4:48 PM Monday21 - April 2025
ಬ್ರೇಕಿಂಗ್ ನ್ಯೂಸ್
DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ…

ಇತ್ತೀಚಿನ ಸುದ್ದಿ

ಪಿಯು ಪಠ್ಯ ಪುಸ್ತಕ ಪರಿಷ್ಕರಣೆ ಇಲ್ಲ; ಹಿಂದಿನ ಪಠ್ಯವನ್ನೇ ಮುಂದುವರೆಸುತ್ತೇವೆ: ಸಚಿವ ಬಿ.ಸಿ. ನಾಗೇಶ್

08/06/2022, 09:16

ಬೆಂಗಳೂರು(reporterkarnataka.com):

ಪಠ್ಯಪುಸ್ತಕರ ಪರಿಷ್ಕರಣೆ ವಿವಾದ ಭುಗಿಲೆದ್ದ ಬಳಿಕ ರಾಜ್ಯ ಬಿಜೆಪಿ ಸರಕಾರ ಎಚ್ಚೆತ್ತುಕೊಂಡಿದೆ. ಪಿಯುಸಿ ಪಠ್ಯಪುಸ್ತಕ ಪರಿಷ್ಕರಣೆ ಇಲ್ಲ, ಈ ಹಿಂದಿನ ಪಠ್ಯಪುಸ್ತಕವೇ ಯಥಾವತ್ತಾಗಿ ಇರಲಿದೆ ಎಂಬುದಾಗಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಸ್ಪಷ್ಟ ಪಡಿಸಿದ್ದಾರೆ.

ರೋಹಿತ್​ ಚಕ್ರತೀರ್ಥ ಅವರ‌ ಸಮಿತಿಯನ್ನೇ ಪಿಯು ಪಠ್ಯಪರಿಷ್ಕರಣೆಗೆ‌ ನೇಮಿಸಲಾಗಿತ್ತು.

ಆದರೆ ಈಗ‌ ಸಮಿತಿಯನ್ನೇ‌ ವಿಸರ್ಜಿಸಲಾಗಿದೆ ಎಂದು ಸಚಿವರು ಹೇಳಿದರು.

ಪಿಯು ಪಠ್ಯ ಪರಿಷ್ಕರಣೆಯಿಂದ ಸರ್ಕಾರ ಹಿಂದೆ ಸರಿದಿದೆ.ದ್ವಿತೀಯ ಪಿಯುಸಿ ಅಧ್ಯಾಯ 4.2 ಪರಿಷ್ಕರಣೆಯಲ್ಲಿ ಹೊಸ ಧರ್ಮಗಳ ಉದಯದ ಬಗ್ಗೆ ಅಂಶಗಳನ್ನು ಸೇರಿಸಲಾಗಿತ್ತು. ಪರಿಷ್ಕರಣೆ ಕಾರ್ಯವನ್ನು ರೋಹಿತ್​​ಗೆ ನೀಡಲಾಗಿತ್ತು. ಆದರೆ, ರೋಹಿತ್ ಸಮಿತಿಯನ್ನು ಈಗಾಗಲೇ ವಿಸರ್ಜಿಸಲಾಗಿದೆ. ಹಾಗಾಗಿ ಪಿಯು ಪರಿಷ್ಕರಣಾ ಸಮಿತಿಯನ್ನು ವಿಸರ್ಜಿಸಲಾಗಿದ್ದು, ಅದರ ವರದಿ ಪಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಶಾಲಾ ಪಠ್ಯಪುಸ್ತಕ ಕುರಿತಂತೆ ಬರಗೂರು ಸಮಿತಿ ನೀಡಿದ್ದ ಬಸವಣ್ಣ ಪಠ್ಯವನ್ನು ಶಾಲಾ ಪಠ್ಯಗಳಲ್ಲಿ ಮುಂದುವರೆಸಲಾಗುತ್ತದೆ. ಅಂಬೇಡ್ಕರ್ ಪಠ್ಯ ಸೇರಿದಂತೆ ಇತರೆ ಲೋಪಗಳನ್ನು ಸರಿ ಪಡಿಸಲಾಗುತ್ತದೆ ಎಂಬುದಾಗಿ ಸ್ಪಷ್ಟ ಪಡಿಸಿದರು.

ಒಂದೇ‌ ಒಂದು ಪಠ್ಯವನ್ನುಪರಿಷ್ಕರಿಸೋಕೆ ಅಂತಾ‌ ಸಮಿತಿ‌ಗೆ ವಹಿಸಲಾಗಿತ್ತು. ಪಿಯು‌ ಪಠ್ಯಪುಸ್ತಕ‌ ಪರಿಷ್ಕರಣೆಗಾಗಿ ಮತ್ತೊಂದು ಸಮಿತಿ‌‌ ನೇಮಿಸಿಲ್ಲ. ಪರಿಷ್ಕರಣೆ ವಿಚಾರ‌ ಎಲ್ಲಿಂದ ಬರಲಿದೆ? ದ್ವಿತೀಯ‌ ಪಿಯು ಪಠ್ಯಪುಸ್ತಕ ಪರಿಷ್ಕರಣೆ ಮಾಡಿಲ್ಲ ಎಂದು ಸಚಿವರು ಸ್ಪಷ್ಟನೆ ನೀಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು