1:24 AM Saturday4 - July 2026
ಬ್ರೇಕಿಂಗ್ ನ್ಯೂಸ್
ತೀರ್ಥಹಳ್ಳಿ | ಅರಳಾಪುರದ ಕೊಪ್ಪಲು ಗ್ರಾಮದಲ್ಲಿ ಗಾಳಿ ಮಳೆಗೆ ಬಿದ್ದ ಬೃಹತ್ ಮರ:… Raichuru | ಮಸ್ಕಿ: ಅತಿಥಿ ಶಿಕ್ಷಕರ ಭದ್ರತೆ ಸೇರಿದಂತೆ ವಿವಿಧ ಬೇಡಿಕೆ ಆಗ್ರಹಿಸಿ… ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಜೂಜಾಟ: 28 ಜನರ ಬಂಧನ;… ಮತ ಪರಿಷ್ಕರಣೆ ವಿಚಾರದಲ್ಲಿ ಅಧಿಕಾರಿಗಳ ಕಳ್ಳಾಟ..!?: ಮನೆ ಮನೆಗೆ ಹೋಗುವ ಬದಲಾಗಿ ಜನರನ್ನೇ… ಮುಂದಿನ ಪೀಳಿಗೆಗೆ ಹಿಂಸೆ, ದ್ವೇಷ, ಸುಳ್ಳಿನ ಭಾರತವನ್ನು ಕೊಡಬಾರದು: ಕೆಪಿಸಿಸಿ ಅಧ್ಯಕ್ಷ ಬಿ.ಕೆ.… ಕಾಸು ಬೇಕಾದ್ರೆ ನನ್ನ ಹತ್ರ ಕೇಳೋ: ಲಂಚಕೋರ ಅಧಿಕಾರಿಗೆ ಕುಣಿಗಲ್ ಶಾಸಕ ಡಾ.… Bangalore | ವೇಶ್ಯಾವಾಟಿಕೆ:12 ಮಂದಿ ಬಾಂಗ್ಲಾದೇಶಿ ಪ್ರಜೆಗಳು ಸಿಸಿಬಿ ಪೊಲೀಸರ ವಶಕ್ಕೆ ಶಾಸಕ ಪ್ರದೀಪ್ ಈಶ್ವರ್ ಮೇಲೆ ಹಲ್ಲೆ ಯತ್ನ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ… ಬೆಂಗಳೂರು | ನಕಲಿ ಪೊಲೀಸ್ ಅಸಲಿ ಆಟ: ಯೂನಿಫಾರ್ಮ್ ಧರಿಸಿ ಬೈಕ್ ಸವಾರರಿಂದ… Belagavi | ವಿವಾಹಿತೆಯೊಂದಿಗೆ ಪರಾರಿ: ಯುವಕನ ಮನೆ ಧ್ವಂಸ; ಕುರಿಗಳನ್ನೂ ಹೊತ್ತೊಯ್ದು ಭರ್ಜರಿ…

ಇತ್ತೀಚಿನ ಸುದ್ದಿ

ಪೋಲೆಂಡ್ ತಲುಪಿದ ಗೋಣಿಕೊಪ್ಪದ ಶೀತಲ್ ಸಂಪತ್: ಯುದ್ಧಪೀಡಿತ ಉಕ್ರೇನ್’ನಿಂದ ಪಯಣ

05/03/2022, 10:52

ಮಡಿಕೇರಿ(reporterkarnataka.com):

ಯುದ್ಧಗ್ರಸ್ತ ಯುಕ್ರೇನ್ ದೇಶದ ಕಾರ್ವೀಕ್ ಪಟ್ಟಣದಲ್ಲಿ ವಿದ್ಯಾಭ್ಯಾಸಕ್ಕಾಗಿ ತೆರಳಿದ್ದ ಜಿಲ್ಲೆಯ ಯುವತಿ ಸುರಕ್ಷಿತವಾಗಿ ಪಕ್ಕದ ದೇಶದ ಪೋಲೆಂಡ್’ನ್ನು ತಲುಪಿದ್ದಾರೆ.

ಗೋಣಿಕೊಪ್ಪ ನಿವಾಸಿ ಪ್ರಸ್ತುತ ಕತಾರ್’ನಲ್ಲಿರುವ ಬಲ್ಲಡಿಚಂಡ ಸಂಪತ್ ಅವರ ಪುತ್ರಿ ಶೀತಲ್ ಸಂಪತ್ ಕಾರ್ವಿಕ್ ಪಟ್ಟಣದಲ್ಲಿ ವೈದ್ಯಕೀಯ ಶಿಕ್ಷಣದಲ್ಲಿ ಪದವಿ ಪಡೆಯಲು ತೆರಳಿದ್ದರು.

ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಆರಂಭಗೊಂಡ ನಂತರ ಮರಳಿ ತವರು ನೆಲಕ್ಕೆ ಬರಲು ಯತ್ನಿಸಿದ್ದರು. ಆದರೆ ಇವರು ಸೇರಬೇಕಾಗಿದ್ದ ನೆಲೆ ಹಲವು ಸಾವಿರ ಕಿ.ಮೀ. ಇದ್ದುದರಿಂದ ಯಶಸ್ವಿಯಾಗಿರಲಿಲ್ಲ.

ಆದರೆ ಈ ಬಾರಿ ಶೀತಲ್ ಸಂಪತ್ ಕಾರ್ವಿಕ್ ಪಟ್ಟಣದಿಂದ ಅಂದಾಜು 1,300 ಕಿ ಮೀ ದೂರದ ಪೋಲೆಂಡ್ ದೇಶವನ್ನು ಬುಧವಾರ ತಲುಪಿದ್ದು, ಸದ್ಯ ಭಾರತೀಯ ದೂತಾವಾಸ ಕಚೇರಿಯೊಂದಿಗೆ ಸಂಪರ್ಕದಲ್ಲಿದ್ದಾರೆ.

ಪೋಲೆಂಡ್ ದೇಶದಲ್ಲಿರುವ ಭಾರತ ರಾಯಭಾರಿ ಕಚೇರಿಯು ಉಕ್ರೇನ್ ದೇಶದಿಂದ ಆಗಮಿಸುತ್ತಿರುವ ವಿದ್ಯಾರ್ಥಿಗಳ ಯೋಗಕ್ಷೇಮ ವಿಚಾರಿಸುತ್ತಿದೆ. ಮುಂದಿನ ಎರಡು ಮೂರು ದಿನಗಳಲ್ಲಿ ಏರ್ ಲಿಫ್ಟ್ ಆಗುವ ಆಶಾಭಾವನೆಯನ್ನು ಶೀತಲ್ ಸಂಪತ್ ವ್ಯಕ್ತಪಡಿಸಿದ್ದಾರೆ.

ಭಾರತೀಯ ವಿದ್ಯಾರ್ಥಿಗಳ ಯೋಗಕ್ಷೇಮಕ್ಕಾಗಿ ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವ ಜ್ಯೋತಿರಾಧ್ಯ ಸಿಂಧ್ಯಾ ಪೋಲೆಂಡ್’ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಶೀತಲ್ ಅವರು ಭಾರತಕ್ಕೆ ಆಗಮಿಸಿದ‌ ಬಳಿಕ ಕತಾರ್’ಗೆ ತೆರಳಿ ತಂದೆಯನ್ನು ಸೇರಿಕೊಳ್ಳಲಿರುವುದಾಗಿ ಮಾಹಿತಿ ನೀಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು