ಇತ್ತೀಚಿನ ಸುದ್ದಿ
ಗೋಣಿಕೊಪ್ಪಲು ಬಿಟ್ಟಂಗಾಲ ಮುಖ್ಯರಸ್ತೆಯಲ್ಲಿ ಖಾಸಗಿ ಬಸ್ – ಜೀಪು ಅಪಘಾತ: ಅದೃಷ್ಟವಶಾತ್ ಎಲ್ಲರೂ ಪಾರು
23/09/2025, 12:33

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnata@gmail.com
ವಿರಾಜಪೇಟೆ ಗೋಣಿಕೊಪ್ಪಲು ಮುಖ್ಯ ರಸ್ತೆಯ ಬಿಟ್ಟಂಗಾಲದ, ಬಿ ಶೆಟ್ಟಿಗೇರಿಗೆ ಹೋಗುವ ಮಾರ್ಗದ ಮುಂಭಾಗದ ತಿರುವಿನಲ್ಲಿ ಇಂದು ಬೆಳಗ್ಗೆ ವಿರಾಜಪೇಟೆ ಯಿಂದ ಬರುತ್ತಿದ್ದ ಅಣ್ಣಪ್ಪಸ್ವಾಮಿ ಬಸ್ಸಿಗೆ, ಮೈಸೂರಿನಿಂದ ಕೋಳಿ ತುಂಬಿಕೊಂಡು ಬರುತ್ತಿದ್ದ ಪಿಕ್ ಅಪ್ ಜೀಪ್ ಡಿಕ್ಕಿಯಾಗಿ, ಜೀಪ್ ಒಂದು ಬದಿ ರಸ್ತೆಯ ಪಕ್ಕಕ್ಕೆ ವಾಲಿ, ಸಂಪೂರ್ಣ ಜಖಂಗೊಂಡಿದೆ.
ಜೀಪಿನಲ್ಲಿದ್ದ ಚಾಲಕ ಹಾಗೂ ಮತೊಬ್ಬನಿಗೆ ಯಾವುದೇ ರೀತಿಯ ಗಾಯಗಳು ಉಂಟಾಗಿಲ್ಲ. ಜೀಪ್ ನ ವೇಗದ ಚಾಲನೆ ಈ ಅಪಘಾತಕ್ಕೆ ಕಾರಣ ಎಂದು ಪ್ರತಿಕ್ಷ ದರ್ಶಿಗಳು ಹೇಳಿದ್ದಾರೆ.
ಮೈಸೂರಿನಿಂದ ಕೋಳಿ ತುಂಬಿಕೊಂಡು, ಕೊಡಗು ಹಾಗೂ ಕೇರಳಕ್ಕೆ ಈ ಮಾರ್ಗದಲ್ಲಿ ನೂರಾರು ಪಿಕಪ್ ಜೀಪುಗಳು ಪ್ರತಿನಿತ್ಯ ಸಂಚರಿಸುತ್ತಿದ್ದು, ಬಹಳಷ್ಟು ವಾಹನಗಳು ಅತಿ ವೇಗದಿಂದ ಹಾಗೂ ಅಜಾಗೂರಕ ಚಾಲನೆಯಿಂದ ಹಲವು ಅಪಘಾತಗಳು ಆಗಾಗ ಸಂಭವಿಸುತ್ತದೆ. ಪೊಲೀಸ್ ಇಲಾಖೆ ಕೋಳಿ ತುಂಬಿದ ವಾಹನಗಳ ವೇಗದ ಚಾಲನೆಗೆ ಮಿತಿಗೊಳಿಸಬೇಕಾಗಿದೆ ಎಂದು ಸಾರ್ವಜನಿಕರು ಅಭಿಪ್ರಾಯಸಿದ್ದಾರೆ.