ಇತ್ತೀಚಿನ ಸುದ್ದಿ
ಪ್ರಮುಖ 6 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ: ರಾಜ್ಯ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ !
21/05/2021, 18:16
ಬೆಂಗಳೂರು(reporterkarnataka news) : ಆಡಳಿತ ಯಂತ್ರಕ್ಕೆ ರಾಜ್ಯ ಸರಕಾರ
ಮೇಜರ್ ಸರ್ಜರಿ ಮಾಡಿದೆ. ಆಯಕಟ್ಟಿನಲ್ಲಿದ್ದ
6 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.
ರಾಜ್ಯ ಸರ್ಕಾರ ಈ ಕುರಿತು ಆದೇಶ ಹೊರಡಿಸಿದ್ದು, ಬೆಂಗಳೂರಿನಲ್ಲಿ ಆಡ್ಮಿನಿಸ್ಟ್ರೇಟಿವ್ ( ಜೀಫ್ ಆಫೀಸ್) ಐಜಿಪಿ ಐಪಿಎಸ್ ಅಧಿಕಾರಿ ಕೆ.ವಿ. ಶರತ್ ಚಂದ್ರ ಅವರನ್ನು ಐಜಿಪಿ, ಫಾರೆಸ್ಟ್ ಸೆಲ್ ಗೆ ವರ್ಗಾವಣೆ ಮಾಡಲಾಗಿದೆ.
ಬಳ್ಳಾರಿ ವಲಯ ಐಜಿಪಿ ಎಂ. ನಂಜುಂಡಸ್ವಾಮಿ ಅವರನ್ನು(1997ನೇ ಕರ್ನಾಟಕ ಗ್ರೇಡ್ ಐಪಿಎಸ್ ಅಧಿಕಾರಿ ) ಬೆಂಗಳೂರಿನ ಬಂಧಿಖಾನೆಯ ಐಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ.
ಮನೀಶ್ ಖರ್ಬೀಕರ್ ಅವರನ್ನು ಕಲಬುರ್ಗಿಯ ಈಶಾನ್ಯ ವಿಭಾಗದ ಐಜಿಪಿ ಸ್ಥಾನದಿಂದ, ಬಳ್ಳಾರಿ ವಿಭಾಗದ ಐಜಿಪಿಯಾಗಿ, ರಾಘವೇಂದ್ರ ಸುಹಾಸ್ ಅವರನ್ನು ಬೆಳಗಾವಿಯ ನಾರ್ಥೆರೆನ್ ವಿಭಾಗದ ಐಜಿಪಿ ಸ್ಧಾನದಿಂದ ಎತ್ತಂಗಡಿ ಮಾಡಿ, ಬೆಂಗಳೂರಿನ ಆಂತರಿಕ ಭದ್ರತೆಯ ಐಜಿಪಿ ಆಗಿ ವರ್ಗಾವಣೆ ಮಾಡಲಾಗಿದೆ.
ಎನ್. ಸತೀಶ್ ಕುಮಾರ್ ಅವರನ್ನು ಕಲಬುರ್ಗಿ ನಗರ ಐಜಿಪಿ ಸ್ಥಾನದಿಂದ ವರ್ಗಾವಣೆ ಮಾಡಿ, ಬೆಳಗಾವಿ ವಿಭಾಗದ ಐಜಿಪಿಯಾಗಿ, ವೈ. ಎಸ್. ರವಿ ಕುಮಾರ್ ಅವರನ್ನು ನೇಮಕಾತಿ ವಿಭಾಗದ ಡಿಐಜಿಪಿ ಸ್ಥಾನದಿಂದ ವರ್ಗಾವಣೆ ಮಾಡಿ, ಕಲಬುರ್ಗಿ ನಗರ ವ್ಯಾಪ್ತಿಯ ಡಿಐಜಿ ಹಾಗೂ ಕಮೀಷನರ್ ಆಫ್ ಪೊಲೀಸ್ ಆಗಿ ವರ್ಗಾವಣೆ ಮಾಡಿದೆ.