12:50 PM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಪೊಲೀಸ್ ಇಲಾಖೆಯಲ್ಲಿ ದಕ್ಷತೆಗೆ ಇನ್ನೊಂದು ಹೆಸರು ಮಸ್ಕಿಯ ಪಿಎಸ್ ಐ ಭೀಮದಾಸ್: ಸಾರ್ವಜನಿಕರಿಂದಲೂ ಶಹಬಾಸ್ ಗಿರಿ!!

14/07/2021, 09:41

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು

info.reporterkarnataka@gmail.com

ರಾಯಚೂರು ಜಿಲ್ಲೆಯ ಮಸ್ಕಿ ಪೊಲೀಸ್ ಠಾಣೆಗೆ ಮುಂಬಡ್ತಿ ಪಡೆದು ಕ್ರೈಂ ವಿಭಾಗಕ್ಕೆ ಪಿಎಸ್ಐ ನೂತನ ಆಯ್ಕೆಯಾದ ಭೀಮದಾಸ್ ಸಾಧನೆಯ ಹಾದಿಯಲ್ಲಿ ಹೆಜ್ಜೆ ಇಕ್ಕುತ್ತಿದ್ದಾರೆ.

ಮಾನ್ವಿ ತಾಲೂಕಿನ ಆರೋಲಿ ಗ್ರಾಮದವರಾದ ಅವರು1969 ಜೂನ್ 1ರಂದು ಜನಿಸಿದರು. ಅವರ ತಂದೆ ವೆಂಕೋಬ, ತಾಯಿ ಲಕ್ಷ್ಮಮ್ಮ. ಭೀಮದಾಸ್ ಅವರು ಪ್ರಾಥಮಿಕ ಶಿಕ್ಷಣವನ್ನು ಆರೋಲಿ ಯಲ್ಲಿ ಮುಗಿಸಿದರು. ಪ್ರೌಢ ಶಿಕ್ಷಣವನ್ನು ಮಟಮಾರಿ ಮಹಾಂತೇಶ ಶಿಕ್ಷಣ ಸಂಸ್ಥೆಯಲ್ಲಿ ನಡೆಸಿದರು. ನಂತರ ಪಿಯುಸಿ ರಾಯಚೂರಿನ ಸೈನ್ಸ್ ಎಲ್ವಿಡಿ ಕಾಲೇಜಿನ ಪೂರೈಸಿದರು. ಬಿಎ ಮಾಡುವುದರ ಒಳಗಾಗಿ ಎಂಪ್ಲಾಮೆಂಟ್ ಕಡೆಯಿಂದ ಪೊಲೀಸ್ ಇಲಾಖೆಗೆ ಪಾದರ್ಪಣೆ ಮಾಡಿದರು.

ಬಡ ಕುಟುಂಬದಲ್ಲಿ ಜನಿಸಿದ ಅವರು ಇಂದು ಮಸ್ಕಿ ಪಿಎಸ್ಐ ಆಯ್ಕೆಯಾಗಿರುವ ಸಮಾಜಕ್ಕೆ ಮಾದರಿಯಾದ ವಿಷಯವಾಗಿದೆ. ಇವರು ಚೆನ್ನೈನಲ್ಲಿ ಟ್ರೈನಿಂಗ್ ಪಡೆದು ಎಸ್ಪಿ ಆಫೀಸ್, ನಂತರ ತುರುವಿಹಾಳ, ಮುದಗಲ್ಲು, ಮಸ್ಕಿ, ಯಾಪಲದಿನ್ನಿ ಸೇರಿದಂತೆ

ರಾಯಚೂರು ನಾನಾ ಕಡೆಗೆ ಸೇವೆ ಸಲ್ಲಿಸಿದರು. ಅಲ್ಲಿಂದ ಹೆಡ್ ಕಾನ್ ಸ್ಟೇಬಲ್ ಆಗಿ ಮುಂಬಡ್ತಿ ಪಡೆದು ಜಮಾದಾರ್ ಆಗಿ ರಾಯಚೂರು ಜಿಲ್ಲೆಯ ಎಲ್ಲ  ಪೊಲೀಸ್ ಇಲಾಖೆ ಠಾಣೆಯಲ್ಲಿ ಸೇವೆ ಸಲ್ಲಿಸಿದರು. ಮಸ್ಕಿ ಪೊಲೀಸ್ ಠಾಣೆಗೆ ಕ್ರೈಂ ಪೊಲೀಸ್ ಅಧಿಕಾರಿಯಾಗಿ ಸೇವೆಸಲ್ಲಿಸುತ್ತಿರುವ ಅವರು ರಾಯಚೂರಿನ ಪೊಲೀಸ್ ವರಿಷ್ಠಾಧಿಕಾರಿ ನಿಕ್ಕಂ ಪ್ರಕಾಶ್ ಬಿಂದು ಅವರ ಮೆಚ್ಚಿಗೆ ಪಡೆದಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಪೊಲೀಸ್ ವರಿಷ್ಠ ಅ ಸಿಬಿ ವೇದಮೂರ್ತಿಕೂಡ ಮೆಚ್ಚಿಗೆ ಪಟ್ಟಿದ್ದಾರೆ.

ಅವರು ಯಾದಗಿರಿ ಜಿಲ್ಲಾ ಎಸ್ಬಿ ಆಗಿ ಸೇವೆ ಸಲ್ಲಿಸುತ್ತಿರುವಾಗ ಅವರ ಕರ್ತವ್ಯವನ್ನು ಗುರುತಿಸಿ ಮೆಚ್ಚಿಗೆ ಪಟ್ಟಿದ್ದಾರೆ. ಅದರಂತೆ ಬಡಕುಟುಂಬದಿಂದ ಬಂದ ಭೀಮ ದಾಸ್ ಅವರ ಜೀವನ ಇತರರಿಗೆ ಮಾದರಿ ಎಂದರೆ ತಪ್ಪಾಗಲಿಕ್ಕಿಲ್ಲ.

ಇವರ 35 ವರ್ಷಗಳ ಪೊಲೀಸ್ ಇಲಾಖೆಯ ಸೇವೆಯಲ್ಲಿ ಯಾವುದೇ ಚ್ಯುತಿ ಬಂದಿಲ್ಲ. ಇವರು ನಿಜವಾಗಿಯೂ ಪೊಲೀಸ್ ಇಲಾಖೆಯಲ್ಲಿ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುವ ವ್ಯಕ್ತಿ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಾರೆ.

ಅವರು ಹೆಡ್ ಕಾನ್ಸ್ಟೇಬಲ್ ಇದ್ದಾಗ ಹಳ್ಳಿಗಳಲ್ಲಿ ಸೈಕಲ್ ಮೇಲೆ ತಿರುಗಾಡುತ್ತಿರುವುದು ಸಾಮಾನ್ಯವಾಗಿತ್ತು. ಒಟ್ಟಿನಲ್ಲಿ ಭೀಮದಾಸ್ ಅವರು ಒಬ್ಬ ಉತ್ತಮ ಅಧಿಕಾರಿ.

ಇತ್ತೀಚಿನ ಸುದ್ದಿ

ಜಾಹೀರಾತು