3:29 AM Monday25 - November 2024
ಬ್ರೇಕಿಂಗ್ ನ್ಯೂಸ್
ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ… ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣಗೆ ಜಯ: ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಮುಖಭಂಗ ​ ಮಹಾರಾಷ್ಟ್ರ: ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ? ಆರೆಸ್ಸೆಸ್ ಮುಖ್ಯಸ್ಥ ಡಾ. ಭಾಗವತ್ ಡಿ. 7ರಂದು ಕಲ್ಲಡ್ಕಕ್ಕೆ: ಶ್ರೀರಾಮ ವಿದ್ಯಾಕೇಂದ್ರ ಕ್ರೀಡೋತ್ಸವದಲ್ಲಿ… ಬೆಂಗಳೂರು ಮತ್ತು ಚೆನ್ನೈಗೆ ಆಸ್ಟ್ರೇಲಿಯನ್ ಡಿಜಿಟೆಕ್ ಟ್ರೇಡ್ ಮಿಷನ್ ಭೇಟಿ ವೈಜ್ಞಾನಿಕತೆ, ವೈಚಾರಿಕತೆ ಇಲ್ಲದ ಶಿಕ್ಷಣದಿಂದ ಮಾನವೀಯ ಮೌಲ್ಯ ಬೆಳೆಸಿಕೊಳ್ಳಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ ನೀರು ಹರಿಸುವ ನಿರ್ಣಯದಿಂದ ನಮ್ಮ ಭಾಗದ ರೈತರಿಗೆ ಅನ್ಯಾಯ: ಮಾಜಿ ಸಚಿವ ನರಸಿಂಹ…

ಇತ್ತೀಚಿನ ಸುದ್ದಿ

​ರಾಜಕೀಯ ಹಸ್ತಕ್ಷೇಪ: ಶ್ರೀಕ್ಷೇತ್ರ ತಲಕಾವೇರಿ ಮತ್ತು ಭಗಂಡೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿಗೆ ಹೈಕೋರ್ಟ್ ತಡೆಯಾಜ್ಞೆ

27/02/2022, 09:56

ರಂಜಿನಿ ಕುಟ್ಟಪ್ಪ ಮಡಿಕೇರಿ

info.reporterkarnataka@gmail.com

​ರಾಜಕೀಯ ಹಸ್ತಕ್ಷೇಪದ ಹಿನ್ನೆಲೆಯಲ್ಲಿ  ಶ್ರೀಕ್ಷೇತ್ರ ತಲಕಾವೇರಿ ಮತ್ತು ಭಗಂಡೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿಗೆ ರಾಜ್ಯ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಶ್ರೀಕ್ಷೇತ್ರ ಕಾವೇರಮ್ಮ ಮತ್ತು ಭಗಂಡೇಶ್ವರ ದೇವಾಲಯ ಪುರಾಣ ಪ್ರಸಿದ್ಧ ದೇವಾಲಯವಾಗಿದ್ದು, ಧಾರ್ಮಿಕ ದತ್ತಿ ನಿಧಿಯ ನಿಯಮಾವಳಿಗೆ ಒಳಪಡುತ್ತದೆ. ಈ ನಿಟ್ಟಿನಲ್ಲಿ​ ​2021 ಫೆಬ್ರವರಿ ತಿಂಗಳಲ್ಲಿ​ ದೇವಾಲಯದ ವ್ಯವಸ್ಥಾಪನಾ ಸಮಿತಿಗೆ​ ​ ಅರ್ಜಿಯನ್ನು ​ ಕರೆಯಲಾಗಿತ್ತು. ಅದರಂತೆ 63 ಆಕಾಂಕ್ಷಿಗಳು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಅರ್ಜಿಯನ್ನು ಸಲ್ಲಿಸಿ​ದ್ದರು . ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಆಯ್ಕೆಯು ವ್ಯಕ್ತಿಯ ಹಿನ್ನೆಲೆ , ಪೊಲೀಸ್ ಪರಿಶೀಲನೆ ಮತ್ತು  ಧಾರ್ಮಿಕ ದತ್ತಿ ವಿಧಿಯ ನಿಯಮಾವಳಿಯಂತೆ ಆಯ್ಕೆ ಮಾಡಲಾಗುವುದು. ಆದರೆ ವಿರಾಜಪೇಟೆ ಕ್ಷೇತ್ರದ ಎಂಎಲ್ಎ ಕೆ​ ​ಜಿ ಬೋಪಯ್ಯನವರು 2021 ಜೂನ್ ತಿಂಗಳಲ್ಲಿ ತಮ್ಮ ಆಯ್ಕೆಯ, ತಮ್ಮದೇ ಜನಾಂಗದವರ ಹೆಸರು ಸೇರಿದಂತೆ ಧಾರ್ಮಿಕ ದತ್ತಿ ನಿಧಿಯ ನಿಯಮಾವಳಿಯನ್ನು ಉಲ್ಲಂಘಿಸಿ ಮತ್ತು ತಮ್ಮ ಅಧಿಕಾರದ ದುರುಪಯೋಗವನ್ನು ಬಳಸಿಕೊಂಡು 9 ಸದಸ್ಯರ ಹೆಸರನ್ನು ನಾಮನಿರ್ದೇಶನ ಮಾಡಿ ಶಿಫಾರಸು ಪತ್ರವನ್ನು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ನೀಡಿದ್ದರು. ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಉಳಿದ ಸಲಹಾ ಸಮಿತಿ ಆಕಾಂಕ್ಷಿಗಳ ಹಿನ್ನಲೆಯನ್ನು ಧಾರ್ಮಿಕ ದತ್ತಿ ನಿಧಿಯ ನಿಯಮಾವಳಿಗೆ ಅನ್ವಯದಂತೆ  ಪರಿಶೀಲನೆ​ ​ನಡೆಸಿದ್ದರು. ಇದು ಹೀಗಿರುವಾಗ, ಕೆ​ ​ಜಿ ಬೋಪಯ್ಯನವರ ಹೆಸರಿನ ಶಿಫಾರಸು ಪತ್ರದಂತೆ​,​ ಈ ವರ್ಷ ​ ಅಂದರೆ 2022 ​ಫೆಬ್ರವರಿಯಲ್ಲಿ ​ಇಂದಿನ ಬಿಜೆಪಿ ಸರಕಾರ ​9 ಸದಸ್ಯರ​ನ್ನು ​ ಆಯ್ಕೆ ಮಾಡಲಾಗಿದೆ. ​ ಇದು ರಾಜಕೀಯ ಪ್ರೇರಿತ ಮತ್ತು ಜಾತಿ ಆಧಾರಿತ ಆಯ್ಕೆ ​ಎಂಬುದು ಪಾರದರ್ಶಕವಾಗಿದೆ.  ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಕೆ. ಜಿ. ಬೋಪಯ್ಯನವರಿಗೆ ದೇವಸ್ಥಾನದ ವ್ಯವಸ್ಥಾಪನ ಸಮಿತಿಯಲ್ಲಿ ಹಸ್ತಕ್ಷೇಪ ಮಾಡುವ ಯಾವುದೇ ಅಧಿಕಾರ ಇರುವುದಿಲ್ಲ. ಈ ಆಯ್ಕೆ ಸಂಪೂರ್ಣ ಧಾರ್ಮಿಕ ದತ್ತಿನಿಧಿಗೆ ಒಳಪಡುತ್ತದೆ. ಕೆ​ ​ಜಿ ಬೋಪಯ್ಯನವ​ರು ತಮ್ಮ ​  ಕ್ಷೇತ್ರದ ಅಭಿವೃದ್ಧಿಯ ಯೋಚನೆಯ​ನ್ನು ​ ಮಾಡದೇ ​ಕೇವಲ ತಮ್ಮ ಜನಾಂಗದ ಅಭಿವೃದ್ದಿಯನ್ನು ಮಾತ್ರ ಮಾಡುತ್ತಿದ್ದಾರೆ.  ​ಬೇಡದ ​ವಿಚಾರದಲ್ಲಿ ಮೂಗು ​ತೂರಿಸುವುದು  ನಿಜವಾಗಿಯೂ ಖಂಡನೀಯ.​  ಅವರು ನೀಡಿದ ​​​​ಶಿಫಾರ​ಸ್ಸು  ಪತ್ರದಲ್ಲಿ ಓರ್ವ ಸದಸ್ಯರು ಬ್ರಾಹ್ಮಣ ಕುಲದ​​ವರಾಗಿದ್ದು, ​ಅವರು ಪೌರೋಹಿತ್ಯವನ್ನು ಮಾಡುತ್ತಿಲ್ಲ . ಧಾರ್ಮಿಕ ದತ್ತಿ ನಿಧಿಯ ನಿಯಮಾವಳಿಯ ಪ್ರಕಾರ ಬ್ರಾಹ್ಮಣರು ಆಯ್ಕೆ ಮಾಡಿಕೊಳ್ಳಬೇಕೆಂದರೆ ಅವರು ಯಾವುದಾದರೂ ಎರಡು ದೇವಸ್ಥಾನದಲ್ಲಿ ಪೌರೋಹಿತ್ಯ ನಡೆಸಿಕೊಂಡು ಬರುತ್ತಿರಬೇಕು. ​ ಅದು ಅಲ್ಲದೆ ಭೂ ಮಾಫಿಯಾಕ್ಕೆ ಒಳಪಟ್ಟ ವ್ಯಕ್ತಿ​​ಯು ಈ ​​ಶಿಫಾರ​ಸ್ಸು   ​ಪತ್ರದಲ್ಲಿ ನಾಮನಿರ್ದೇಶನ ಮಾಡಿದ್ದು , ಈಗ  ಆಯ್ಕೆಯ ಪಟ್ಟಿಯಲ್ಲಿ  ಸ್ಥಾನ ಪಡೆದಿರುತ್ತಾರೆ. ಶ್ರೀಕ್ಷೇತ್ರದ ದೇವಸ್ಥಾನಕ್ಕೆ ಸಂಬಂಧಪಟ್ಟ ಭೂಕಬಳಿಕೆಯ ಹೆಸರಿನಲ್ಲಿ ಅವರ ಹೆಸರು ​ಪ್ರಖ್ಯಾತವಾಗಿದ್ದು, ಈ ಬಗ್ಗೆ ಪೊಲೀಸು ಕೇಸು ಕೂಡ ದಾಖಲಾಗಿದೆ.  ​ಉಳಿದ ಸದಸ್ಯರಲ್ಲಿ ಇಬ್ಬರು ಕೊಡವರಾಗಿದ್ದು ​, ಒಬ್ಬರು ಪರಿಶಿಷ್ಟ ಪಂಗಡದವರಾಗಿದ್ದು, ಗರಿಷ್ಟ ಸದಸ್ಯರು ​ಅರೆಭಾಷೆ ಸಮುದಾಯಕ್ಕೆ ಸಂಬಂಧಪಟ್ಟವರಾಗಿದ್ದಾರೆ.   ಇಂಥ ವ್ಯಕ್ತಿಗಳನ್ನು ​​ಶಿಫಾರಸ್ಸು   ಮಾಡಿರುವ ಕೆಜಿ ಬೋಪಯ್ಯನವರ ಮನಸ್ಥಿತಿ ಮತ್ತು ಅವರ ನಡೆಯು ಪ್ರಶ್ನಾರ್ಹವಾಗಿ​ದ್ದು, ಅವರು ಅಧಿಕಾರದ ದುರ್ಬಳಕೆ ​ಮಾಡಿರುತ್ತಾರೆ. ​​ ಕೊಡವರನ್ನು ಅವರ ಕುಲದೇವಿಯ ಸ್ಥಾನದಿಂದ ದೂರ ಉಳಿಸುವ ಹುನ್ನಾರವಿದು . 

ಈ ಪಟ್ಟಿಯಲ್ಲಿ ​ಕೊಡವರನ್ನು ​​ಕೊಡವರ ಕುಲದೇವಿಯ ಆರಾಧನೆಗೆ ತಡೆಯಲು ಈ ಹಿಂದೆ ಪತ್ರಿಕಾ ಹೇಳಿಕೆಯನ್ನು ನೀಡಿದವರು ಸೇರಿರುತ್ತಾರೆ. ಹಲವಾರು ಗೊಂದಲಗಳ ನಡುವೆ ಕೋವಿಡ್ ನಿಯಮಾವಳಿ ದಕ್ಷಿಣ​ ​ಭಾರತದಲ್ಲಿ ಇಲ್ಲದಿದ್ದರೂ ​​ಕೊಡವರ  ಕುಲದೇವಿಯನ್ನು ತುಲಾ ಸಂಕ್ರಮಣದಂದು ಭಕ್ತರನ್ನು ತಡೆದು ಅವಮಾನ ಮಾಡಿದ ಪ್ರಕರಣ ಇನ್ನೂ ಜೀವಂತವಾಗಿದೆ. ಎಲ್ಲದರ ಹಿಂದೆ ಕಾಣದ ಕೈವಾಡ ರಾಜಕೀಯ ಸೇರಿದ್ದು ​, ​ಈಗ ಸದಸ್ಯರ ಆಯ್ಕೆಯ ಪಟ್ಟಿಯಲ್ಲಿ ಕೂಡ ರಾಜಕೀಯ ​ಸೇರಿಕೊಂಡಿದೆ.   ಧಾರ್ಮಿಕ ಕ್ಷೇತ್ರದ ​ವ್ಯವಸ್ಥಾಪನ ಸಮಿತಿಯ ಆಯ್ಕೆಯಲ್ಲಿ   ರಾಜಕೀಯ ವ್ಯಕ್ತಿಗೆ ಯಾವುದೇ ಸಂಬಂಧವಿರುವುದಿಲ್ಲ. ಆದರೂ ಇಲ್ಲಿ ​​ ಕೆ​ ​ಜಿ ಬೋಪಯ್ಯನವರು   ಹಸ್ತಕ್ಷೇಪ ​ ​ಮಾಡಿರುವುದು  ತಮ್ಮ ಅಧಿಕಾರದ ದುರುಪಯೋಗ ಮತ್ತು ಕೊಡವರನ್ನು ಒಕ್ಕಲೆಬ್ಬಿಸುವ ಕಾರ್ಯ​ವಾಗಿದೆ.  ಕೊಡವರು ಹುಟ್ಟಿದಾಗ ಕಾವೇರಮ್ಮನ ತೀರ್ಥವನ್ನು ಸೇವಿಸಿ, ಪೂಜಿಸಿ, ಆರಾಧಿಸಿ ಬೆಳೆಯುತ್ತಾರೆ. ಸತ್ತಾಗ ತೀರ್ಥ ಸೇವಿಸಿ ಮೋಕ್ಷ ಪಡೆಯುತ್ತಾರೆ. ಇದು ಈ ಆಕಾಶ , ಭೂಮಿ, ಸೂರ್ಯ ಚಂದ್ರರಷ್ಟೇ ಸತ್ಯ. ಪುರಾಣ ಕಾಲದ ತಾಯಿಯ ಆರಾಧನೆ ಮತ್ತು ಕುಲದೇವಿಯಾಗಿ ಪೂಜಿಪ ಕೊಡವರ ಮೇಲೆ ದಬ್ಬಾಳಿಕೆಯ ಕಾರ್ಯ ನಡೆಯುತ್ತಿದೆ. ಕೊಡವರ ನಾಗರೀಕತೆಯ ಉಗಮ ಕಾವೇರಮ್ಮನ ನದಿತೀರದಲ್ಲಿ ನಡೆದಿದೆ. ಇದಕ್ಕೆ ಬೇಕಾದಷ್ಟು ಸಾಕ್ಷಿಗಳು ಜೀವಂತವಾಗಿದೆ. ರಾಜರ ಆಳ್ವಿಕೆಯ ಕಾಲಕ್ಕೂ ಮುನ್ನ ಈ ಕ್ಷೇತ್ರದಲ್ಲಿ ಕೊಡವರ ಮತ್ತು ಅಮ್ಮ ಕೊಡವರ ಪೂಜೆ, ಆರಾಧನೆ ನಡೆಯುತ್ತಿತ್ತು ಎಂಬ ಇತಿಹಾಸವೂ ಜೀವಂತವಾಗಿದೆ. ಹೀಗಿರುವಾಗ ವಲಸಿಗರು ಬಂದು ನೆಲೆಸಿ, ಅವರು ಈ ಸ್ಥಳದಲ್ಲಿ ಜೀವಿಸುತ್ತಿದ್ದಾರೆ ಎಂದ ಮಾತ್ರಕ್ಕೆ ಕಾವೇರಮ್ಮ ಅವರ ಕುಲದೇವಿ ಆಗುವುದಿಲ್ಲ. ಅವಳ ಆರಾಧನೆ, ಪೂಜೆಯ ಹಕ್ಕು ಸಂಪೂರ್ಣ ಕೊಡವರಿಗೆ ಸಲ್ಲಬೇಕಾಗುತ್ತದೆ . 

ಈಗಿನ  ​ಆಯ್ಕೆಯ ​ಸಮಿತಿಯಲ್ಲಿ  ಕಳಂಕಿತರ ಹೆಸರು  ಇರುವುದು ಇಲ್ಲಿ ಗಮನಾರ್ಹ. ದೇವಾಲಯಕ್ಕೆ ಭಕ್ತಿಯಿಂದ ಮೀಸಲಾಗಿರುವ ಧಾರ್ಮಿಕ ಸ್ತ‌ತ್ತನ್ನು ಪುಣ್ಯಕ್ಷೇತ್ರದ ಮಹಿಮೆಯನ್ನು ಅರಿಯದೆ ಸುತ್ತಮುತ್ತಲಿನ ಪ್ರದೇಶಗಳನ್ನು ಆಕ್ರಮಿಸಿಕೊಂಡಿರುವ ಭೂ ಕಳ್ಳರು ಕೂಡ ಸ್ಥಾನವನ್ನು ಗಿಟ್ಟಿಸಿಕೊಂಡಿರುವುದು ಕಾವೇರಿ ಮಾತೆಯ ಪಾದದಡಿಯಲ್ಲಿ ನಡೆಯುತ್ತಿರುವಂತಹ ​ಅಪಚಾರ. ಈ ಕ್ಷೇತ್ರದಲ್ಲಿ ಯಾರೂ ಸರ್ವಾಧಿಕಾರಿಗಳಲ್ಲ. ಹಾಗೆ ಬಂದವರನ್ನು ಆ ತಾಯಿಯೂ ಕ್ಷಮಿಸುವುದಿಲ್ಲ. ನಾವು ನೈಜ ಭಕ್ತರಾಗಿ, ತಾಯಿಯ ಕ್ಷೇತ್ರದಲ್ಲಿ ನೈಜ ಭಕ್ತರಿಗೆ ಮತ್ತು ಕುಲದವರಿಗೆ ಅನ್ಯಾಯವಾಗುವುದನ್ನು ಸಹಿಸುವುದಿಲ್ಲ . ಈ ನಿಟ್ಟಿನಲ್ಲಿ ಉಚ್ಚ ನ್ಯಾಯಾಲಯದ ತಡೆಯಾಜ್ಞೆ ಬಂದಿರುತ್ತದೆ. ಆಯ್ಕೆಯಾದ ಸದಸ್ಯರಿಗೆ ನೋಟೀಸು ಜಾರಿಯಾಗಿರುತ್ತದೆ. ಇದನ್ನು ತುಂಬು ಹೃದಯದಿಂದ ಸ್ವಾಗತಿಸುತ್ತೇವೆ. ಮುಂದೆ ಕಾನೂನಿನ ಅಡಿಯಲ್ಲಿ ಹೋರಾಟವನ್ನೂ ಮಾಡುತ್ತೇವೆ. ನ್ಯಾಯಪರವಾದ ಹೋರಾಟ ಮತ್ತು ಬೇಡಿಕೆಯನ್ನು ನಾನು ನ್ಯಾಯಾಲಯದ ಮುಂದಿಟ್ಟಿದ್ದೇವೆ. ಖಂಡಿತವಾಗಿ ಗೆಲುವು ನಮ್ಮ ಕಡೆಗಿರುತ್ತದೆ. ಇದು ಕಾವೇರಮ್ಮ  ತಾಯಿಯ ಸತ್ಯದ ಉಳಿವು. 

ಪತ್ರಿಕೆಗೋಷ್ಠಿಯಲ್ಲಿ ವ್ಯವಸ್ಥಾಪನಾ ಸಮಿತಿಗೆ ಅರ್ಜಿ ಸಲ್ಲಿಸಿದ ಕೊಕ್ಕಲೆರಾ ಶ್ಯಾಮ್ ತಿಮ್ಮಯ್ಯ, ಅಜ್ಜಿಕುಟ್ಟೀರಾ ಸುಬ್ಬಯ್ಯ, ಅಪ್ಪಚೀರ ಕಮಲಾ, ಶಾಂತೆಯಂಡ ನಿರನ್ ನಾಚಪ್ಪ ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು