ಇತ್ತೀಚಿನ ಸುದ್ದಿ
ಪೋರ್ನ್ ಸಿನಿಮಾಗಳನ್ನು ಮಾಡುವುದು ತಪ್ಪಲ್ಲ ಅದು ಕೂಡ ಒಂದು ಉದ್ಯಮ : ಸಲ್ಲು ಮಾಜಿ ಪ್ರೇಯಸಿ ಸೋಮಿ ಅಲಿ
29/07/2021, 18:24
ಮುಂಬೈ(reporterKarnataka.news): ಪೋರ್ನ್ ಸಿನಿಮಾಗಳನ್ನು ನಿರ್ದೇಶನ ಮಾಡುವುದು ಕೂಡ ಉದ್ಯೋಗ ಅದು ಅಪರಾಧವಲ್ಲ ಎಂದು ಸಲ್ಲು ಭಾಯಿ ಮಾಜಿ ಪ್ರೇಯಸಿ ಬಾಲಿವುಡ್ ನಟಿ ಸೋಮಿ ಅಲಿ ರಾಜ್ ಕುಂದ್ರಾ ಪರ ಬ್ಯಾಟ್ ಬೀಸಿದ್ದಾರೆ.
ಪೋರ್ನ್ ಸಿನಿಮಾಗಳಲ್ಲಿ ನಟಿಸುವುದು ಮತ್ತು ಅಂತಹ ವಿಡಿಯೋ ನಿರ್ದೇಶನ ಮಾಡುವುದು, ನಿರ್ಮಿಸುವುದು ತಪ್ಪಲ್ಲ. ಅದು ಕೂಡ ಒಂದು ಉದ್ಯಮರಂಗ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪೋರ್ನ್ ಸಿನಿಮಾವನ್ನು ಉದ್ಯೋಗವಾಗಿ ಸ್ವೀಕರಿಸುವ ವ್ಯಕ್ತಿಯನ್ನು ನಾನು ಕೆಟ್ಟವನು ಎಂದು ಭಾವಿಸುವುದಿಲ್ಲ. ಲೈಂಗಿಕ ದೌರ್ಜನ್ಯ, ಮೋಸ ಮಾಡುವುದು ಅಪರಾಧವಾಗಿದೆ ಎಂದು ಅವರು ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.