12:23 PM Saturday18 - January 2025
ಬ್ರೇಕಿಂಗ್ ನ್ಯೂಸ್
ರಸ್ತೆ ಅಪಘಾತದಲ್ಲಿ ಮೃತಪಟ್ಟ ಕೋತಿಗೆ ಗ್ರಾಪಂ ಮಾಜಿ ಅಧ್ಯಕ್ಷರಿಂದ ಅಂತ್ಯ ಸಂಸ್ಕಾರ: ರಾತ್ರಿ… ಜಾತಿಗಣತಿ ವರದಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡನೆ: ಮಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ… ಸಂಭ್ರಮ- ಸಡಗರಕ್ಕೆ ಸಾಕ್ಷಿಯಾದ ಕಡಲನಗರಿಯ ಮಂಗಳಾ ಕ್ರೀಡಾಂಗಣ: 4500 ಕ್ರೀಡಾಪಟುಗಳ ಪಾದಸ್ಪರ್ಶ ಎಷ್ಟಾದರೂ ಹಣ-ಸವಲತ್ತು ಕೇಳಿ ಕೊಡ್ತೀನಿ, ಆದರೆ ಒಲಂಪಿಕ್ ಮೆಡಲ್ ತನ್ನಿ: ಮಂಗಳೂರಿನಲ್ಲಿ ಸಿಎಂ… ಮಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಪ್ರಾದೇಶಿಕ ಕಚೇರಿಗೆ ಸಿಎಂ ಸಿದ್ದರಾಮಯ್ಯ… ಮಂಗಳೂರಿಗೆ ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ: ರಾಜೀವ್ ಗಾಂಧಿ ವಿವಿ ಪ್ರಾದೇಶಿಕ ಕೇಂದ್ರಕ್ಕೆ ಶಿಲಾನ್ಯಾಸ ಕುರ್ಚಿಗಾಗಿ ಕಾದಾಟದಲ್ಲೇ ಎಲ್ಲರೂ ಮಗ್ನ, ಜನರ ಪಾಲಿಗೆ ಸರ್ಕಾರದ ನೆರವು ಮರೀಚಿಕೆ: ಪ್ರತಿಪಕ್ಷ… ಕೆಎಎಸ್‌ ಪೂರ್ವಭಾವಿ ಮರುಪರೀಕ್ಷೆಯ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್… ಬಾಲಿವುಡ್ ನಟ ಸೈಫ್ ಅಲಿಖಾನ್ ಗೆ 6 ಬಾರಿ ಚಾಕು ಇರಿತ: ಮುಂಜಾನೆ… ಗರೋಡಿ ಜಾತ್ರೆಗೂ ಊರವರಿಗೆ ನೀರಿಲ್ಲ!: 5 ದಿನಗಳಿಂದ ನೋ ವಾಟರ್!!; ಮೇಯರ್ ಅವರೇ…

ಇತ್ತೀಚಿನ ಸುದ್ದಿ

ರಸ್ತೆ ಅಪಘಾತದಲ್ಲಿ ಮೃತಪಟ್ಟ ಕೋತಿಗೆ ಗ್ರಾಪಂ ಮಾಜಿ ಅಧ್ಯಕ್ಷರಿಂದ ಅಂತ್ಯ ಸಂಸ್ಕಾರ: ರಾತ್ರಿ ವೇಳೆ ಸ್ವತಃ ತಾನೇ ಗುಂಡಿ ತೋಡಿದ ಮಧುರಾಜ್ ಹೆಗಡೆ

18/01/2025, 12:23

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ

info.reporterkarnataka@gmail.com

ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಕೋತಿಯ ಮೃತದೇಹಕ್ಕೆ ತೂದೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರೊಬ್ಬರು ರಾತ್ರಿ ವೇಳೆ ಸ್ವತಃ ತಾನೇ ಗುಂಡಿ ತೋಡಿ ಅಂತ್ಯಸಂಸ್ಕಾರ ನಡೆಸಿದ ಮಾನವೀಯ ಘಟನೆಗೆ ತೀರ್ಥಹಳ್ಳಿ ತಾಲೂಕು ಸಾಕ್ಷಿಯಾಗಿದೆ.
ತಾಲೂಕಿನ ನೆರಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಗರ ಕೋಣಂದೂರು ರಸ್ತೆಯ ಸಂಕದಹೊಳೆ ಸುರಾನಿ ಸೇತುವೆ ಬಳಿ ರಸ್ತೆಯಲ್ಲಿ ಮಂಗವೊಂದು ಯಾವುದೋ ಅಪರಿಚಿತ ವಾಹನಕ್ಕೆ ತಾಗಿ ರಸ್ತೆ ಮಧ್ಯೆ ಜೀವಬಿಟ್ಟಿತ್ತು. ಇದೆ ರಸ್ತೆಯ ಮಾರ್ಗವಾಗಿ ಕೆಲಸ ನಿಮಿತ್ತ ಸಾಗುತ್ತಿದ್ದ ತೂದೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಮಧುರಾಜ್ ಹೆಗಡೆ ಇದನ್ನು ಗಮನಿಸಿ ಯಾವುದಾದರೂ ವಾಹನ ಇದರ ಮೇಲೆ ಸಂಚರಿಸಿದರೆ ತೊಂದರೆ ಆಗುತ್ತದೆ ಎಂದು ತಿಳಿದು ತಕ್ಷಣ ಆ ಸಾವಿಗೀಡಾದ ಮಂಗನನ್ನು ಎತ್ತಿ ಬದಿಗೆ ತರಲು ಮುಂದಾದಾಗ ಇದನ್ನು ನೋಡಿದ ಹತ್ತು ಹನ್ನೆರಡು ಮಂಗನ ಸೈನ್ಯ ಇವರ ಮೇಲೆ ಏರಗಿದೆ ಇದು ಆಗದೆ ಇರುವ ಕೆಲಸ ಎಂದು ತಿಳಿದ ಮಧುರಾಜ್ ಹೆಗಡೆ ಅಲ್ಲೇ ರಸ್ತೆ ಪಕ್ಕದಲ್ಲಿ ಮಂಗನ ಕಳೆಬರಹ ಇಟ್ಟು ತಮ್ಮ ಕೆಲಸಕ್ಕೆ ಪ್ರಯಾಣ ಬೆಳೆಸಿದರು. ಆದರೆ ಅವರ ಮನಸ್ಸು ರಸ್ತೆಯಲ್ಲಿ ಅಪಘಾತ ಸಂಭವಿಸಿ ನಿಧನವಾದ ಮಂಗನ ಕಡೆಯೇ ಇತ್ತು ಎನ್ನಲಾಗಿದೆ. ನಂತರ ಅದೆ ಮಾರ್ಗದಲ್ಲಿ ವಾಪಸ್ ಬರುವಾಗ ಅದರ ಕಳೆ ಬರಹ ಇರುವುದನ್ನು ಗಮನಿಸಿದ ಅವರು ರಾತ್ರಿಯ ಸಮಯ ಎಂದು ಲೆಕ್ಕಿಸದೆ ತಕ್ಷಣ ತಮ್ಮ ಸ್ನೇಹಿತರಾದ ಸಂಕದಹೊಳೆ ನಾಗರಾಜ್ ಶೆಟ್ಟರ ಮಗ ಶಿಶಿರ ರವರಿಗೆ ಫೋನ್ ಮುಖಾಂತರ ಸಂಪರ್ಕಿಸಿ ಒಂದು ಗುದ್ದಲಿ ಮತ್ತು ಹೊಸ ಬಟ್ಟೆ ತರಿಸಿಕೊಂಡಿದ್ದಾರೆ.


ನಂತರ ಆಂಜನೇಯನಿಗೆ ಮುಕ್ತಿ ನೀಡುವುದು ಎಂದು ಮನದಲ್ಲೇ ಭಾವಿಸಿ, ಸಾವನ್ನಪ್ಪಿದ ಮಂಗನಿಗೆ ರಸ್ತೆಯ ಪಕ್ಕದಲ್ಲಿ ಸ್ವತಃ ಇವರೇ ಇಬ್ಬರು ತಮ್ಮ ವಾಹನದ ಬೆಳಕಿನಲ್ಲಿ ಗುದ್ದಲಿಯಿಂದ ಹೊಂಡ ಹೊಡೆದು ಆಂಜನೇಯನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಮೃತಪಟ್ಟ ಮಂಗನಿಗೆ ಹೊಸಬಟ್ಟೆ ಹಾಕಿ ಆ ರಾತ್ರಿ ಸಮಯದಲ್ಲೂ ಕೂಡ ಮಂಗನ ಅಂತ್ಯಸಂಸ್ಕಾರ ಮಾಡಿದ್ದು ಸಾವನ್ನಪ್ಪಿದ ಮಂಗನಿಗೆ ಅರ್ಥಪೂರ್ಣ ವಿದಾಯ ಹೇಳಿದರು.
ಮಲೆನಾಡಿನ ಈ ಬೇಸಿಗೆ ಸಮಯದಲ್ಲಿ ಮಂಗನ ಕಾಯಿಲೆಗೆ (ಕೆಎಫ್ ಡಿ) ಜನ ಭಯಭೀತರಾಗಿ ಮೃತ ಮಂಗನ ನೋಡಿದ ಜನರು ಮಂಗ ಅನಾರೋಗ್ಯದಿಂದಾಗಿ ಅಥವಾ ಅಪಘಾತದಲ್ಲಿ ಜೀವಬಿಟ್ಟಿದೆ. ಅಚ್ಚರಿ ಎಂಬಂತೆ ಮಂಗ ಜೀವ ಬಿಟ್ಟ ಜಾಗದಲ್ಲಿಯೇ ದೂರದಿಂದ ನೋಡಿ ಅದನ್ನು ಅಲ್ಲೇ ಬಿಟ್ಟು ತಮಗೆ ಗೊತ್ತೆ ಇಲ್ಲ ಎಂಬಂತೆ ಸುಮ್ಮನಾಗುತ್ತಾರೆ. ಅಥವಾ ಬೇರೆ ಯಾರಿಗಾದರು ಮಂಗನ ಮೃತಪಟ್ಟ ಘಟನೆ ತಿಳಿಸಿ ಅಥವಾ ಸ್ಥಳೀಯ ಗ್ರಾಮ ಪಂಚಾಯಿತಿಗೆ ಫೋನ್ ಮೂಲಕ ತಿಳಿಸಿ ತಮ್ಮ ಪಾಡಿಗೆ ಪ್ರಯಾಣ ಬೆಳೆಸಿ ಮುಂದಾಗುತ್ತಾರೆ. ಅಂಥವರ ಮಧ್ಯೆ ಮಧುರಾಜ್ ಹೆಗಡೆ ಮತ್ತು ಶಿಶಿರ ಇವರೇ ಇಬ್ಬರು ರಾತ್ರಿಯಾದರೂ ಬಿಡದೆ ತಾವು ಮಾಡುವ ಕೆಲಸ ಪುಣ್ಯದ ಕೆಲಸ ಎಂದು ತಿಳಿದು ಆಂಜನೇಯನ ಸ್ವರೂಪಿಯಾದ ಮೃತ ಮಂಗನಿಗೆ ಅರ್ಥಪೂರ್ಣ ವಿದಾಯ ಹೇಳಿ ಮೃತಪಟ್ಟ ಮಂಗನ ಅಂತ್ಯಸಂಸ್ಕಾರ ಶಾಸ್ತ್ರೋಕ್ತವಾಗಿ ನೆವರವೇರಿಸಿ ತಮ್ಮ ಭಕ್ತಿ ಮತ್ತು ಮಾನವೀಯತೆ ಮೆರೆದಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು