7:56 PM Sunday6 - October 2024
ಬ್ರೇಕಿಂಗ್ ನ್ಯೂಸ್
ರಡ್ಡೇರಹಟ್ಟಿಯಲ್ಲಿ ಅಂತರ್ ರಾಜ್ಯ ಮಟ್ಟದ ಪುರುಷರ ಮುಕ್ತ ವಾಲಿಬಾಲ್ ಪಂದ್ಯಾವಳಿ ರಾಜ್ಯಮಟ್ಟದ ಮಂಗಳೂರು ದಸರಾ ಹಾಫ್ ಮ್ಯಾರಥಾನ್: 2 ಸಾವಿರಕ್ಕೂ ಹೆಚ್ಚು ಮಂದಿ ಭಾಗಿ ಮಾಜಿ ಶಾಸಕರ ಸಹೋದರ ದಿಢೀರ್ ನಾಪತ್ತೆ; ಕೂಳೂರು ಸೇತುವೆಯಲ್ಲಿ ಕಾರು ಪತ್ತೆ; ಆತ್ಮಹತ್ಯೆ… ಮಂಗಳೂರು-ಪೊಳಲಿಗೆ ಬೆಂಜನಪದವು- ಕಲ್ಪನೆ ಮಾರ್ಗವಾಗಿ ಕೆಎಸ್‌ಆರ್‌ಟಿಸಿ ಬಸ್ ಆರಂಭ ಕೋಲಾರ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅಕ್ಟೋಬರ್ 7 ರಿಂದ ಇ-ಖಾತಾ ಲಭ್ಯ ಬೆಂಗಳೂರು: ಹೃದಯವಾಹಿನಿ ರಜತ ಮಹೋತ್ಸವ, ಪ್ರಥಮ ಅನಿವಾಸಿ ಕನ್ನಡಿಗರ ಸಮ್ಮೇಳನ ವಿಧಾನ ಸಭೆ ಸ್ಪೀಕರ್ ಯು.ಟಿ.ಖಾದರ್ ಕೊಟ್ಟಿಗೆಹಾರ ಭೇಟಿ: ಬಣಕಲ್ ಪ್ರಾಥಮಿಕ ಆರೋಗ್ಯ ಕೇಂದ್ರ… ಕೊಟ್ಟಿಗೆಹಾರ: ಗಾಂಧಿ ಜಯಂತಿಯಂದು ಮಾಂಸ ಮಾರಾಟ; ನಿಯಮ ಉಲ್ಲಂಘಿಸಿದ ಮಾರಾಟಗಾರರು ಗಾಂಧೀಜಿ ಚಿಂತನೆಗಳು ಎಲ್ಲಾ ಪತ್ರಕರ್ತರಿಗೆ ಎಂದೆಂದಿಗೂ ಮಾರ್ಗದರ್ಶಿ: ಮಂಗಳೂರು ಬಿಷಪ್ ಡಾ. ಪೀಟರ್… ಸಾಲ ಕೇಳ್ತಾ ಇಲ್ಲ, ಕೆಲಸ ಮಾಡಿದ್ದಕ್ಕೆ ನ್ಯಾಯ ಕೊಡಿ: ಪ್ರತಿಭಟನಾ ಸಭೆಯಲ್ಲಿ ರಾಜ್ಯ…

ಇತ್ತೀಚಿನ ಸುದ್ದಿ

ರಾಹುಲ್ ವಿರುದ್ಧ ಹೇಳಿಕೆ ಶಾಸಕ ಡಾ. ಭರತ್ ಶೆಟ್ಟಿ ಅವರ ಸಂಸ್ಕೃತಿಯನ್ನು ಬಿಂಬಿಸುತ್ತದೆ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ

09/07/2024, 17:51

ಮಂಗಳೂರು(reporterkarnataka.com): ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯವರ ಕಪಾಳಕ್ಕೆ ಹೊಡೆಯಬೇಕು ಎಂಬ ಬಿಜೆಪಿ ಶಾಸಕ ಡಾ.ಭರತ್ ಶೆಟ್ಟಿ ಅವರ ಹೇಳಿಕೆ ಅವರ ಸಂಸ್ಕೃತಿ ಏನು ಎಂಬುದನ್ನು ತಿಳಿಸುತ್ತದೆ. ಶಾಸಕರು ದ್ವೇಷ ಬಿತ್ತುವುದನ್ನು ಕೈಬಿಟ್ಟು ಕೂಡಲೇ ರಾಹುಲ್ ಗಾಂಧಿಯವರ ವಿರುದ್ಧ ಹೇಳಿಕೆಗೆ ಕ್ಷಮೆ ಕೇಳಲಿ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ ಆಗ್ರಹಿಸಿದ್ದಾರೆ.

ಶಾಸಕರು ಮಾತಾಡುವಾಗ ತಾನೊಬ್ಬ ಸುಶಿಕ್ಷಿತ, ವೈದ್ಯ, ಶಾಸಕನಾಗಿದ್ದೇನೆ ಎಂಬುದ್ದಕ್ಕಾದರೂ ಬೆಲೆ ಕೊಡಬೇಕಿತ್ತು. ಅವರು ಮಾತನಾಡುದ ಮಾತು ಹಿಂದು ಸಮಾಜ ತಿಳಿಸಿಕೊಟ್ಟ ಸಂಸ್ಕೃತಿಯೇ? ಒಬ್ಬ ಹಿಂದು ಸಮಾಜದ ವ್ಯಕ್ತಿ ಎಂದು ಬಿಂಬಿಸಿಕೊಳ್ಳುತ್ತಿರುವ ವ್ಯಕ್ತಿ ಸಂವಿಧಾನದ ಹುದ್ದೆಗಾದರೂ ಗೌರವ ಕೊಡಬೇಕಿತ್ತು ಎಂದು ಅವರು ನುಡಿದರು.
ಪ್ರತಿಭಟನೆ ವೇಳೆ ಸಂಸದ ಬೃಜೇಶ್ ಚೌಟ ಅವರೂ ಇದ್ದರು. ಚೌಟರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ಮಾಡುವುದಕ್ಕಿಂತ, ರಾಹುಲ್ ‌ಗಾಂಧಿಯವರು ಏನು ಮಾತನಾಡಿದ್ದಾರೆ, ಆ ಬಗ್ಗೆ ಸದನದಲ್ಲಿ ಪ್ರತಿಕ್ರಿಯಿಸುವ ಅವಕಾಶ ಇದೆ. ಅಲ್ಲಿ ಈ ವಿಚಾರದ ಬಗ್ಗೆ ಮಾತಾಡಲಿ. ಅದು ಬಿಟ್ಟು ರಸ್ತೆಯಲ್ಲಿ ನಿಂತು ಪ್ರತಿಭಟಿಸುವುದಲ್ಲ ಎಂದು ಪದ್ಮರಾಜ್ ನುಡಿದಿದ್ದಾರೆ.

ಪ್ರತಿಪಕ್ಷದ ನಾಯಕನಾಗಿ ರಾಹುಲ್‌ಗಾಂಧಿ ಸದನದಲ್ಲಿ ಮಾತನಾಡಿರುವುದನ್ನು ಹಿಂದು ಸಮಾಜ ಸೇರಿ ಸ್ವಾಮೀಜಿಗಳು ಸ್ವಾಗತಿಸಿದ್ದಾರೆ. ರಾಹುಲ್ ಗಾಂಧಿ ಹಿಂದು ಸಮಾಜವನ್ನು ಎಂದೂ ದೂಷಣೆ ಮಾಡಿಲ್ಲ. ಹಿಂದು ಸಮಾಜದ ಹೆಸರು ಹೇಳಿಕೊಂಡು ದ್ವೇಷಕಾರುತ್ತಿರುವ ಬಿಜೆಪಿ, ಆರ್.ಎಸ್.ಎಸ್.ನ ದ್ವೇಷದ ರಾಜಕಾರಣವನ್ನು ವಿರೋಧಿಸಿದ್ದಾರೆ ಎಂಬುದು ಸಮಸ್ತ ಭಾರತೀಯರಿಗೆ ತಿಳಿದಿದೆ. ಅದನ್ನು ಶಾಸಕರು ವಿಷಯಾಂತರ ಮಾಡಿ ಮತ್ತೆ ದ್ವೇಷ ಬಿತ್ತುವುದನ್ನು ಶಾಸಕರು ಕೈಬಿಟ್ಟು ಕೂಡಲೇ ರಾಹುಲ್ ಗಾಂಧಿಯವರ ವಿರುದ್ಧ ಹೇಳಿಕೆಗೆ ಕ್ಷಮೆ ಕೇಳಲಿ ಎಂದು ಈ ಮೂಲಕ ಆಗ್ರಹಿಸುತ್ತೇನೆ ಎಂದಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು