಲ್ಲಿ ನಡೆದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋ ನಲ್ಲೂ ನೃತ್ಯ ಪ್ರದರ್ಶನವನ್ನು ನೀಡಿದ್ದಾಳೆ. ವಾಯ್ಸ್ ಆಫ್ ಆರಾಧನಾ ಹಾಗೂ ಜನಸ್ಪಂದನ ಟ್ರಸ್ಟ್ ಸಂಸ್ಥೆಗಳ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ನೃತ್ಯ ಪ್ರದರ್ಶನವನ್ನು ನೀಡುತ್ತಿದ್ದಾಳೆ ಹಾಗೂ ವಾಯ್ಸ್ ಆಫ್ ಆರಾಧನಾ ಸಂಸ್ಥೆಯಲ್ಲಿ ಹಲವಾರು ಕಾರ್ಯಕ್ರಮಗಳಲ್ಲಿ ನಿರೂಪಣೆಯನ್ನು ಮಾಡಿ ಎಲ್ಲ ಜನರ ಮೆಚ್ಚುಗೆ ಪಡೆದ ಬಾಲಕಿ.
ಹಲವಾರು ನೃತ್ಯ ಕಾಂಪಿಟೇಶನ್ ಗಳಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆದಿದ್ದಾಳೆ. ಹಲವಾರು ಆನ್ಲೈನ್ ನೃತ್ಯ ಕಾಂಪಿಟೇಷನ್ಗಳಲ್ಲೂ ಭಾಗವಹಿಸಿ ಪ್ರಶಸ್ತಿ ಪಡೆದಿರುತಾಳೆ. ಹಲವಾರು ಕಡೆ ಫ್ಯಾಷನ್ ಶೋ ಗಳಲ್ಲೂ ಭಾಗವಹಿಸಿ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾಗಿದ್ದಾರೆ. 2 ತುಳು ಚಲನಚಿತ್ರ ಮತ್ತು ಕಿರುಚಿತ್ರ ಹಾಗೂ ಹಲವಾರು ಆಲ್ಬಮ್ ಸೊಂಗ್ ಗಳಲ್ಲಿ ನಟಿಸಿದ್ದಾಳೆ. ಕಬಡ್ಡಿಯಲ್ಲಿ ತಾಲೂಕು ಮಟ್ಟ, ರಾಜ್ಯ ಮಟ್ಟ ಹಾಗೂ ಉತ್ತರ ಪ್ರದೇಶದಲ್ಲಿ ನಡೆದ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಎಸ್ ಜಿ ಎಫ್ ಐ ಗೆ ಆಯ್ಕೆಯಾಗಿದ್ದಾಖೆ.ಈಕೆಯ ನೃತ್ಯ ಅಭಿನಯ ಕ್ರೀಡೆ ನಿರೂಪಣೆಯಲ್ಲಿ ವಿಶೇಷ ಸಾಧನೆಗಾಗಿ ಕರ್ನಾಟಕ ಸೇವಾ ರತ್ನ ಪ್ರಶಸ್ತಿ, ಕರ್ನಾಟಕ ಬಾಲರತ್ನ ಪ್ರಶಸ್ತಿ, ಕರ್ನಾಟಕ ಕಲಾಸಿರಿ ರತ್ನ ಪ್ರಶಸ್ತಿ, ಹೆಮ್ಮೆಯ ಕನ್ನಡಿಗ ಪ್ರಶಸ್ತಿ ನಾಟ್ಯ ಶಾಂತಲೆ ಪ್ರಶಸ್ತಿ, ಸೇವಾ ರತ್ನ ಪ್ರಶಸ್ತಿ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಬಹುಮುಖ ಪ್ರತಿಭಾ ರತ್ನ ಪ್ರಶಸ್ತಿ ಹಾಗೂ ಎಸ್ ಎಸ್ ಕಲಾ ಸಂಗಮ ಬೆಂಗಳೂರು ಇವರು ಇವರ ಅಪ್ರತಿಮ ಸಾಧನೆಯನ್ನು ಗುರುತಿಸಿ ಕನ್ನಡ ರಾಜ್ಯರತ್ನ ಸವಿ ನೆನಪಿಗಾಗಿ 2022 ರ ಯುವರತ್ನ ಅಪ್ಪು ಪ್ರಶಸ್ತಿ ನೀಡಿ ಗೌರವಿಸಿರುತ್ತಾರೆ. 50ಕ್ಕಿಂತಲೂ ಹೆಚ್ಚಿನ ಕಡೆಗಳಲ್ಲಿ ಸನ್ಮಾನ ಪಡೆದ ಕೀರ್ತಿ ಶ್ರೇಯಾಳದ್ದು.

ಇತ್ತೀಚಿನ ಸುದ್ದಿ

ಜಾಹೀರಾತು