1:16 PM Friday10 - April 2026
ಬ್ರೇಕಿಂಗ್ ನ್ಯೂಸ್
ಚಾಮರಾಜನಗರ; ಮಹಿಳೆಯರ ಒಳ ಉಡುಪು ಕದಿಯುತ್ತಿದ್ದ ‘ಸೈಕೋ’ ಕಳ್ಳನ ಬಂಧನ ಫೇಲಾದವರಿಗೆ ಇನ್ನೊಂದು ಚಾನ್ಸ್: ದ್ವಿತೀಯ ಪಿಯುಸಿ ಪರೀಕ್ಷೆ-2 ದಿನಾಂಕ ಪ್ರಕಟ Suratkal | ಅಮಾನತುಗೊಂಡಿದ್ದ ಎನ್‌ಐಟಿಕೆ ಕುಲಸಚಿವ ರವೀಂದ್ರನಾಥ್ ಸೇವೆಯಿಂದ ವಜಾ ಪತಿಯ ಶವದ ಜತೆ 10 ದಿನ ಕಳೆದ ಪತ್ನಿ: ಮಲೆನಾಡು ಚಿಕ್ಕಮಗಳೂರಿನಲ್ಲಿ ವಿಚಿತ್ರ… ಕಾಂಗ್ರೆಸ್‌ನಿಂದ ಕೋಟ್ಯಂತರ ರೂಪಾಯಿ ಹಣ ಹಂಚಿಕೆ: ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಆರೋಪ ಅಮ್ಮನ ಸಾವಿನ ದುಃಖದಲ್ಲೂ ಛಲ ಬಿಡದೆ ಪರೀಕ್ಷೆ ಬರೆದ ದಿಶಾ ಸ್ಟೇಟ್ ಗೆ… ದಾವಣಗೆರೆ ದಕ್ಷಿಣ: ಮತಗಟ್ಟೆ ಬಳಿ ಟೇಬಲ್ ವಿಚಾರವಾಗಿ ಕಾಂಗ್ರೆಸ್-ಎಸ್ ಡಿಪಿಐ ಕಾರ್ಯಕರ್ತರ ಜಟಾಪಟಿ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪ ಚುನಾವಣೆ: ಬಹುತೇಕ ಶಾಂತಿಯುತ ಮತದಾನ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: 60 ಎಕರೆ ಅರಣ್ಯ ಪ್ರದೇಶ… ಎಲ್ಲ ಕಡೆ ಸಿದ್ದರಾಮಯ್ಯ ಬೇಕು ಎಂಬ ಬೇಡಿಕೆಯಿದೆ; ಕುಮಾರಸ್ವಾಮಿನಾ ಯಾರು ಎಂದು ಕೇಳ್ತಾರೆ:…

ಇತ್ತೀಚಿನ ಸುದ್ದಿ

ಪುತ್ತೂರು: ಎಪ್ರಿಲ್ 13ರಿಂದ 22ರ ವರೆಗೆ ಉಚಿತ ಸಂಸ್ಕೃತ ಕಲಿಕಾ ಶಿಬಿರ

10/04/2026, 13:15

ಪುತ್ತೂರು(reporterkarnataka.com): ಸಂಸ್ಕೃತ ಭಾರತೀ ಮತ್ತು ದೇವಾಲಯ ಸಂವರ್ಧನಾ ಸಮಿತಿ ವತಿಯಿಂದ ಸಂಸ್ಕೃತವು ಭಾರತದ ಪ್ರಾಚೀನ ಭಾಷೆ. ಸರಳ, ಸುಂದರ ಹಾಗೂ ಮಧುರವಾದ ಈ ಭಾಷೆಯನ್ನು ಕಲಿಯಲು ಒಂದು ಉತ್ತಮ ಅವಕಾಶವಾಗಿ ಇದೀಗ ಪುತ್ತೂರಿನಲ್ಲಿ ಶಿಬಿರವೊಂದನ್ನು ಆಯೋಜಿಸಲಾಗಿದೆ.
ಸಂಸ್ಕೃತ ಭಾರತೀ ಮತ್ತು ದೇವಾಲಯ ಸಂವರ್ಧನಾ ಸಮಿತಿ ವತಿಯಿಂದ ‘ಉಚಿತ ಸಂಸ್ಕೃತ ಸಂಭಾಷಣಾ ಶಿಬಿರ’ವು ಇದೇ ಎಪ್ರಿಲ್ 13 ರಿಂದ ಏಪ್ರಿಲ್ 22ರ ವರೆಗೆ 10 ದಿನಗಳ ಕಾಲ ನಡೆಯಲಿದೆ.
ಪುತ್ತೂರಿನ ಬೊಳುವಾರಿನಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದ ‘ನವನೀತಂ ಸಭಾಂಗಣ’ದಲ್ಲಿ ಪ್ರತಿದಿನ ಬೆಳಗ್ಗೆ 10ರಿಂದ ಮಧ್ಯಾಹ್ನ 12ರ ವರೆಗೆ ಶಿಬಿರವನ್ನು ನಡೆಸಲಾಗುತ್ತದೆ. ಸಂಸ್ಕೃತ ಭಾರತೀಯದಲ್ಲಿ ಸಕ್ರಿಯ ಸದಸ್ಯೆಯಾಗಿರುವ ಶ್ರೀಲತಾ ಕೆ.ಎಸ್. ಇಂದ್ರಪ್ರಸ್ಥ, ಮೈಸೂರು ಇವರು ಸಂಪನ್ಮೂಲ ವ್ಯಕ್ತಿಯಾಗಿ ಅಲ್ಲಿಂದ ಆಗಮಿಸಿ ಶಿಬಿರವನ್ನು ನಡೆಸಿಕೊಡಲಿರುವರು. 6 ವರ್ಷ ಮೇಲ್ಪಟ್ಟ ಎಲ್ಲರೂ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಂಪರ್ಕಿಸಿ ;9591967066

ಇತ್ತೀಚಿನ ಸುದ್ದಿ

ಜಾಹೀರಾತು