8:08 PM Friday21 - March 2025
ಬ್ರೇಕಿಂಗ್ ನ್ಯೂಸ್
ಅಂಗನವಾಡಿ ಆಹಾರ ಗುಣಮಟ್ಟದ ನಿರ್ಲಕ್ಷ್ಯ ವಹಿಸಿದರೆ ಉಪನಿರ್ದೇಶಕರ ಮೇಲೆ ಕ್ರಮ: ಸಚಿವೆ ಲಕ್ಷ್ಮೀ… ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉಚಿತ ಸಾರಿಗೆ ಸೌಲಭ್ಯ: ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಎಸ್ಸೆಸ್ಸೆಲ್ಸಿ ಪರೀಕ್ಷೆ: ವಿದ್ಯಾರ್ಥಿಗಳಿಗೆ ಸ್ಪೀಕರ್ ಖಾದರ್, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಪ್ರತಿಪಕ್ಷದ… ಶಿವಮೊಗ್ಗ ಜನೌಷಧಿ ಕೇಂದ್ರದಲ್ಲಿ ಇತರ ಔಷಧಿ, ಮಾತ್ರೆಗಳ ಮಾರಾಟ: ವಿಧಾನ ಪರಿಷತ್ತಿನಲ್ಲಿ ಬಿಜೆಪಿಯ… Minior Student Suicide | ಚಿಕ್ಕಮಗಳೂರು: ಫೇಲ್ ಆಗುವ ಭಯದಿಂದ 9ನೇ ತರಗತಿ… ಅಂಗನವಾಡಿ: 2011ರ ನಂತರ ನಿವೃತ್ತಿಯಾದವರಿಗೆ ಗ್ರ್ಯಾಚ್ಯುಟಿ; ಸಿಎಂ ಜೊತೆ ಚರ್ಚಿಸಿ ಕ್ರಮ: ಸಚಿವೆ… Legislative Council | ಜಲ‌ ಮತ್ತು ವಾಯು ಕಾಯ್ದೆ ಉಲ್ಲಂಘಿಸುವ ಕೈಗಾರಿಕೆಗಳ ವಿರುದ್ಧ… ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳ ಆರಂಭ: ಮುಖ್ಯ ಕಾರ್ಯದರ್ಶಿ ಡಾ.… Primary Teachers | ಪ್ರಾಥಮಿಕ ಶಾಲಾ ಶಿಕ್ಷಕರ ಬೇಡಿಕೆಗಳ ಪರಿಶೀಲನೆಗೆ ಅಧಿಕಾರಿಗಳ ಸಮಿತಿ… ಬೆಂಗಳೂರು: 20ರಿಂದ 4 ದಿನಗಳ ಕಾಲ ಲೇಸರ್ ಚಿಕಿತ್ಸೆ, ಸರ್ಜರಿ ಅಂತಾರಾಷ್ಟ್ರೀಯ ಸಮ್ಮೇಳನ

ಇತ್ತೀಚಿನ ಸುದ್ದಿ

ಪ್ರಧಾನಿಯ ಸ್ಚಚ್ಫತಾ ಆಂದೋಲನಕ್ಕೆ ಕ್ಯಾರೇ ಎನ್ನದ ರೈಲ್ವೆ ಇಲಾಖೆ: ಫರಂಗಿಪೇಟೆಯಲ್ಲಿ ರಾಶಿ ರಾಶಿ ತ್ಯಾಜ್ಯಗಳ ವಿಶ್ವರೂಪ ದರ್ಶನ

10/06/2024, 11:00

ಯಾದವ ಕುಲಾಲ್ ಅಗ್ರಬೈಲು ಬಿ.ಸಿ.ರೋಡ್

info.reporterkarnataka@gmail.com

ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಫರಂಗಿಪೇಟೆ ಬಳಿ ಸಿಗುವ ಪುದು ಗ್ರಾಮದಲ್ಲಿ ಅಲ್ಲಲ್ಲಿ ತ್ಯಾಜ್ಯಗಳದ್ದೇ ಕಾರುಬಾರು.
ಹೆದ್ದಾರಿಯ ರಸ್ತೆ ಎಲ್ಲಾ ಕಡೆ, ಫರಂಗಿಪೇಟೆ ಹೃದಯ ಭಾಗದಲ್ಲಿರುವ ರೈಲ್ವೇ ಇಲಾಖೆಗೆ ಸೇರಿದ ಸ್ಥಳ, ಫರಂಗಿಪೇಟೆ-ಕುಂಪನಮಜಲು ರಸ್ತೆಗೆ ಹೋಗುವ ರೈಲ್ವೇ ಕ್ರಾಸಿಂಗ್ ನಂತರ ಸಿಗುವ ಸೇತುವೆ ಬುಡದಲ್ಲಿ ತ್ಯಾಜ್ಯಗಳು ತುಂಬಿ ತುಳುಕುತ್ತಿದೆ.


ಫರಂಗಿಪೇಟೆಯ ಒಂದು ಬದಿಯಲ್ಲೇ ರೈಲ್ವೇ ಇಲಾಖೆಗೆ ಸೇರಿದ ಸ್ಥಳವೇ ಹೆಚ್ಚಿನ ಫ್ಲಾಟ್‌ಗಳ ಮನೆಯ ವಾರಸುದಾರರಿಗೆ ಕಸ ಹಾಕುವ ಕೇಂದ್ರ ಸ್ಥಳವಾಗಿ ಪರಿಣಮಿಸಿದೆ. ರೈಲ್ವೇ ಜಾಗದಲ್ಲಿ ಒಂದು ಕಡೆ ಕಟ್ಟಡ ಕಾಮಗಾರಿ ಕೆಲಸ ನಡೆಯುತ್ತಿದ್ದು, ವರದೇಶ್ವರ ದೇವಸ್ಥಾನದ ಬಳಿ ಹೆದ್ದಾರಿಗೆ ಸೇರುವ ರಸ್ತೆಯ ಬದಿಯಲ್ಲಿ ತ್ಯಾಜ್ಯಗಳು ರಾಶಿ ಬಿದ್ದಿವೆ. ರೈಲ್ವೇ ಇಲಾಖೆಯ ಅಧೀನದಲ್ಲಿರುವ ಸ್ಥಳವನ್ನು ಭದ್ರತೆ ಮಾಡಿ ಕಾಪಾಡುವುದು ರೈಲ್ವೇ ಇಲಾಖೆಯದ್ದಾಗಿದ್ದು, ಮೀನು ಮಾರ್ಕೆಟ್ ಎತ್ತಂಗಡಿ ಮಾಡುವಾಗ ರೈಲ್ವೇ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಬಂದು ಸ್ಥಳ ಪರಿಶೀಲನೆ ಮಾಡಿ ನಂತರ ಅದನ್ನು ಸುಭದ್ರವಾಗಿಡುವ ಗೋಜಿಗೇ ಹೋಗಲಿಲ್ಲ. ಸಿಸಿ ಕ್ಯಾಮರವನ್ನಾದರೂ ಈ ಪ್ರದೇಶದಲ್ಲಿ ಅಳವಡಿಸಿರುತ್ತಿದ್ದರೆ ತ್ಯಾಜ್ಯ ಎಸೆಯುವವರು ಆ ಕಡೆ ತಲೆ ಹಾಕುತ್ತಿರಲಿಲ್ಲ.
*ಸೇತುವೆಯಡಿ ರಾಶಿ ತ್ಯಾಜ್ಯ:* ಫರಂಗಿಪೇಟೆ ರೈಲ್ವೇ ಕ್ರಾಸಿಂಗ್ ನಂತರ ಸಿಗುವ ಸೇತುವೆಯಡಿ ರಾಶಿ ತ್ಯಾಜ್ಯಗಳಿದ್ದು ಇನ್ನೇನು ಮಳೆ ನೀರಿಗೆ ನದಿ ಸೇರಲು ಸಿದ್ಧವಾಗಿದೆ. ಈ ರಸ್ತೆಯುದ್ದಕ್ಕೂ ಫ್ಲಾಟುಗಳು ಸಾಲು ಸಾಲಾಗಿದ್ದು ಕಸ ಉತ್ಪತ್ತಿಗೆ ಕಡಿವಾಣವೇ ಇಲ್ಲದಂತಾಗಿದೆ.
ಈಗಿನ ಕಾಲದಲ್ಲಿ ತ್ಯಾಜ್ಯ ಉತ್ಪತ್ತಿಯಾಗದ ಮನೆಗಳಿರುವುದಂಟೇ. ಮಾರ್ಕೆಟ್‌ಗೆ ಹೋಗಿ ಸಾಮಾನು ಖರೀದಿಸಿದರೆ ಎಲ್ಲಾ ಪ್ಲಾಸ್ಟಿಕ್ ಪ್ಯಾಕೇಟ್‌ಗಳು. ಇನ್ನು ತರಕಾರಿ, ಮೀನು ತ್ಯಾಜ್ಯ ಹೀಗೆ ದಿನಂಪ್ರತಿ ಅಡುಗೆ ಮಾಡುವ ಮನೆಯಲ್ಲಿ ತ್ಯಾಜ್ಯ ಉತ್ಪತ್ತಿಯಾಗುವುದು ಸಹಜ. ಆದರೆ ತಮ್ಮ ಮನೆಯಲ್ಲಿ ಉತ್ಪತಿಯಾಗುವ ತ್ಯಾಜ್ಯವನ್ನು ಎಲ್ಲೋ ಒಂದು ಕಡೆ ಎಸೆದು ಬಂದು ಪರಿಸರಕ್ಕೆ ಹಾನಿ ಮಾಡುವ ಬದಲು ಪಂಚಾಯತ್ ವತಿಯಿಂದ ಕಸ ಸಂಗ್ರಹಣ ಮಾಡಲ್ಪಡುವ ವ್ಯವಸ್ಥೆಗೆ ಸಹಕಾರ ನೀಡಿದರೆ ಎಲ್ಲರ ಆರೋಗ್ಯಕ್ಕೆ ಒಳ್ಳೆಯದು.
ಪ್ರತೀ ಮನೆ ಮನೆಗೆ ಪ್ರತೀ ವಾರದಲ್ಲಿ ಕಸಗಳನ್ನು ತೆಗೆದುಕೊಳ್ಳಲು ಪಂಚಾಯತ್ ವತಿಯಿಂದ ಗುತ್ತಿಗೆದಾರರ ಮುಖಾಂತರ ವಾಹನದ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿಯೇ ಲಕ್ಷಾಂತರ ಹಣ ಖರ್ಚು ಮಾಡುತ್ತೇವೆ. ಗ್ರಾಮದಲ್ಲಿರುವ ಕೆಲವು ಫ್ಲಾಟುಗಳ ಮನೆಯವರು ಇದಕ್ಕೆ ಸ್ಪಂದಿಸದೇ ರಸ್ತೆ ಬದಿಯಲ್ಲಿ, ನೀರು ಹಾದು ಹೋಗುವ ಸೇತುವೆ ಬದಿಯಲ್ಲಿ ಬಿಸಾಡುತ್ತಾರೆ. ಎಷ್ಟು ಹೇಳಿದರೂ ಅವರಿಗೆ ಕಸ ಬಿಸಾಡುವ ಹವ್ಯಾಸಿವಾಗಿ ಬಿಟ್ಟಿದೆ. ಮುಂದಿನ ದಿನಗಳಲ್ಲಿ ಸೇತುವೆ ಬಳಿ ಸಿಸಿ ಕ್ಯಾಮರಾ ಅಳವಡಿಸಿ ಕಸ ಬಿಸಾಡುವವರನ್ನು ಪತ್ತೆ ಹಚ್ಚಲಾಗುವುದು ಎಂದು ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಶೀದಾ ಹೇಳುತ್ತಾರೆ.

ಇತ್ತೀಚಿನ ಸುದ್ದಿ

ಜಾಹೀರಾತು