11:22 PM Tuesday11 - March 2025
ಬ್ರೇಕಿಂಗ್ ನ್ಯೂಸ್
ಗ್ಯಾರಂಟಿ ಅನುಷ್ಠಾನ ಸಮಿತಿ ರಚನೆಗೆ ಬಿಜೆಪಿ ವಿರೋಧ; ಇದು ಸಂವಿಧಾನ ವಿರೋಧಿ: ಪ್ರತಿಪಕ್ಷ… Global warming | ಹೆಚ್ಚುತ್ತಿರುವ ತಾಪಮಾನ: ಮೈಸೂರು ಝೂ ಪ್ರಾಣಿಗಳಿಗೆ ವಾಟರ್ ಜೆಟ್,… ರಂಜಾನ್ ಮಾಸ: ಸಮೋಸಕ್ಕೆ ಭಾರೀ ಡಿಮಾಂಡ್; ಪ್ರತಿದಿನ 15 ಸಾವಿರಕ್ಕೂ ಹೆಚ್ಚು ಮಾರಾಟ ರೈತರ ಐಪಿ ಸೆಟ್‌ಗಳಿಗೆ ಹೆಚ್ಚುವರಿ 2 ತಾಸು ವಿದ್ಯುತ್‌ ಪೂರೈಕೆ ಬಗ್ಗೆ ಸರಕಾರ… Higher Education | ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಗುಣಮಟ್ಟ ಹೆಚ್ಚಿಸಲು ಆದ್ಯತೆ::ಉನ್ನತ ಶಿಕ್ಷಣ ಸಚಿವ… APMC BILL | ಎಪಿಎಂಸಿ ನಿಯಂತ್ರಣಕ್ಕೆ ಇ-ಫ್ಲಾಟ್ಫಾರಂಗಳು ತಿದ್ದುಪಡಿ ವಿಧೇಯಕ: ವಿಧಾನಸಭೆ ಅನುಮೋದನೆ Power For Farmers | ಕೃಷಿ ಪಂಪ್ ಸೆಟ್ ಗಳಿಗೆ 7 ಗಂಟೆಗಳ… Education | ಶಿಕ್ಷಣ ಇಲಾಖೆಯಲ್ಲಿ ಶೇ. 80ರಷ್ಟು ಹುದ್ದೆಗಳ ಭರ್ತಿಗೆ ಕ್ರಮ: ಸಚಿವ… Govt Hospital | ಇನ್ನು ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರಿಗೆ ಬೆಳಿಗ್ಗೆ 9ರಿಂದ ಸಂಜೆ… ತೀರ್ಥಹಳ್ಳಿ: ಮನೆಯಲ್ಲಿಯೇ ಯುವಕ ನೇಣಿಗೆ ಶರಣು

ಇತ್ತೀಚಿನ ಸುದ್ದಿ

ಪಿಎಂ ಸೂರ್ಯಘರ್: 10 ಲಕ್ಷ ಸೌರ ಮೇಲ್ಛಾವಣಿ ಸ್ಥಾಪನೆ ಗುರಿ:15 ಸಾವಿರ ಹೂಡಿಕೆಗೆ 15 ಲಕ್ಷದವರೆಗೆ ಆದಾಯ

11/03/2025, 23:02

ನವದೆಹಲಿ(reporterkarnataka.com): ವಿಶ್ವದ ಅತಿ ದೊಡ್ಡ ಸೌರ ಶಕ್ತಿ ಯೋಜನೆ ಹೆಗ್ಗಳಿಕೆಗೆ ಪಾತ್ರವಾದ “PM ಸೂರ್ಯಘರ್ ” ಈಗ 10 ಲಕ್ಷ ಸೌರ ಮೇಲ್ಛಾವಣಿ ಸ್ಥಾಪನೆಯ ಹೊಸ ಮೈಲಿಗಲ್ಲು ಸಾಧಿಸಿದೆ. ಜತೆಗೆ ದೇಶದ ನಾಗರಿಕರಿಗೆ ವಿದ್ಯುತ್ ವೆಚ್ಚ ಉಳಿತಾಯ ಹಾಗೂ ದೀರ್ಘ ಕಾಲದ ಆದಾಯಕ್ಕೂ ದಾರಿ ಮಾಡಿಕೊಡುತ್ತಿದೆ.
ದೇಶದ ನಾಗರಿಕರನ್ನು ಸುಲಭವಾಗಿ ತಲುಪುವಂತೆ ಈ ಯೋಜನೆ ರೂಪಿಸಿರುವ ಕೇಂದ್ರ ಸರ್ಕಾರ, ಫಲಾನುಭವಿಗಳಿಗೆ ಸರಳ ಸಾಲ ಸೌಲಭ್ಯ ಸಹ ಕಲ್ಪಿಸಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ತಿಳಿಸಿದೆ.
*₹15 ಸಾವಿರ ಹೂಡಿಕೆ ₹ 15 ಲಕ್ಷ ಆದಾಯ:* ಸೂರ್ಯ ಘರ್ ಫಲಾನುಭವಿ 3 KW ಸಾಮರ್ಥ್ಯದ ಸೌರ ಮೇಲ್ಛಾವಣಿ ಘಟಕವನ್ನು ₹15,000 ಕ್ಕಿಂತ ಕಡಿಮೆ ಹೂಡಿಕೆಯೊಂದಿಗೆ ಸ್ಥಾಪಿಸಬಹುದು. ಅಲ್ಲದೇ, ಇದರಿಂದ 25 ವರ್ಷಗಳಲ್ಲಿ ₹15 ಲಕ್ಷದವರೆಗೆ ಆದಾಯ ಸಹ ಪಡೆಯಲು ಸಾಧ್ಯವಿದೆ.
ಪ್ರಧಾನಿ ನರೇಂದ್ರ ಮೋದಿ ಅವರು 2024ರ ಫೆಬ್ರವರಿ 13ರಂದು ಪ್ರಾರಂಭಿಸಿದ ಈ ಮಹತ್ವಾಕಾಂಕ್ಷೆಯ ಯೋಜನೆ 1 ಕೋಟಿ ಮನೆಗಳಿಗೆ ಸೌರ ಮೇಲ್ಛಾವಣಿ ಅಳವಡಿಕೆ ಮೂಲಕ ಉಚಿತ ವಿದ್ಯುತ್ ಒದಗಿಸುವ ಗುರಿ ಹೊಂದಿದೆ. 12 ಸಾರ್ವಜನಿಕ ವಲಯದ ಬ್ಯಾಂಕ್ ಗಳ (PSB) ಮೂಲಕ ₹2 ಲಕ್ಷವರೆಗಿನ ಸಾಲಗಳಿಗೆ ಶೇ.6.75 ಸಬ್ಸಿಡಿ ಬಡ್ಡಿ ದರದಲ್ಲಿ ಮೇಲಾಧಾರ-ಮುಕ್ತ ಸಾಲ ಒದಗಿಸಲಾಗುತ್ತಿದೆ.
ಸಾಲಕ್ಕೆ ಅರ್ಜಿ ಸಲ್ಲಿಕೆ ಸಂಪೂರ್ಣ ಸ್ವಯಂ ಚಾಲಿತ ಮತ್ತು ಆನ್‌ಲೈನ್‌ ಪ್ರಕ್ರಿಯೆಯಾಗಿದೆ. ಈವರೆಗೆ 3.10 ಲಕ್ಷ ಆಕಾಂಕ್ಷಿತರಿಂದ ಸಾಲದ ಅರ್ಜಿಗಳನ್ನು ಸ್ವೀಕರಿಸಲಾಗಿದೆ. 1.58 ಲಕ್ಷ ಘಟಕಗಳಿಗೆ ಸಾಲ ಮಂಜೂರು ಮಾಡಲಾಗಿದೆ ಮತ್ತು 1.28 ಲಕ್ಷ ಫಲಾನುಭವಿಗಳಿಗೆ ಸಾಲವನ್ನು ವಿತರಿಸಲಾಗಿದೆ.
*47.3 ಲಕ್ಷ ಅರ್ಜಿ ಸಲ್ಲಿಕೆ:* ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ (MNRE) ಜಾರಿಗೆ ತಂದಿರುವ ಈ ಯೋಜನೆಗೆ ಈಗಾಗಲೇ ಬರೋಬ್ಬರಿ 47.3 ಲಕ್ಷ ಅರ್ಜಿಗಳು ಬಂದಿವೆ. 6.13 ಲಕ್ಷ ಫಲಾನುಭವಿಗಳು ₹ 4,770 ಕೋಟಿ ಮೊತ್ತದ ಸಬ್ಸಿಡಿಯನ್ನು ಯಶಸ್ವಿಯಾಗಿ ಪಡೆದಿದ್ದಾರೆ. ಸಂಪೂರ್ಣ ಸ್ವಯಂಚಾಲಿತ ಅರ್ಜಿಯೊಂದಿಗೆ www.pmsuryaghar.gov.in ಮೂಲಕ ಮಾರಾಟಗಾರರ ಆಯ್ಕೆ ಮತ್ತು ಸಬ್ಸಿಡಿ ರಿಡೀಮ್ ಪ್ರಕ್ರಿಯೆಗೆ 15 ದಿನಗಳಲ್ಲಿ ಅರ್ಜಿದಾರರ ಬ್ಯಾಂಕ್ ಖಾತೆಗಳಿಗೆ ₹ 78000 ವರೆಗೆ ಸಬ್ಸಿಡಿ ಜಮಾ ಆಗುತ್ತದೆ.
*ರಾಜ್ಯಗಳಲ್ಲಿ ಗಮನಾರ್ಹ ಪ್ರಗತಿ:* ಈ ಯೋಜನೆ ಹಲವಾರು ರಾಜ್ಯಗಳಲ್ಲಿ ಗಮನಾರ್ಹ ಪ್ರಗತಿ ಕಂಡಿದೆ. ಚಂಡೀಗಢ, ದಮನ್ ಮತ್ತು ಡಿಯುಗಳು ಸರ್ಕಾರಿ ಕಟ್ಟಡಗಳೂ ಸೌರ ಮೇಲ್ಛಾವಣಿ ಅಳವಡಿಸಿ ನೂರಕ್ಕೆ ನೂರು ಪ್ರಗತಿ ಸಾಧಿಸಿವೆ. ರಾಜಸ್ಥಾನ, ಮಹಾರಾಷ್ಟ್ರ, ಗುಜರಾತ್ ಮತ್ತು ತಮಿಳುನಾಡಿನಂತಹ ರಾಜ್ಯಗಳು ಸಹ ಉತ್ತಮ ಕಾರ್ಯನಿರ್ವಹಿಸುತ್ತಿವೆ.
*2027ಕ್ಕೆ ಹೆಚ್ಚುವರಿಯಾಗಿ 27 GW ಗುರಿ:* ಸುಲಭ ಹಣಕಾಸು ಒದಗಿಸಲು ಅನುಕೂಲವಾಗುವಂತೆ ಕೇಂದ್ರ ಸರ್ಕಾರ ₹ 75021 ಕೋಟಿ ಅನುದಾನ ತೆಗೆದಿರಿಸಿದೆ. 2025ರ ಮಾರ್ಚ್ 10ರ ಹೊತ್ತಿಗೆ, ಈ ಯೋಜನೆ 3 GW ಗಿಂತ ಹೆಚ್ಚಿನ ಮೇಲ್ಛಾವಣಿ ಸೌರಶಕ್ತಿ ಸ್ಥಾಪನೆಗೆ ಅನುಕೂಲ ಮಾಡಿಕೊಟ್ಟಿದೆ. 2027ರ ಮಾರ್ಚ್ ವೇಳೆಗೆ ಹೆಚ್ಚುವರಿಯಾಗಿ 27 GW ಗುರಿ ಸಾಧನೆಯತ್ತ ಮುನ್ನಡೆಯುತ್ತಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು