7:23 PM Friday9 - May 2025
ಬ್ರೇಕಿಂಗ್ ನ್ಯೂಸ್
Airport | ಕಲಬುರಗಿ ವಿಮಾನ ನಿಲ್ದಾಣ: ಭದ್ರತಾ ತಪಾಸಣೆ; ನಿಗದಿತ ಸಮಯಕ್ಕೆ ಪ್ರಯಾಣಿಕರು… J&K | ಆಪರೇಶನ್ ಸಿಂಧೂರ್: ಕರ್ನಲ್ ಸೋಫಿಯಾ ಖುರೇಷಿ: ಕರ್ನಾಟಕದ ಸೊಸೆ ರೀ..!! Karnataka CM | ಮೈಶುಗರ್ ಕಾರ್ಖಾನೆಗೆ 50 ಕೋಟಿ ಕೊಟ್ಟಿದ್ದಷ್ಟೆ ಅಲ್ಲ, ವಿದ್ಯುತ್… ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಸ್ವಾಗತಿಸಿದ ಮಾಜಿ… ಬೆಂಗಳೂರು ಜ್ಞಾನಭಾರತಿ ವಿಶ್ವವಿದ್ಯಾಲಯದಲ್ಲಿ ರಿಜಿಸ್ಟ್ರಾರ್ ಹುದ್ದೆಗೆ 35 ಲಕ್ಷ ರೂ. ವಂಚನೆ: ಎಫ್… Doddaballapura | ಘಾಟಿ ಸುಬ್ರಹ್ಮಣ್ಯ ಕ್ಷೇತ್ರ: ಸರಳ ಸಾಮೂಹಿಕ ವಿವಾಹದಲ್ಲಿ 66 ಜೋಡಿಗಳಿಗೆ… Ex CM | ಸಿಂಧೂರ ಕಳೆದುಕೊಂಡ ಹೆಣ್ಣು ಮಕ್ಕಳ ಪ್ರತೀಕಾರ: ಮಾಜಿ ಮುಖ್ಯಮಂತ್ರಿ… Chikkamagaluru | ಮಲೆನಾಡಿನಲ್ಲಿ ಮಿತಿಮೀರಿದ ಕಾಡುಪ್ರಾಣಿಗಳ ಉಪಟಳ: ಮೂಡಿಗೆರೆ ಸಮೀಪ ಹಸುವನ್ನು ಕೊಂದ… ಮಾಜಿ ಮುಖ್ಯಮಂತ್ರಿ, ದಿವಂಗತ ಕೆ.ಸಿ.ರೆಡ್ಡಿ ಅವರ ಜನ್ಮದಿನ: ಭಾವಚಿತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಲಾರ್ಪಣೆ ಮಾವಿನ ರಾಜಧಾನಿ ಶ್ರೀನಿವಾಸಪುರ ಮತ್ತೆ ಸಜ್ಜು: ಮೇ 15ರಿಂದ ಮಾರಾಟ ಭರ್ಜರಿ ಆರಂಭ

ಇತ್ತೀಚಿನ ಸುದ್ದಿ

ಖಾಸಗಿ ಫೋಟೋ ವೈರಲ್ ಮಾಡ್ತೀನಿ ಎಂದು ಬೆದರಿಸಿದ ಪ್ರಿಯತಮನ ಭೀಕರ ಕೊಲೆ: ಪ್ರಿಯತಮೆ, ಸಹೋದರ ಬಂಧನ

11/06/2024, 17:15

ಮೋಹನ್ ನಂಜನಗೂಡು ಮೈಸೂರು

info.reporterkarnataka@gmail.com

ಖಾಸಗಿ ಫೋಟೋ ಹಾಗೂ ವಿಡಿಯೋ ವೈರಲ್ ಮಾಡ್ತೀನಿ ಎಂದು ಬೆದರಿಕೆ ಹಾಕಿದ ಪ್ರಿಯತಮನನ್ನು ಪ್ರಿಯತಮೆ ಹಾಗೂ ಆಕೆಯ ಸಹೋದರ ಸೇರಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಂಜನಗೂಡು ಟೌನ್ ನಲ್ಲಿ ನಡೆದಿದೆ.
ಎಚ್.ಡಿ.ಕೋಟೆ ಮೂಲದ ಹಂಪಾಪುರ ಗ್ರಾಮದ ನಿವಾಸಿ ರಾಜೇಶ್ ಮೃತ ದುರ್ದೈವಿ.
ಈತನ ತಲೆ ಮೇಲೆ ಸೈಜು ಕಲ್ಲು ಎತ್ತಿ ಹಾಕಿ ಕೊಲೆಗೈದ ಪ್ರಿಯತಮೆ ಪ್ರೇಮಾ ಹಾಗೂ ಈಕೆಯ ಸಹೋದರ ಶಿವು ಇದೀಗ ಪೊಲೀಸರ ಅತಿಥಿಗಳಗಿದ್ದಾರೆ.
ಮೈಸೂರಿನ ಕ್ಯಾತಮಾರನಹಳ್ಳಿ ನಿವಾಸಿ ಪ್ರೇಮಾ 15 ವರ್ಷಗಳ ಹಿಂದೆ ನಂಜನಗೂಡಿನ ಶ್ರೀರಾಂಪುರ ನಿವಾಸಿಯನ್ನ ಮದುವೆ ಆಗಿದ್ದಳು. ಒಂದು ತಿಂಗಳ ಹಿಂದೆ ಪ್ರೇಮಾ ಪತಿ ಆತ್ಮಹತ್ಯೆ ಮಾಡಿಕೊಂಡು ತೀರಿಕೊಂಡಿದ್ದರು.
ಪ್ರೇಮಾ ಪತಿಗೆ ರಾಜೇಶ್ ಸ್ನೇಹಿತನಾಗಿದ್ದು ಆಗಾಗ ಮನೆಗೆ ಬಂದು ಪರಿಚಯ ಮಾಡಿಕೊಂಡಿದ್ದ. ಪರಿಚಯದಿಂದ ಸಲುಗೆ ಬೆಳೆದು ಅಕ್ರಮ ಸಂಬಂಧಕ್ಕೆ ತಿರುಗಿತ್ತು.
ಇತ್ತೀಚೆಗೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿ ಇಬ್ಬರು ಇದ್ದ ಖಾಸಗಿ ಫೋಟೋ ಹಾಗೂ ಆಡಿಯೋಗಳನ್ನ ವೈರಲ್ ಮಾಡುವುದಾಗಿ ಪ್ರೇಮಾಗೆ ರಾಜೇಶ್ ಬೆದರಿಕೆ ಹಾಕಿದ್ದಾನೆ.
ಇದೇ ವಿಚಾರದಲ್ಲಿ ಮಾತನಾಡಬೇಕೆಂದು ಪ್ರೇಮಾ ನಿನ್ನೆ ರಾತ್ರಿ ರಾಜೇಶ್ ನನ್ನು ಮನೆಗೆ ಕರೆಸಿಕೊಂಡಿದ್ದಾಳೆ.


ಈ ವೇಳೆ ಪ್ರೇಮಾ ಹಾಗೂ ಸಹೋದರ ಶಿವು ಇಬ್ಬರೂ ಸೇರಿ ರಾಜೇಶ್ ವಿರುದ್ದ ತಿರುಗಿಬಿದ್ದಿದ್ದಾರೆ. ಇದರಿಂದ ತನಗೆ ಅಪಾಯ ಎಂದು ತಿಳಿದ ರಾಜೇಶ್ ಇವರಿಂದ ತಪ್ಪಿಸಿಕೊಂಡು ಓಡಿದ್ದಾನೆ. ನಂಜನಗೂಡು ಪಟ್ಟಣದ ಆರ್.ಪಿ.ರಸ್ತೆಯ 8 ನೇ ಕ್ರಾಸ್ ಬಳಿ ಅಡ್ಡಹಾಕಿದ ಪ್ರೇಮಾ ಹಾಗೂ ಶಿವು ಜಗಳವಾಡಿ ರಾಜೇಶ್ ತಲೆ ಮೇಲೆ ಕಲ್ಲು ಚೆಪ್ಪಡಿಯನ್ನ ಎತ್ತಿ ಹಾಕಿ ಭೀಕರವಾಗಿ ಕೊಂದಿದ್ದಾರೆ.
ಅಷ್ಟರಲ್ಲಿ ವಿಷಯ ತಿಳಿದು ನಂಜನಗೂಡು ಟೌನ್ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಆರೋಪಿ ಪ್ರೇಮ ಹಾಗೂ ಶಿವು ಇಬ್ಬರನ್ನೂ ಬಂಧಿಸಿದ್ದಾರೆ.
ಉಪ ಪೊಲೀಸ್ ವರಿಷ್ಠಾಧಿಕಾರಿ ನಂದಿನಿ ಡಿವೈಎಸ್ಪಿ ರಘು ಮತ್ತು ನಂಜನಗೂಡಿನ ಪೊಲೀಸರು ಸ್ಥಳದಲ್ಲಿ ಹಾಜರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು