ಇತ್ತೀಚಿನ ಸುದ್ದಿ
ಪ್ರಧಾನಿ ಹೆಲಿಕಾಪ್ಟರ್ ಟೇಕ್ ಆಫ್ ವೇಳೆ ಕಪ್ಪು ಬಲೂನ್ ಹಾರಿಸಿದ ಪ್ರಕರಣ: ರಾಜೀವ್ ರತನ್ ಕೊನೆಗೂ ಪೊಲೀಸರಿಗೆ ಶರಣು
08/07/2022, 22:44
ವಿಜಯವಾಡ(reporterkarnataka.com): ಆಂಧ್ರಪ್ರದೇಶಕ್ಕೆ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ವಾಪಸ್ ತೆರಳುವ ವೇಳೆ ಗನ್ನವರಂ ವಿಮಾನ ನಿಲ್ದಾಣದ ವ್ಯಾಪ್ತಿಯಲ್ಲಿ ಕಪ್ಪು ಬಲೂನ್ ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಜೀವ್ ರತನ್, ಗನ್ನವರಂ ಪೊಲೀಸ್ ಠಾಣೆಗೆ ಗುರುವಾರ ಶರಣಾಗಿದ್ದಾರೆ.
ತಲೆಮರೆಸಿಕೊಂಡಿದ್ದ ರಾಜೀವ್ ರತನ್ ಅವರ ಬಂಧನಕ್ಕೆ 3 ದಿನಗಳಿಂದ ಪೊಲೀಸ್ ಪಡೆಗಳು ಶೋಧ ಕಾರ್ಯಾಚರಣೆ ನಡೆಸಿದ್ದವು. ಇಂದು ಪಕ್ಷದ ಮುಖಂಡರ ಜತೆ ಠಾಣೆಗೆ ಬಂದ ರಾಜೀವ್ ಕೊನೆಗೂ ಪೊಲೀಸರ ಮುಂದೆ ಶರಣಾಗಿದ್ದಾರೆ.