4:11 AM Thursday9 - April 2026
ಬ್ರೇಕಿಂಗ್ ನ್ಯೂಸ್
ಫೇಲಾದವರಿಗೆ ಇನ್ನೊಂದು ಚಾನ್ಸ್: ದ್ವಿತೀಯ ಪಿಯುಸಿ ಪರೀಕ್ಷೆ-2 ದಿನಾಂಕ ಪ್ರಕಟ Suratkal | ಅಮಾನತುಗೊಂಡಿದ್ದ ಎನ್‌ಐಟಿಕೆ ಕುಲಸಚಿವ ರವೀಂದ್ರನಾಥ್ ಸೇವೆಯಿಂದ ವಜಾ ಪತಿಯ ಶವದ ಜತೆ 10 ದಿನ ಕಳೆದ ಪತ್ನಿ: ಮಲೆನಾಡು ಚಿಕ್ಕಮಗಳೂರಿನಲ್ಲಿ ವಿಚಿತ್ರ… ಕಾಂಗ್ರೆಸ್‌ನಿಂದ ಕೋಟ್ಯಂತರ ರೂಪಾಯಿ ಹಣ ಹಂಚಿಕೆ: ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಆರೋಪ ಅಮ್ಮನ ಸಾವಿನ ದುಃಖದಲ್ಲೂ ಛಲ ಬಿಡದೆ ಪರೀಕ್ಷೆ ಬರೆದ ದಿಶಾ ಸ್ಟೇಟ್ ಗೆ… ದಾವಣಗೆರೆ ದಕ್ಷಿಣ: ಮತಗಟ್ಟೆ ಬಳಿ ಟೇಬಲ್ ವಿಚಾರವಾಗಿ ಕಾಂಗ್ರೆಸ್-ಎಸ್ ಡಿಪಿಐ ಕಾರ್ಯಕರ್ತರ ಜಟಾಪಟಿ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪ ಚುನಾವಣೆ: ಬಹುತೇಕ ಶಾಂತಿಯುತ ಮತದಾನ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: 60 ಎಕರೆ ಅರಣ್ಯ ಪ್ರದೇಶ… ಎಲ್ಲ ಕಡೆ ಸಿದ್ದರಾಮಯ್ಯ ಬೇಕು ಎಂಬ ಬೇಡಿಕೆಯಿದೆ; ಕುಮಾರಸ್ವಾಮಿನಾ ಯಾರು ಎಂದು ಕೇಳ್ತಾರೆ:… ರಾಜ್ಯದಲ್ಲಿ ಬ್ಯಾನ್​​ ಆಗುತ್ತಾ ಸೋಲೋ ಟ್ರೆಕ್ಕಿಂಗ್?: ಅನುಭವವಿದ್ದರೂ ಅಪಾಯ ಫಿಕ್ಸ್​​; ಯಾಕೆ ಗೊತ್ತಾ?

ಇತ್ತೀಚಿನ ಸುದ್ದಿ

ರಾಜ್ಯದ ಹಲವೆಡೆ ಆರ್ ಟಿಒ ಚೆಕ್ ಪೋಸ್ಟ್ ಮೇಲೆ ಲೋಕಾಯುಕ್ತ ದಾಳಿ: ಹಲವು ಅಧಿಕಾರಿಗಳು  ಬಲೆಗೆ?

30/09/2022, 12:27

ಬೆಂಗಳೂರು(reporterkarnataka.com): ಲೋಕಾಯುಕ್ತ ಅಧಿಕಾರಿಗಳ ತಂಡ ರಾಜ್ಯದ ಹಲವೆಡೆ ಚೆಕ್ ಪೋಸ್ಟ್ ಗಳ ಮೇಲೆ ಏಕಕಾಲದಲ್ಲಿ ಇಂದು ಧಿಡೀರ್ ದಾಳಿ ನಡೆಸಿದ್ದು, ಬೆಳ್ಳಂಬೆಳಗ್ಗೆ ಸಾರಿಗೆ ಇಲಾಖಾಧಿಕಾರಿಗಳಿಗೆ ಶಾಕ್ ನೀಡಿದೆ.

ಬೀದರ್ ನ ಹುಮ್ನಾಬಾದ್, ಚೆಕ್ ಪೋಸ್ಟ್, ಬಳ್ಳಾರಿಯ ಹಗರಿ ಚೆಕ್ ಪೋಸ್ಟ್, ಅತ್ತಿಬೆಲೆಯ ಆರ್.ಟಿ.ಒ. ಚೆಕ್ ಪೋಸ್ಟ್ ಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಬೀದರ್ -ಕಲಬುರ್ಗಿ ಲೋಕಾಯುಕ್ತ ಎಸ್.ಪಿ. ನೇತೃತ್ವದ ತಂಡ ಬೆಳಗಿನ ಜಾವ ನಾಲ್ಕು ಗಂಟೆಗೆ ದಾಳಿ ನಡೆಸಿದ್ದು, ಚೆಕ್ ಪೋಸ್ಟ್ ನಲ್ಲಿ ಒಂದೂವರೆ ಲಕ್ಷ ರೂಪಾಯಿ ಪತ್ತೆಯಾಗಿದೆ. ಇದು ದಂಡದ ಹಣವೇ ಅಥವಾ ಲಂಚದ ಹಣವೇ ಎಂಬುದರ ಪರಿಶೀಲನೆ ನಡೆದಿದೆ.

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿಯಲ್ಲಿ ಬೆಂಗಳೂರು -ಮುಂಬೈ ರಾಷ್ಟ್ರೀಯ ಹೆದ್ದಾರಿ 4 ರಲ್ಲಿರುವ ಚೆಕ್ಪೋಸ್ಟ್ ಮೇಲೆ ದಾಳಿ ನಡೆಸಲಾಗಿದೆ. ವಿಜಯಪುರ ಹೊರವಲಯದ ಚೆಕ್ಪೋಸ್ಟ್ ಮೇಲೆಯೂ ದಾಳಿ ಮಾಡಿ ಪರಿಶೀಲನೆ ನಡೆಸಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು