9:11 PM Tuesday26 - November 2024
ಬ್ರೇಕಿಂಗ್ ನ್ಯೂಸ್
ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ… ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣಗೆ ಜಯ: ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಮುಖಭಂಗ ​ ಮಹಾರಾಷ್ಟ್ರ: ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ? ಆರೆಸ್ಸೆಸ್ ಮುಖ್ಯಸ್ಥ ಡಾ. ಭಾಗವತ್ ಡಿ. 7ರಂದು ಕಲ್ಲಡ್ಕಕ್ಕೆ: ಶ್ರೀರಾಮ ವಿದ್ಯಾಕೇಂದ್ರ ಕ್ರೀಡೋತ್ಸವದಲ್ಲಿ… ಬೆಂಗಳೂರು ಮತ್ತು ಚೆನ್ನೈಗೆ ಆಸ್ಟ್ರೇಲಿಯನ್ ಡಿಜಿಟೆಕ್ ಟ್ರೇಡ್ ಮಿಷನ್ ಭೇಟಿ

ಇತ್ತೀಚಿನ ಸುದ್ದಿ

ಪ್ರತಿಷ್ಠಿತ ಸಂದೇಶ ಪ್ರಶಸ್ತಿಗೆ ಆಯ್ಕೆಯಾದ ಡಾ. ಟಿ.ಸಿ. ಪೂರ್ಣಿಮಾ: ಗಟ್ಟಿಗಿತ್ತಿ ಬರಹಗಾರ್ತಿ, ಐಐಎಸ್ ಅಧಿಕಾರಿ

14/02/2022, 08:47

ಮಂಗಳೂರು(reporterkarnataka.com); ಮಂಗಳೂರಿನ ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನವು ಸಾಹಿತ್ಯ, ಶಿಕ್ಷಣ, ಮಾಧ್ಯಮ, ಕಲೆ ಹಾಗೂ ಸಂಗೀತ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿ ಹಾಗೂ ಸಂಘಟನೆಗಳಿಗೆ ನೀಡುವ ವಾರ್ಷಿಕ 2020-21 ಮತ್ತು 2021-22ನೇ ಸಾಲಿನ ರಾಜ್ಯ ಮಟ್ಟದ ಸಂದೇಶ ಪ್ರಶಸ್ತಿಗೆ ಆಯ್ಕೆಯಾದವರಲ್ಲಿ ಡಾ. ಟಿ.ಸಿ. ಪೂರ್ಣಿಮಾ ಅವರು ಒಬ್ಬರು. ಡಾ. ಪೂರ್ಣಿಮಾ ಅವರು ಓರ್ವ ಹಿರಿಯ ಐಐಎಸ್ ಅಧಿಕಾರಿ. ಎಲ್ಲಕ್ಕಿಂತ ಮಿಗಿಲಾಗಿ ಒಬ್ಬ ಸಂವೇದನಾಶೀಲ ಬರಹಗಾರ್ತಿ. 

ಡಾ.ಪೂರ್ಣಿಮಾ ಅವರು ಕೇಂದ್ರ ಸರಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಉನ್ನತ ಅಧಿಕಾರಿಗಳು ಮತ್ತು ಉಪ ನಿರ್ದೇಶಕರು. ಅವರು ಎರಡು ಬಾರಿ ಕರ್ನಾಟಕದ ಮುಖ್ಯಮಂತ್ರಿಗಳಿಗೆ ವಿಶೇಷ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಮೊದಲ ಮಹಿಳೆ. ಕವಿಯತ್ರಿ, ಸಮಾಜ ಸೇವಕಿ, ಅಧಿಕಾರಿ, ಒಟ್ಟಾರೆಯಾಗಿ ಮಾನವತಾವಾದಿ.

ಕೇಂದ್ರ ವಾರ್ತಾ ಪ್ರಸಾರ ಇಲಾಖೆಗೆ ದೊಡ್ಡ ಹುದ್ದೆಗೇರಿದ ಕರ್ನಾಟಕದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಹಿರಿಯ ಐಐಎಸ್ ಅಧಿಕಾರಿಯಾದ ಅವರು ಪಿಎಚ್.ಡಿ.(ಸಂವಹನ), ಎಂ.ಎ.(ಕನ್ನಡ) ಮಾಡಿದ್ದಾರೆ.

ಬಿ.ಎಸ್‌ಸಿ, ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಕೂಡ ಪಡೆದಿದ್ದಾರೆ. ಕೇಂದ್ರ ವಾರ್ತಾ ಸೇವೆಗೆ ಕರ್ನಾಟಕ ರಾಜ್ಯದಿಂದ ಆಯ್ಕೆಗೊಂಡ ಮೊದಲ ಮಹಿಳಾ ಅಧಿಕಾರಿ.

ಪ್ರಸ್ತುತ ಅವರು ಮೈಸೂರಿನ ಕ್ಷೇತ್ರ ಪ್ರಚಾರ ನಿರ್ದೇಶನಾಲಯದ
ಸಹಾಯಕ ನಿರ್ದೇಶಕರು ಮತ್ತು ಘಟಕದ ಮುಖ್ಯಸ್ಥರು ಆಗಿದ್ದಾರೆ.

ಯಾವ ಯಾವ ಹುದ್ದೆ ನಿರ್ವಹಿಸಿದ್ದರು?:

* ಮುಖ್ಯಸ್ಥರು ಮತ್ತು ಸುದ್ದಿ ಸಂಪಾದಕರು, ಆಕಾಶವಾಣಿ, ಬೆಂಗಳೂರು (೨೦೦೭-೨೦೧೩) 

(ಆಕಾಶವಾಣಿ ಸುದ್ದಿ ವಿಭಾಗದ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸಿದ ಮೊದಲ ಮಹಿಳಾ ಅಧಿಕಾರಿ) 

(‘ಅತ್ಯುತ್ತಮ ಸುದ್ದಿ ಸಂಪಾದಕರು’ ರಾಷ್ಟçಪ್ರಶಸ್ತಿಗೆ ಭಾಜನರಾದ ರಾಜ್ಯದ ಮೊದಲ ವಾರ್ತಾ ಅಧಿಕಾರಿ) 

* ಮುಖ್ಯಮಂತ್ರಿಯವರ ವಿಶೇಷಾಧಿಕಾರಿ (ಮಾಧ್ಯಮ), ಕರ್ನಾಟಕ ಸರ್ಕಾರ, ಬೆಂಗಳೂರು (೨೦೦೬-೨೦೦೭) 

* ಮುಖ್ಯಮಂತ್ರಿಯವರ ವಾರ್ತಾಧಿಕಾರಿ (ಮಾಧ್ಯಮ) ಕರ್ನಾಟಕ ಸರ್ಕಾರ, ಬೆಂಗಳೂರು (೨೦೦೪-೨೦೦೬) 

* ಮುಖ್ಯಮಂತ್ರಿಯವರ ವಿಶೇಷಾಧಿಕಾರಿ (ಮಾಧ್ಯಮ), ಕರ್ನಾಟಕ ಸರ್ಕಾರ, ಬೆಂಗಳೂರು (೧೯೯೯-೨೦೦೪) 

(ರಾಜ್ಯದ ಮೂವರು ಮುಖ್ಯಮಂತ್ರಿಗಳಿಗೆ ವಿಶೇಷಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ರಾಜ್ಯದ ಮೊದಲ ಮಹಿಳಾ ಅಧಿಕಾರಿ) 

* ಸುದ್ದಿ ಸಂಪಾದಕರು, ದೂರದರ್ಶನ ಕೇಂದ್ರ, ಬೆಂಗಳೂರು (೧೯೯೬-೧೯೯೯) 

(ರಾಜ್ಯದ ಟೆಲಿವಿಷನ್ ಇತಿಹಾಸದಲ್ಲಿ ಕನ್ನಡ ವಾಹಿನಿಯಲ್ಲಿ ಈ ಹುದ್ದೆ ನಿರ್ವಹಿಸಿದ ಮೊದಲ ಮಹಿಳಾ ಅಧಿಕಾರಿ) 

* ಸಹಾಯಕ ವಾರ್ತಾಧಿಕಾರಿ, ಪಿ.ಐ.ಬಿ. ಬೆಂಗಳೂರು (ಆಗಸ್ಟ್ ೧೯೯೬ – ಅಕ್ಟೋಬರ್ ೧೯೯೬) 

* ಕ್ಷೇತ್ರ ಪ್ರದರ್ಶನಾಧಿಕಾರಿ, ಡಿ.ಎ.ವಿ.ಪಿ, ಬೆಂಗಳೂರು (ಹೆಚ್ಚುವರಿ ಹುದ್ದೆ) (ಜನವರಿ ೧೯೯೬- ಜುಲೈ ೧೯೯೬) 

* ಸಹಾಯಕ ಸಂಪಾದಕರು, ಡಿ.ಎ.ವಿ.ಪಿ., ಬೆಂಗಳೂರು (೧೯೯೪- ೧೯೯೬) 

* ಉಪಸಂಪಾದಕರು, ಯೋಜನಾ, ಪ್ರಕಟಣಾ ವಿಭಾಗ, ಬೆಂಗಳೂರು

ಪ್ರಕಟಿತ ಕೃತಿಗಳು:

* ಕಾವ್ಯ: 

1. ಭೂಮಿ ನಿನ್ನದಲ್ಲ – ಐಬಿಎಚ್ ಪ್ರಕಾಶನ-೨೦೦೩ 

2. ಹಾದಿಬದಿಯ ಹದಿಬದೆ – ಲಿಪಿ ಪ್ರಕಾಶನ-೧೯೯೨ 

3. ಮೌನಗೀತ – ಶ್ರೀ ವಿಜಯ ಪ್ರಕಾಶನ-೧೮೮೯ 

*ಅನುವಾದ: 

1. ಭಾರತದ ಸ್ತ್ರೀರತ್ನ – ಪ್ರಕಾಶನ ವಿಭಾಗ, ಭಾರತ ಸರ್ಕಾರ, ನವದೆಹಲಿ – ೨೦೧೯ (ಹಿಂದಿಯಿAದ) 

2. ಗಾಂಧಿ (ಗಾಂಧೀಜಿ ಮೊಮ್ಮಗಳು ಸುಮಿತ್ರಾ ಗಾಂಧಿ ಕುಲಕರ್ಣಿಯವರ ಕೃತಿ)- ಪ್ರಭೆ ಪ್ರಕಾಶನ -೨೦೦೫ (ಹಿಂದಿಯಿಂದ) 

3. ನರ‍್ಗುದುರೆಗೆ ರೋಮವಿದ್ದಾಗ – ಎನ್‌ಬಿಟಿ- ೧೯೯೫ 

4. ಮಹಿಳೆಯರಲ್ಲಿ ಉದ್ಯಮಶೀಲತೆ – ಅವೇಕ್-೧೯೯೪ 

5. ಮುದ್ದಣ (ಮೂಲ: ವಿ.ಸೀ) – ಕೇಂದ್ರ ಸಾಹಿತ್ಯ ಅಕಾಡೆಮಿ -೧೯೯೩ 

*ಲೇಖನಗಳ ಸಂಗ್ರಹ: 

1.ಕಣ್ಣಳತೆ – ಸಿವಿಜಿ ಪ್ರಕಾಶನ-೨೦೦೪ 

* ಸಂಶೋಧನೆ: 

1. ಆಧುನಿಕ ಸಂವಹನ ಮಾಧ್ಯಮಗಳು ಮತ್ತು ಕನ್ನಡದ ಅಭಿವೃದ್ಧಿ ೨೦೦೩ +(ಪರಿಷ್ಕೃತ)೨೦೧೮ – ಕನ್ನಡ ವಿಶ್ವವಿದ್ಯಾನಿಲಯ, ಹಂಪಿ 

2. ದಿಟದ ಮನೆ (ಕುವೆಂಪು ಸಮಗ್ರ ಸಾಹಿತ್ಯದಲ್ಲಿ ಸಾವಿನ ಪರಿಕಲ್ಪನೆ) – ಪ್ರಭೆ ಪ್ರಕಾಶನ -೨೦೧೪ 

3. ಶ್ರೇಷ್ಠ ಸಂಸದೀಯ ಪಟುಗಳ ಮಾಲಿಕೆ – ಎಸ್. ಸಿ. ಮಲ್ಲಯ್ಯ – ಕರ್ನಾಟಕ ಸರ್ಕಾರ-೨೦೦೫ 

4. ದೂರದರ್ಶನ – ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರ್ಕಾರ – ೨೦೦೪ 

5. ಆಧುನಿಕ ಸಂವಹನ ಮಾಧ್ಯಮಗಳು ಮತ್ತು ಕನ್ನಡದ ಅಭಿವೃದ್ಧಿ – ಕನ್ನಡ ವಿಶ್ವವಿದ್ಯಾನಿಲಯ, ಹಂಪಿ-೨೦೦೩ 

* ಮಕ್ಕಳ ಸಾಹಿತ್ಯ: 

1. ಕಾಡಿನ ಕಥೆಗಳು – ಪ್ರಕಟಣಾ ವಿಭಾಗ -ಭಾರತ ಸರ್ಕಾರ-೧೯೯೩ 

2. ಯೋಜನೆಗಳು – ಕನ್ನಡ ವಿಶ್ವವಿದ್ಯಾಲಯ, ಹಂಪಿ -೧೯೯೨ 

* ಸಂಪಾದಿತ ಕೃತಿಗಳು: 

1. ಆಲೋಚನೆ (ಮಕ್ಕಳ ಸಾಹಿತ್ಯ ಚಿಂತನೆ) -ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು-೧೯೯೨ 

2. ಸ್ಥಿತಪ್ರಜ್ಞ (ಪರಮಪೂಜ್ಯ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ನೆನಪು) – ೨೦೧೬ 

ಶ್ರೀ ಆದಿಚುಂಚನಗಿರಿ ಶಾಖಾಮಠ – ಹಾಸನ

ಇದೀಗ ಡಾ. ಪೂರ್ಣಿಮಾ ಅವರು ಸಂದೇಶ ರಾಜ್ಯಮಟ್ಟದ ಮಾಧ್ಯಮ ಪ್ರಶಸ್ತಿಗೆ  ಆಯ್ಕೆಯಾಗಿದ್ದಾರೆ

ಇತ್ತೀಚಿನ ಸುದ್ದಿ

ಜಾಹೀರಾತು