2:47 AM Saturday11 - October 2025
ಬ್ರೇಕಿಂಗ್ ನ್ಯೂಸ್
ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಡಿಕೇರಿಯಲ್ಲಿ ಡಿಜಿಟಲ್ ಸ್ಟುಡಿಯೋ ಕಳ್ಳತನ ಪ್ರಕರಣ: ಐವರು ಚೋರರ ಬಂಧನ ಆಶ್ರಮ ಶಾಲೆಯಲ್ಲಿ ಬೆಂಕಿ ಅವಘಡ: ಮೃತ ವಿದ್ಯಾರ್ಥಿ ಪುಷ್ಪಕ್ ಕುಟುಂಬಕ್ಕೆ 5 ಲಕ್ಷ… ಕಾವೇರಿ ಸಂಕ್ರಮಣ: ಅ. 17ರಂದು ಕೊಡಗು ಜಿಲ್ಲೆಯಲ್ಲಿ ಸಾರ್ವತ್ರಿಕ ರಜೆ; ಮಧ್ಯಾಹ್ನ 1.44ಕ್ಕೆ… 2005ರ ಪೂರ್ವ ಅರಣ್ಯಭೂಮಿಯಲ್ಲಿ ಬದುಕು ಕಟ್ಟಿಕೊಂಡವರಿಗೆ ಭೂಮಿಯ ಹಕ್ಕು: ಮುಖ್ಯಮಂತ್ರಿ ಸಿದ್ದರಾಮಯ್ಯ ‘ನೀರಿದ್ದರೆ ನಾಳೆ – ವಾಟರ್ ಇಸ್ ಫ್ಯೂಚರ್’: ಯೋಜನೆಗೆ ಚಾಲನೆ’: ಬರುವ ಡಿಸೆಂಬರ್… ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ Chikkamagaluru | ಮೂಡಿಗೆರೆ: ‘PRESS’ ಎಂದು ಬರೆದ ಬೈಕ್ ನಲ್ಲಿ ಶ್ರೀಗಂಧ ಕಳ್ಳಸಾಗಣೆ;… ಸೋಮವಾರಪೇಟೆ ಹಂಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೋಕಾಯುಕ್ತರ ಬಲೆಗೆ: 25 ಸಾವಿರ ಲಂಚ…

ಇತ್ತೀಚಿನ ಸುದ್ದಿ

ಪ್ರಿಯಕರನ ಜತೆ ಅಸ್ಸಾಂನಿಂದ ಬಂದ ಅಪ್ರಾಪ್ತ ವಯಸ್ಸಿನ ಗೃಹಿಣಿ ಮಂಗಳೂರಿನಲ್ಲಿ ಹೆಣವಾದಳು!: ಇದು ಆತ್ಮಹತ್ಯೆಯೇ? ಕೊಲೆಯೇ?

21/01/2022, 22:09

ಮಂಗಳೂರು(reporterkarnataka.com): ಪ್ರೀತಿಸಿ ದೂರದ ಅಸ್ಸಾಂನಿಂದ ಪ್ರಿಯಕರನ ಜತೆ ಓಡಿ ಬಂದಿದ್ದ ಅಪ್ರಾಪ್ತ ವಯಸ್ಸಿನ ಗೃಹಿಣಿಯೊಬ್ಬಳು ನಗರದ ಕುದ್ರೋಳಿಯ ಬಾಡಿಗೆ ಮನೆಯಲ್ಲಿ ಹೆಣವಾಗಿ ಪತ್ತೆಯಾಗಿದ್ದಾಳೆ.

ಅಸ್ಸಾಂ ಮೂಲದ ಸುಫಿಯಾ(17) ಎಂಬಾಕೆ ಸೈದುಲ್ಲಾ ಎಂಬಾತನ ಪ್ರೀತಿಸಿ ಮದುವೆಯಾಗಿದ್ದಳು. ಅವರು ನಗರದ ಕುದ್ರೋಳಿ ಬಳಿ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದರು. 

ಇಂದು ಅಪ್ರಾಪ್ತ ಗೃಹಿಣಿಯ ಮೃತದೇಹ ಕುತ್ತಿಗೆಗೆ ಶಾಲು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮನೆಯಲ್ಲಿದ್ದ ಪತಿ ಸೈದುಲ್ಲಾ ಸೇರಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪತಿಯೇ ಕುತ್ತಿಗೆಗೆ ಶಾಲು ಬಿಗಿದು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಬೆಳಗ್ಗೆ 6 ಗಂಟೆಗೆ ಸೈದುಲ್ಲಾ ನೆರೆ ಮನೆಗೆ ಬಂದು, ತನ್ನ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮಾಹಿತಿ ನೀಡಿದ್ದಾನೆ. ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವೆನ್ ಲಾಕ್ ಆಸ್ಪತ್ರೆಗೆ ರವಾನಿಸಿದ್ದಾರೆ.

ಸುಫಿಯಾ ಮತ್ತು ಸೈದುಲ್ಲಾ ಪ್ರೀತಿಸಿ ಮನೆ ಬಿಟ್ಟು ಓಡಿ ಬಂದು ಮಂಗಳೂರಿನ ಕುದ್ರೋಳಿಯಲ್ಲಿ ನೆಲೆಸಿದ್ದರು. ಸೈದುಲ್ಲಾ ಪೈಟಿಂಗ್ ಕೆಲಸ ಮಾಡುತ್ತಿದ್ದ. ಆತನೊಂದಿಗೆ ಇತರ ಇಬ್ಬರು ಸ್ನೇಹಿತರು ಕೂಡ ಇದ್ದರು. ಅವರು ಕೂಡ ಇದೆ ಮನೆಯಲ್ಲಿ ನೆಲೆಸಿದ್ದರು. ಅವರನ್ನೂ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇದು ಕೊಲೆಯೇ ಅಥವಾ ಆತ್ಮಹತ್ಯೆಯೇ ಎಂಬುದು ಇನ್ನೂ ನಿಖರವಾಗಿ ತಿಳಿದುಬಂದಿಲ್ಲ. 

ಬಂದರು ಠಾಣೆ ಪೊಲೀಸರು ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು