ಇತ್ತೀಚಿನ ಸುದ್ದಿ
ರಾಷ್ಟ್ರಪತಿ ಚುನಾವಣೆಗೆ ಬಿಜೆಪಿ ನಿರ್ವಹಣಾ ತಂಡ ಪ್ರಕಟ: ರಾಜ್ಯದಿಂದ ಸಿ.ಟಿ.ರವಿಗೆ ಸ್ಥಾನ
18/06/2022, 09:39
ಹೊಸದಿಲ್ಲಿ(reporterkarnataka.com): ರಾಷ್ಟ್ರಪತಿ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ 14 ಮಂದಿ ಪ್ರಮುಖ ನಾಯಕರನ್ನ ಒಳಗೊಂಡಿರುವ ನಿರ್ವಹಣಾ ತಂಡವನ್ನ ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಕರ್ನಾಟಕದ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರಿಗೆ ಸ್ಥಾನ ನೀಡಲಾಗಿದೆ.
ಈ ನಿರ್ವಹಣಾ ತಂಡದಲ್ಲಿ ಕೇಂದ್ರ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್,ಜಿ.ಕಿಶನ್ ರೆಡ್ಡಿ,ಅಶ್ವಿನಿ ವೈಷ್ಣವ್, ಸರ್ಬಾನಂದ ಸೋನೋವಾಲ್, ಅರ್ಜುನ್ ರಾಮ್, ಮೇಘವಾಲ್ ಮತ್ತು ಭಾರತಿ ಪವಾರ್, ವಿನೋದ್ ತಾವ್ಡೆ,ತರುಣ್ ಚೌಗ್, ಡಿ.ಕೆ.ಆರುಣಾ, ಋತುರಾಜ್ ಸಿನ್ಹಾ,ವಾನತಿ ಶ್ರೀನಿವಾಸನ್, ಸಂಬಿತ್ ಪಾತ್ರಾ, ರಾಜ್‌ದೀಪ್ ರಾಯ್ ಸ್ಥಾನ ಪಡೆದಿದ್ದಾರೆ.
ಅಂದ್ಹಾಗೆ, ಜುಲೈ 18ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು,ಜುಲೈ 21ರಂದು ಮತ ಎಣಿಕೆ ನಡೆಯಲಿದೆ.