2:45 PM Friday26 - July 2024
ಬ್ರೇಕಿಂಗ್ ನ್ಯೂಸ್
ವಾಹನಗಳಲ್ಲಿ ಪ್ರಖರ ಬೆಳಕಿನ ಬಲ್ಬ್ ಅಳವಡಿಕೆ: ಒಟ್ಟು 1170 ಪ್ರಕರಣ ದಾಖಲು; 5.86… ನಾಗಬೇನಾಳ: ಶ್ರೀ ಸಂತ ಸೇವಾಲಾಲ್ ಹಾಗೂ ಶ್ರೀ ಮರಿಯಮ್ಮ ದೇವಿ ಜಾತ್ರಾ ಮಹೋತ್ಸವ ಇಲಾಖೆಗಳ ನಡುವೆ ಸಮನ್ವಯತೆ ಕೊರತೆ: ಮರೋಳಿಯ ಡೇಂಜರ್ ಟ್ರೀ ತೆರವಿಗೆ ಮೀನಮೇಷ! ಸ್ಪೆಲ್ ಬೀ ರಾಜ್ಯಮಟ್ಟದ ಗ್ರ್ಯಾಂಡ್ ಫಿನಾಲೆ: ಮೇರಿಹಿಲ್ ಮೌಂಟ್ ಕಾರ್ ಮೆಲ್ ಸೆಂಟ್ರಲ್… 3 ಘಾಟ್ ಗಳಲ್ಲಿ ಸಂಚಾರ ನಿಷೇಧ: ಜಿಲ್ಲಾಧಿಕಾರಿಗಳ ಸಮನ್ವಯತೆ ಕೊರತೆ ಬಗ್ಗೆ ಪಿಡಬ್ಲ್ಯೂಡಿ… ಬಂಟ್ವಾಳದಲ್ಲಿ ನೇತ್ರಾವತಿ ನದಿ ನೀರಿನ ಮಟ್ಟ ಭಾರೀ ಹೆಚ್ಚಳ: ತಗ್ಗು ಪ್ರದೇಶ ಮುಳುಗಡೆ;… ಪ್ರವಾಹ: ದಕ್ಷಿಣ ಕಾಶಿ ನಂಜನಗೂಡಿನಲ್ಲಿ ನಂಜುಂಡೇಶ್ವರನಿಗೆ ಜಲದಿಗ್ಬಂಧನ ಕಪಿಲಾ ನದಿ ಪ್ರವಾಹ: ಶ್ರೀ ಮಲ್ಲನ ಮೂಲೆ ಮಠದ ಬಳಿ ರಸ್ತೆಗೆ ನುಗ್ಗಿದ… ಆಸ್ತಿ ವಿವಾದ: ಮಚ್ಚಿನಿಂದ ಹೊಡೆದು ಮಾವನಿಂದಲೇ ಸೊಸೆಯ ಭೀಕರ ಹತ್ಯೆ; ಇನ್ನಿಬ್ಬರ ಮೇಲೂ… ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ: ವಿಧಾನಸೌಧಕ್ಕೆ ಬಿಜೆಪಿ ಮುತ್ತಿಗೆ ಯತ್ನ; ಪೊಲೀಸರಿಂದ ಲಾಠಿಚಾರ್ಜ್,…

ಇತ್ತೀಚಿನ ಸುದ್ದಿ

ಭಾರತೀಯ ಪಶು ವೈದ್ಯಕೀಯ ಪರಿಷತ್ ಸದಸ್ಯರಾಗಿ ಮಂಗಳೂರಿನ ಡಾ. ಸುಶಾಂತ್ ರೈ ಬೆಳ್ಳಿಪ್ಪಾಡಿ ಆಯ್ಕೆ

10/06/2024, 15:54

ಮಂಗಳೂರು(reporterkarnataka.com): ಭಾರತೀಯ ಪಶುವೈದ್ಯಕೀಯ ಪರಿಷತ್ (ವಿಸಿಐ)ಗೆ 11 ಸದಸ್ಯರನ್ನು ಆಯ್ಕೆ ಮಾಡಲು ಶನಿವಾರ ಆನ್‌ಲೈನ್ ಮೂಲಕ ಚುನಾವಣೆ ನಡೆಯಿತು. ದೇಶದ ನಾನಾ ರಾಜ್ಯಗಳಿಂದ ನಾನಾ ವಿಭಾಗದಲ್ಲಿ 93 ಅಭ್ಯರ್ಥಿಗಳು ಭಾಗವಹಿಸಿದ್ದು, ಅದರಲ್ಲಿ ಕೆಪಿಎಫ್‌ಬಿಎ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಹಾಗೂ ರೈಸನ್ಸ್ ನ್ಯೂಟ್ರಿಷನ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ, ಮಂಗಳೂರು ಮೂಲದ ಡಾ. ಸುಶಾಂತ್ ರೈ ಬೆಳ್ಳಿಪ್ಪಾಡಿ ಅತ್ಯಧಿಕ ಮತಗಳನ್ನು ಗಳಿಸಿ ಭಾರತೀಯ ಪಶು ವೈದ್ಯಕೀಯ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಡಾ. ಸುಶಾಂತ್ ರೈ ಅವರು ನಾಲ್ಕು ವರ್ಷಗಳ ಅವಧಿಗೆ ಕೆಪಿಎಫ್‌ಬಿಎ ಸಂಸ್ಥೆಯ ಅಧ್ಯಕ್ಷರಾಗಿದ್ದರು. ಕೆವಿಎಎಫ್‌ಎಸ್‌ಯು ಮತ್ತು ಕೆಪಿಎಫ್‌ಬಿಎ ಕುಕ್ಕುಟ ತರಬೇತಿ ಕೇಂದ್ರ ಮತ್ತು ರೋಗನಿರ್ಣಯ ಪ್ರಯೋಗಾಲಯವನ್ನು ಸ್ಥಾಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅವರ ಕೆಪಿಎಫ್ ಬಿಎ ಅಧಿಕಾರಾವಧಿಯಲ್ಲಿ, ಕುಕ್ಕುಟ ವಿಜ್ಞಾನ ಕ್ಷೇತ್ರದಲ್ಲಿ ಸಹಕಾರಿ ಸಂಶೋಧನೆಗಾಗಿ ಹಲವು ಕ್ರಮ ಕೈಗೊಂಡಿದ್ದರು. ಬೆಂಗಳೂರಿನ ಯುನಿವರ್ಸಿಟಿ ಆಫ್ ಅಗ್ರಿಕಲ್ಚರಲ್ ಸೈನ್ಸ್ ನ ಪಶುವೈದ್ಯಕೀಯ ಕಾಲೇಜಿನಿಂದ ಪಶು ವೈದ್ಯಕೀಯ ಪದವೀಧರರಾಗಿದ್ದಾರೆ. ಅವರು ಎರಡು ದಶಕಗಳಿಗಿಂತಲೂ ಹೆಚ್ಚು ಕಾಲ ಕುಕ್ಕುಟ ಉದ್ಯಮದಲ್ಲಿ ಸೇವೆ ಸಲ್ಲಿಸುತ್ತಿದ್ದು, ಹಲವಾರು ರೈತರಿಗೆ ತರಬೇತಿ ನೀಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು