3:49 AM Saturday11 - October 2025
ಬ್ರೇಕಿಂಗ್ ನ್ಯೂಸ್
ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಡಿಕೇರಿಯಲ್ಲಿ ಡಿಜಿಟಲ್ ಸ್ಟುಡಿಯೋ ಕಳ್ಳತನ ಪ್ರಕರಣ: ಐವರು ಚೋರರ ಬಂಧನ ಆಶ್ರಮ ಶಾಲೆಯಲ್ಲಿ ಬೆಂಕಿ ಅವಘಡ: ಮೃತ ವಿದ್ಯಾರ್ಥಿ ಪುಷ್ಪಕ್ ಕುಟುಂಬಕ್ಕೆ 5 ಲಕ್ಷ… ಕಾವೇರಿ ಸಂಕ್ರಮಣ: ಅ. 17ರಂದು ಕೊಡಗು ಜಿಲ್ಲೆಯಲ್ಲಿ ಸಾರ್ವತ್ರಿಕ ರಜೆ; ಮಧ್ಯಾಹ್ನ 1.44ಕ್ಕೆ… 2005ರ ಪೂರ್ವ ಅರಣ್ಯಭೂಮಿಯಲ್ಲಿ ಬದುಕು ಕಟ್ಟಿಕೊಂಡವರಿಗೆ ಭೂಮಿಯ ಹಕ್ಕು: ಮುಖ್ಯಮಂತ್ರಿ ಸಿದ್ದರಾಮಯ್ಯ ‘ನೀರಿದ್ದರೆ ನಾಳೆ – ವಾಟರ್ ಇಸ್ ಫ್ಯೂಚರ್’: ಯೋಜನೆಗೆ ಚಾಲನೆ’: ಬರುವ ಡಿಸೆಂಬರ್… ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ Chikkamagaluru | ಮೂಡಿಗೆರೆ: ‘PRESS’ ಎಂದು ಬರೆದ ಬೈಕ್ ನಲ್ಲಿ ಶ್ರೀಗಂಧ ಕಳ್ಳಸಾಗಣೆ;… ಸೋಮವಾರಪೇಟೆ ಹಂಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೋಕಾಯುಕ್ತರ ಬಲೆಗೆ: 25 ಸಾವಿರ ಲಂಚ…

ಇತ್ತೀಚಿನ ಸುದ್ದಿ

ರಾಘವೇಂದ್ರ ಸ್ವಾಮಿ ಮಠದಲ್ಲಿ 350ನೇ ಉತ್ತರಾಧನೆ ಸಂಭ್ರಮ: ರಥೋತ್ಸವ ಸಂಪನ್ನ

25/08/2021, 23:10

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ
ರಾಯಚೂರು
info.reporterkarnataka@gmail.com

ಮಸ್ಕಿ ಸಮೀಪದ ಮುದುಗಲ್ ಪಟ್ಟಣದ       ಬೇಡಿದ ಭಕ್ತರಿಗೆ ಇಷ್ಟಾರ್ಥ ವನ್ನು ಕರುಣಿಸುವ ಕಲಿಯುಗದ ಕಲ್ಪವೃಕ್ಷ, ತೃತೀಯ ಮಂತ್ರಾಲಯವೆಂದೇ ಕರೆಯಲ್ಪಡುವ ಮುದಗಲ್ಲ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ 350 ನೇ ಉತ್ತರಾಧನೆ ರಥೋತ್ಸವದ ಸಂಭ್ರಮ ಜರುಗಿತು.

ಏಳು ದಿನಗಳ ಕಾಲ ಗುರುರಾಯರ ಆರಾಧನೆಯ ಬುಧವಾರದಂದು ಉತ್ತರಾಧನೆ ಶ್ರದ್ಧಾ ಭಕ್ತಿಯೊಂದಿಗೆ ಬೆಳಗ್ಗೆ ಅಷ್ಟೋತ್ತರ ಕಾರ್ಯಕ್ರಮದಿಂದ ಪ್ರಾರಂಭವಾಗಿ ರಾಯರ ಬೃಂದಾವನಕ್ಕೆ ವಿಶೇಷ ಪೂಜೆ, ಅಲಂಕಾರ ಸೇವೆ, ರಥೋತ್ಸವಕ್ಕೆ ಮುನ್ನ ಪ್ರಹ್ಲಾದರಾಜರ ಉತ್ಸವ ಮೂರ್ತಿಯ ಪಲ್ಲಕ್ಕಿ ಸೇವೆ, ತೋಟ್ಟಿಲು ಸೇವೆ ಕಾರ್ಯಕ್ರಮ ನೆರವೇರಿತು. 

ಕೋವಿಡ್ ನಿಯಮಾನುಸಾರವಾಗಿ  ಗುರುರಾಯರ ಆರಾಧನೆ ಜರುಗಿತು. ರಥೋತ್ಸವುದ್ದಕ್ಕೂ ಭಕ್ತರು ದೇವರ ನಾಮ ಸ್ಮರಣೆ ಹಾಡುಗಳು, ಭಜನೆ, ಕೋಲಾಟ ದೊಂದಿಗೆ ವಿಜ್ರಂಭಣೆಯಿಂದ ಆರಾಧನೆ ಜರುಗಿತು.

ಆರಾಧನೆಯ ನಿಮಿತ್ಯವಾಗಿ ಭಕ್ತರಿಗೆ ವಿಶೇಷ ಗೌರವ ಆಶಿರ್ವಾದ ನೀಡಲಾಯಿತು. ಈ ಸಂದರ್ಭದಲ್ಲಿ ಮಠದ ಅರ್ಚಕ ಮಧ್ವಾಚಾರ್ಯ ಸಾನಿಧ್ಯದಲ್ಲಿ ಅನಂತಾಚಾರ್ಯ, 

ಮಠದ ಅದ್ಯಕ್ಷ ನಾರಾಯಣರಾವ್ ದೇಶಪಾಂಡೆ, ನರಸಿಂಗರಾವ್ ದೇಶಪಾಂಡೆ, ಡಾ. ಗುರುರಾಜ ದೇಶಪಾಂಡೆ, ಕರ್ಣಾಟಕ ಬ್ಯಾಂಕ್‌ನ ಶ್ರೀನಿವಾಸ ದೇಶಪಾಂಡೆ, ಡಾ. ಎಂ.ವಿ. ಜೋಶಿ, ನಿವೃತ್ತ ಶಿಕ್ಷಕರಾದ ರಂಗರಾವ್ ದೇಶಪಾಂಡೆ, ವಿ.ಎಸ್. ಶೆಡ್ಲಿಗೇರಿ, ಪಾಲಾಕ್ಷಿರಾವ್ ದೇಶಪಾಂಡೆ, ಪ್ರಾಣೇಶರಾವ್ ಮುತಾಲಿಕ, ಗುರುರಾಜ ದೇಶಪಾಂಡೆ,  ಹಿರಿಯ ಪತ್ರಕರ್ತರಾದ ಆರ್.ವಿ. ಗುಮಾಸ್ತೆ, ಲೇಶರಾವ್ ಕುಲಕರ್ಣಿ, ಅನಂತ ರಾವ್ ದೇಶಪಾಂಡೆ, ರಾಘವೇಂದ್ರ ದೇಶಪಾಂಡೆ, ಯಲ್ಲೋಜಿರಾವ್ ಕೋರೇಕರ್, ಯೋಗೇಶಪ್ಪ ಗೌರಿಪೂರ, ನಾರಾಯಣಪ್ಪ ತಾವರಗೇರಿ, ರಾಘವೇಂದ್ರ ತಾವರಗೇರಿ ಸೇರಿದಂತೆ ವಿಪ್ರ ಸಮಾಜದ ಹಾಗೂ ಆರ್ಯ ವೈಶ್ಯ ಸಮಾಜ ಮಹಿಳೆಯರು ಸೇರಿದಂತೆ ಭಕ್ತ ಸಮೂಹ ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು