6:58 PM Sunday26 - October 2025
ಬ್ರೇಕಿಂಗ್ ನ್ಯೂಸ್
ಮಾಧ್ಯಮ ಅಕಾಡೆಮಿಯಲ್ಲಿ ಟಿಜೆಎಸ್ ಜಾರ್ಜ್‌ ದತ್ತಿ ರಾಷ್ಟ್ರೀಯ ಪ್ರಶಸ್ತಿ ಸ್ಥಾಪನೆ Bangaluru | ಪಿಡಿಪಿಎಸ್‌ಯಡಿ ಈರುಳ್ಳಿ ಖರೀದಿ ಪ್ರಯತ್ನ: ಕೃಷಿ ಮಾರುಕಟ್ಟೆ ಸಚಿವ ಶಿವಾನಂದ… Bangaluru | ರಾಜ್ಯ ಸರಕಾರಕ್ಕೆ ಕೆಎಸ್ ಡಿಎಲ್ ರಿಂದ 135 ಕೋಟಿ ಡಿವಿಡೆಂಡ್… ಬೆಂಗಳೂರು ಲಾಡ್ಜ್‌ನಲ್ಲಿ ಯುವತಿ ಜತೆ ತಂಗಿದ್ದ ಯುವಕನ ಸಾವಿಗೆ ಕಿಡ್ನಿ ವೈಫಲ್ಯ ಕಾರಣ:… ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆ: ಕಡೂರು ಸಮೀಪದ ಹಡಗಲು ಗ್ರಾಮ ಅಕ್ಷರಶಃ ಜಲಾವೃತ ಕೊಡಗಿನಲ್ಲಿ ಅಸ್ಸಾಂ ಕಾರ್ಮಿಕರಿಂದ ಆಟೋ ಚಾಲಕನ ಮೇಲೆ ಹಲ್ಲೆ: ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ… ಕೊಡ್ಲಿಪೇಟೆಯಲ್ಲಿ ಉದ್ಯಮಿ ಮೇಲೆ ಲಾರಿ ಹರಿಸಿ ಕೊಲೆ ಯತ್ನ: ವಾಹನ ಬಿಟ್ಟು ಚಾಲಕ… ಪುತ್ತೂರು: ಅಕ್ರಮ ಜಾನುವಾರು ಸಾಗಾಟ; ಆರೋಪಿ ಕಾಲಿಗೆ ಪೊಲೀಸರು ಗುಂಡೇಟು; ಓರ್ವನ ಸೆರೆ,… ಹಾರಂಗಿ ಜಲಾಶಯ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ 95 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ… ಕಾರ್ಮಿಕ ಅಧಿಕಾರಿ ಸೋಗಿನಲ್ಲಿ ವಸೂಲಿಗೆ ಯತ್ನ: ಸಾರ್ವಜನಿಕರು ಎಚ್ಚರದಿಂದಿರಲು ಇಲಾಖಾ ಅಧಿಕಾರಿಗಳ ಮನವಿ

ಇತ್ತೀಚಿನ ಸುದ್ದಿ

ರಿಪೋರ್ಟರ್ ಕರ್ನಾಟಕ ವಾಯ್ಸ್ ಆಫ್ ಆರಾಧನಾ: ಅಕ್ಟೋಬರ್ ತಿಂಗಳ ವಿಜೇತರಾಗಿ ವರ್ಷಿಣಿ ಕುಲಾಲ್ ಹಾಗೂ ವೃಷಭ ರಾವ್ ಆಯ್ಕೆ

07/11/2024, 19:27

ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಅಕ್ಟೋಬರ್ ತಿಂಗಳ ಟಾಪರ್ ಆಗಿ ವರ್ಷಿಣಿ ಕುಲಾಲ್ ಹಾಗೂ ವೃಷಭ ರಾವ್
ಅವರು ಆಯ್ಕೆಯಾಗಿದ್ದಾರೆ.


ಮೂಡುಬಿದಿರೆಯ ಹರೀಶ್ ಕುಲಾಲ್ ಹಾಗೂ ಮಮತಾ ಕುಲಾಲ್ ದಂಪತಿಯ ಪುತ್ರಿ ವರ್ಷಿಣಿ ಕುಲಾಲ್ ಈಕೆ ಎಕ್ಸಲೆಂಟ್ ಸಿಬಿಎಸ್ ಇ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಕಳೆದ ಮೂರು ವರ್ಷಗಳಿಂದ ಮೂಡಬಿದ್ರಿಯ ಟ್ವಿಸ್ಟರ್ ಡಾನ್ಸ್ ಅಕಾಡೆಮಿ ಗುರುಗಳಾದ ನಿತಿನ್ ಅವರಲ್ಲಿ ನೃತ್ಯ ಕಲಿಯುತಿದ್ದಾಳೆ. ಡ್ಯಾನ್ಸ್ ನಲ್ಲಿ ಹಲವಾರು ಬಹುಮಾನಗಳನ್ನು ಪಡೆದಿದ್ದಾಳೆ. ಶಾಲಾ ಕ್ರೀಡಾ ಕೂಟದಲ್ಲಿ ಕಳೆದ ಐದು ವರ್ಷದಿಂದ ಚಾಂಪಿಯನ್ ಶಿಫ್ ಪಡೆದಿದ್ದಾಳೆ. ಏಕಾಭಿನಯ ಪಾತ್ರದಲ್ಲಿ ಭಾಗವಹಿಸಿದ್ದಾಳೆ. ಯಕ್ಷಗಾನದಲ್ಲಿ ಕೂಡ ಭಾಗವಹಿಸಿದ್ದಾಳೆ. ವಾಯ್ಸ್ ಆಫ್ ಆರಾಧನ ತಂಡದ ಮುಖಾಂತರ ಅಭಿಮತ ವಾಹಿನಿಯಲ್ಲಿ ಭಾಗವಹಿಸಿದ್ದಾಳೆ. ಶಾಲೆಯಲ್ಲಿ ಓದುವುದರಲ್ಲಿ ಜಾಣೆ. ಶಿಕ್ಷಕರ ಪ್ರೀತಿಯ ವಿದ್ಯಾರ್ಥಿನಿ.
ರಕ್ಷಿತ್ ರಾವ್ ಮತ್ತು ಅಶ್ವಿನಿ ದಂಪತಿಯ  ಪ್ರಥಮ ಪುತ್ರನಾದ ವೃಷಭ ರಾವ್ 2017ನೇ ಇಸವಿಯ ಜನವರಿ 20ರಂದು ಬೆಳ್ತಂಗಡಿಯಲ್ಲಿ ಜನಿಸಿದ್ದಾನೆ. ಪ್ರಸ್ತುತ ವೃಷಭ ಮಂಗಳೂರಿನ ಕುಲಶೇಖರದಲ್ಲಿ ನೆಲೆಸಿದ್ದು , ಮಂಗಳೂರಿನ ಲೂರ್ಡ್ಸ ಸೆಂಟ್ರಲ್ ಸ್ಕೂಲ್ ನಲ್ಲಿ ಎರಡನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ವೃಷಭ ರಾವ್ ಗೆ ಚಿಕ್ಕಂದಿನಿಂದಲೇ ವೆಸ್ಟೆರ್ನ್ ಡ್ಯಾನ್ಸ್ ಮತ್ತು ನಟನೆಯಲ್ಲಿ ತುಂಬಾ ಆಸಕ್ತಿ. ಮಗನ ನೃತ್ಯದ ನೃತ್ಯದಲ್ಲಿರುವ ಆಸಕ್ತಿ ಹಾಗೂ ಪ್ರತಿಭೆಯನ್ನುಗುರುತಿಸಿ ಹೆತ್ತವರು  ಮಂಗಳೂರಿನ ಲೇಡಿಹಿಲ್ ಬಳಿ ಇರುವ ಆರ್ಯನ್ ಡ್ಯಾನ್ಸ್ ಸ್ಟುಡಿಯೋದ ಮಾಲೀಕರಾದ ನವೀನ್ ಶೆಟ್ಟಿ ಮತ್ತು ನೃತ್ಯ ತರಬೇತುದಾರರಾದ ಲಿಖಿತ್ ರಾಜ್ ಆಳ್ವ ಅವರ ಬಳಿ ತರಬೇತಿಯನ್ನು ಪಡೆಯಲು ನೃತ್ಯ ತರಗತಿಗೆ 4ನೇ ವಯಸ್ಸಿನಲ್ಲಿ ಸೇರಿಸುತ್ತಾರೆ. ಫ್ಯಾಷನ್ ಶೋ ತರಬೇತಿಯನ್ನು ಮಂಗಳೂರಿನ ಬಳ್ಳಾಲ್ ಬಾಗ್ ನ ಪಾತ್ ವೇ  ಎಂಟರ್ ಪ್ರೈಸಸ್ ನ  ದೀಪಕ್ ಗಂಗೂಲಿ  ಅವರ ಬಳಿ ಪಡೆಯುತ್ತಿದ್ದಾನೆ.
ವೃಷಭ ರಾವ್ ಅವರು ಹಲವಾರು ನೃತ್ಯ ಸ್ಪರ್ಧೆ ಮತ್ತು ಫ್ಯಾನ್ಸಿ ಡ್ರೆಸ್ ಸ್ಪರ್ಧೆಯಲ್ಲಿ ಪಾಲ್ಗೊಂಡು ಹಲವಾರು ಬಹುಮಾನಗಳನ್ನು ಪಡೆದಿದ್ದಾನೆ. ಅದರಲ್ಲಿ ಪ್ರಮುಖವಾದದ್ದು ಈ ಕೆಳಗಿನಂತಿದೆ:
*2018  ಒಲ್ಪ ಕ್ಯಾಲೆಂಡರ್ ಕಿಡ್ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ 2019  ಡಾನ್ಸ್ ಸ್ಟಾರ್ ಅಡ್ಯಾರ್ ಪದವು  ಸಮ್ಮರ್ ಕಿಂಗ್ ವಿನ್ನರ್ * 2022 ಯುರೋ ಕಿಡ್ಸ್ ಬನ್ನಿ ಟ್ಯಾಲೆಂಟ್ ಶೋ ವಿನ್ನರ್ * 2022  ಸ್ವಚ್ಚಿ ಕಲಾ ಆರ್ಟ್ಸ್  ಮಂಗಳೂರು ಇವರು ಆಯೋಜಿಸುವ ಕೃಷ್ಣವೇಷ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ
* 2022  ರೆನಾಲ್ಟ್ ಕಾರು ಕಂಪನಿಯವರ ಮಿಡ್ ನೈಟ್ ಕಾರ್ಣಿವಲ್  ನೃತ್ಯ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ 
* 2023  ಮಂತ್ರಬಐಎಕ್ಸ್ ಇ ಫ್ಯಾಷನ್ ವಿಲ್ಲ ಇವರ ಫ್ಯಾಷನ್ ಶೋ ಸ್ಪರ್ಧೆಯಲ್ಲಿ ಕಿಂಗ್ ಆಫ್ ಮಂಗಳೂರು ರನ್ನರ್
* 2023  ದೀಪಾ ಕಂಫರ್ಟ್ ಪ್ಯಾಶನ್ ಮೇನಿಯಾ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ * 2024  ಶ್ರೀದೇವಿ ಫ್ಯಾಶನ್ ಡಿಸೈನರ್ ಕಾಲೇಜ್ ಇವರ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ
*:2024  ರೆನಾಲ್ಟ್ ಕಾರು ಕಂಪನಿಯವರ ಮಿಡ್ ನೈಟ್ ಕಾರ್ಣಿವಲ್  ನೃತ್ಯ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ
* 2024   ಸ್ವಚ್ಚಿ ಕಲಾ ಆರ್ಟ್ಸ್ , ಕೆಎಂಸಿ ಹಾಸ್ಪಿಟಲ್, ಇಸ್ಕಾನ್ ಟೆಂಪಲ್, ಫಿಜಾ ಬಾಯ್ ನೆಕ್ಸಸ್ ಮಾಲ್ ಮಂಗಳೂರು* ಇವರು
ಆಯೋಜಿಸದ 4 ಕಡೆಗಳಲ್ಲಿ* *ಕೃಷ್ಣವೇಷ ಸ್ಪರ್ಧೆಯಲ್ಲಿ  ಪ್ರಥಮ ಬಹುಮಾನ * 2024 ರೆನಾಲ್ಟ್ ಕಾರು ಕಂಪನಿ ಇಂಡಿಪೆಂಡೆನ್ಸ್ ಡೇ ನೃತ್ಯ ಹಾಗೂ ಫ್ಯಾನ್ಸಿ ಡ್ರೆಸ್ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ
* 2024 ಪದುವ ಸ್ಕೂಲ್ ಪ್ಯಾಶನ್  ಶೋ ಸ್ಪರ್ಧೆಯಲ್ಲಿ ಪ್ರಥಮ  ಬಹುಮಾನ
* ಮೊದಲನೆಯ ಬಾರಿಗೆ ತುಳುನಾಡಿನ ಪ್ರಖ್ಯಾತ ನಟ ರೂಪೇಶ್ ಶೆಟ್ಟಿ ಅವರ ಸೂಪರ್ ಹಿಟ್ ಚಲನಚಿತ್ರ  ಸರ್ಕಸ್ ನಲ್ಲಿ ಮುಖ್ಯ ಹಾಡಿಗೆ ಬ್ಯಾಗ್ರೌಂಡ್ ಡ್ಯಾನ್ಸರ್ ಆಗಿ ಕಾಣಿಸಿಕೊಂಡಿರುತ್ತಾನೆ.
* ತುಳು ಸಿನೆಮಾ ರಂಗದ ನಟ ಹಾಗೂ ನಿರ್ದೇಶಕ  ರಾಹುಲ್ ಅಮಿನ್ ನಿರ್ದೇಶನದ ” ಮಿಡಲ್ ಕ್ಲಾಸ್ ಫ್ಯಾಮಿಲಿ “ ಚಿತ್ರದಲ್ಲಿ ನಾಯಕನ ತಮ್ಮನ ಪಾತ್ರದಲ್ಲಿ ನಟನೆ.
* ಸ್ಟಾರ್ ಸುವರ್ಣ ಕನ್ನಡ ವಾಹಿನಿಯಲ್ಲಿ ರಾತ್ರಿ 9.30 ಪ್ರಸಾರಗೊಳ್ಳುತ್ತಿರುವ ಜನಪ್ರಿಯ ಧಾರಾವಾಹಿ ನೀನಾದೆ ನಾ  ಇದರಲ್ಲಿ  ನಾಯಕನ  ಬಾಲ್ಯದ ವಿಕ್ರಮ ಪಾತ್ರದಲ್ಲಿ ನಟಿಸಿ ಎಲ್ಲರ ಗಮನ ಸೆಳೆದಿದ್ದಾನೆ. 
ಪ್ರಸ್ತುತ ಪ್ರಖ್ಯಾತ ಸಿನೆಮಾ ಛಾಯಾಗ್ರಹಕ ಉದಯ ಬಲ್ಲಾಳ ಅವರ ನಿರ್ದೇಶನದಲ್ಲಿ ಕಿರುಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾನೆ.

ಇತ್ತೀಚಿನ ಸುದ್ದಿ

ಜಾಹೀರಾತು