ಇತ್ತೀಚಿನ ಸುದ್ದಿ
Raichur | ಮಸ್ಕಿ: 55ನೇ ವರ್ಷದ ಮಹಾದೇವಿ ಪುರಾಣ ಮಹೋತ್ಸವ, ರಥೋತ್ಸವ
05/10/2025, 21:48

ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ಮಸ್ಕಿ ರಾಯಚೂರು
info.reporterkarnata@gmail.com
ಮಸ್ಕಿ ಪಟ್ಟಣದ ಭ್ರಮರಾಂಬ ಕಲ್ಯಾಣ ಮಂಟಪದಲ್ಲಿ 55ನೇ ವರ್ಷದ ಮಹಾದೇವಿ ಪುರಾಣ ಮಹೋತ್ಸವ ರಥೋತ್ಸವ ಪರಂಪರೆಯ ಗುರುಗಳಾದ ಶ್ರೀ ಷಟಸ್ಥಲ ಬ್ರಹ್ಮ ಪರ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆಯಿತು.
ಪ್ರತಿವರ್ಷದಂತೆ ಈ ವರ್ಷವೂ ಮಹಾದೇವಿ ಪುರಾಣ ಮಸ್ಕಿ ದಸರಾ ಉತ್ಸವ ಮೈಸೂರು ದಸರಾ ಜಂಬೂಸವಾರಿ ಮಾದರಿಯಲ್ಲಿ ವೇದಮೂರ್ತಿ ಚಂದ್ರಯ್ಯ ತಾರಾನಗರ ಸಂಡೂರು ತರ ಕಲಾತಂಡದಿಂದ ವೀರಗಾಸೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರಿಂದ ವಿವಿಧ ಜನ ಜಾನಪದ ಕಲಾತಂಡ ವೈಭವ ಶ್ರೀ ಬ್ರಹ್ಮರಂಭದ ದಸರಾ ವೈಭವ ದಂದು ಬೆಳಿಗ್ಗೆ 6:00 ಗಂಟೆಗೆ ನಡೆಯುವುದು.
ಇಂದು ನಡೆದ ಕಾರ್ಯಕ್ರಮದಲ್ಲಿ ಅಂತರಗಂಗೆ ಪಂಪಾಯಸ್ವಾಮಿ ಸಾಲಿಮಠ ಇವರ ವಿರಚಿತ ಸುಕ್ಷೇತ್ರ ಮಸ್ಕಿ ಬ್ರಹ್ಮರಂಬ ಕರುಣೆ ಕವನ ಸಂಕಲನ ಬಿಡುಗಡೆ ಮಾಡಲಾಯಿತು. ಉಪನ್ಯಾಸ ನೀಡಿದ ಜಗದ್ಗುರು ಶ್ರೀ ಸದಾಶಿವ ಮಹಾಸ್ವಾಮಿಗಳು ಶಿವಾನಂದ ಬ್ರಹ್ಮಮಠ ಗದಗ್ ಮಹಿಳೆಯರು ಮೊದಲು ಸಂಸ್ಕಾರ ಕಲೆತು ಗುರುವಿನ ಕೃಪೆಗೆ ಪಾತ್ರರಾಗಬೇಕೆಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಪ್ರತಾಪ್ ಗೌಡ ಮಾಜಿ ಶಾಸಕ ಹಾಗೂ ಮಸ್ಕಿಯ ಕೇಂದ್ರ ಬಿಂದು ವರ ರುದ್ರಮುನಿ ಶಿವಾಚಾರ್ಯ ಮಹಾದೇವರು ನೇತೃತ್ವದಲ್ಲಿ ಕಾರ್ಯಕ್ರಮ ನೆರವೇರಿತು.
ಈ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಸುತ್ತಮುತ್ತ ಗ್ರಾಮಗಳಿಂದ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು .