ಇತ್ತೀಚಿನ ಸುದ್ದಿ
ರಾಜ್ಯದ ಹಲವೆಡೆ ಲೋಕಾಯುಕ್ತ ಕಾರ್ಯಾಚರಣೆ: ನಿರ್ಮಿತಿ ಕೇಂದ್ರದ ಪ್ರಾಜೆಕ್ಟ್ ಎಂಜಿನಿಯರ್ ಕಚೇರಿ, ಮನೆಗೆ ದಾಳಿ
31/05/2023, 13:34
ಬೆಂಗಳೂರು(reporterkarnataka.com): ರಾಜ್ಯದಲ್ಲಿ ಒಂದು ಕಡೆ ಎನ್ ಐಎ ದಾಳಿ ನಡೆಸಿದರೆ, ಇನ್ನೊಂದು ಕಡೆ ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ ನಡೆಸಿದೆ.
ಬೆಂಗಳೂರು, ತುಮಕೂರು, ಹಾವೇರಿ, ಮೈಸೂರು ಜಿಲ್ಲೆ ಸೇರಿದಂತೆ ಹಲವು ಕಡೆ ಲೋಕಾಯುಕ್ತ ಅಧಿಕಾರಿಗಳು ಬುಧವಾರ ಬೆಳಗ್ಗೆ ಕಾರ್ಯಾಚರಣೆ ನಡೆಸಿದ್ದಾರೆ.
ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನ ನಿರ್ಮಿತಿ ಕೇಂದ್ರದ ಉಪ ವಿಭಾಗದ ಪ್ರಾಜೆಕ್ಟ್ ಎಂಜಿನಿಯರ್ ಅವರ ಕಚೇರಿ ಹಾಗೂ ಮನೆಗೆ ಲೋಕಾಯುಕ್ತ ದಾಳಿ ನಡೆಸಿ ಪರಿಶೀಲನೆ ನಡೆಸಿದೆ. ಇದೇ ವೇಳೆ ಲೋಕಾಯುಕ್ತ ಅಧಿಕಾರಿಗಳು ಕೆಐಎಡಿಬಿ ಅಧಿಕಾರಿ ನರಸಿಂಹ ಮೂರ್ತಿ ಅವರ ತುಮಕೂರಿನ ಮನೆಗೂ ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಅಧಿಕಾರಿಗಳಾದ ಡಿಸಿಪಿ ಮಂಜುನಾಥ್ ಹಾಗೂ ಹರ್ಷ ಅವರ ತಂಡ ದಾಳಿ ನಡೆಸಿದೆ.