9:07 AM Tuesday28 - January 2025
ಬ್ರೇಕಿಂಗ್ ನ್ಯೂಸ್
ಕನ್ನಡಪರ ಹೋರಾಟಗಾರರ ಎಲ್ಲ ಕೇಸ್ ವಾಪಾಸ್: ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳ: ಮುಖ್ಯಮಂತ್ರಿಗಳ ತವರು ಕ್ಷೇತ್ರದಲ್ಲಿ ಮತ್ತೊಂದು ಜೀವಬಲಿ; ಭಾರೀ… ಕೋಟೆಕಾರು ದರೋಡೆ ಪ್ರಕರಣ; ಒಟ್ಟು 18.314 ಕೆಜಿ ಚಿನ್ನಾಭರಣ, 3.80 ಲಕ್ಷ ರೂ.… ರಾಜಕೀಯ ಪಿತೂರಿಯಿಂದ ಸಿಎಂ ಪತ್ನಿಗೆ ಇಡಿ ನೋಟೀಸ್: ಡಿಸಿಎಂ ಡಿ.ಕೆ. ಶಿವಕುಮಾರ್ ಆಕ್ರೋಶ ಸರಕಾರ ಸಾಲ ನೀಡದಿರುವುದರಿಂದ ಮೈಕ್ರೋ ಫೈನಾನ್ಸ್‌ನ ಮೊರೆ ಹೋದ ಜನರು, ಸರ್ಕಾರ ಮಾಡಿದ… ಚಿಕ್ಕಮಗಳೂರು : ಕಾಫಿ‌‌ ಪಲ್ಪರ್ ನೀರಿನಿಂದ ಆನೆ ಹಳ್ಳದ ನೀರು ಕಲುಷಿತ; ಗ್ರಾಮಸ್ಥರ… ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಬದುಕು ಸ್ಫೂರ್ತಿದಾಯಕ: ಮುಖ್ಯಮಂತ್ರಿ ಸಿದ್ದರಾಮಯ್ಯ ಭಾರತದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿ ಉಳಿಯಲು ಅಂಬೇಡ್ಕರ್ ಕೊಟ್ಟಿರುವ ಸಂವಿಧಾನ ಕಾರಣ: ಮಾಜಿ ಸಿಎಂ… ಕಲ್ಲು ಗಣಿಗಾರಿಕೆ: ಡೈನಮೈಟ್ ಸ್ಫೋಟಕ್ಕೆ ಹಲವು ಮನೆಗಳಿಗೆ ಹಾನಿ; 6 ಸೆಕೆಂಡ್ ಕಂಪಿಸಿದ… ಚಾರ್ಮಾಡಿ ಘಾಟಿ ಕಾಡ್ಗಿಚ್ಚು: ಅಗ್ನಿಶಾಮಕ‌ ದಳ, ಅರಣ್ಯ ಇಲಾಖೆ ಸಿಬ್ಬಂದಿ ಶ್ರಮದಿಂದ ಬೆಂಕಿ…

ಇತ್ತೀಚಿನ ಸುದ್ದಿ

‘ಪಿಲಿಪಂಜ’ ತುಳು ಸಿನಿಮಾ ಶೀರ್ಷಿಕೆ ಬಿಡುಗಡೆ: ನವೆಂಬರ್‌ 7ರಂದು ಮಂಗಳೂರಿನಲ್ಲಿ ಚಿತ್ರೀಕರಣ ಆರಂಭ

01/11/2024, 23:44

ಮಂಗಳೂರು(reporterkarnataka.com): ಎಸ್ ಬಿ ಗ್ರೂಪ್ಸ್ ಅರ್ಪಿಸುವ, ಶಿಯಾನ ಪ್ರೊಡಕ್ಷನ್ ಹೌಸ್ ನಿರ್ಮಾಣದ, ಪಿಲಿಪಂಜ ಸಿನಿಮಾದ ಶೀರ್ಷಿಕೆ ಬಿಡುಗಡೆ ಕಾರ್ಯಕ್ರಮ ನಗರದ ಬಂದರಿನ ಶ್ರೀ ನಿತ್ಯಾನಂದ ಸೇವಾಶ್ರಮದಲ್ಲಿ ನಡೆಯಿತು.
ಹಿರಿಯ ತುಳು ರಂಗಭೂಮಿ ಹಾಗೂ ಚಲನಚಿತ್ರ ನಿರ್ಮಾಪಕ, ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಶೀರ್ಷಿಕೆ ಬಿಡುಗಡೆ ಮಾಡುತ್ತಾ, “ಪಿಲಿಪಂಜ” ಒಂದು ವಿಭಿನ್ನ ಹಾಗೂ ಕುತೂಹಲ ಮೂಡಿಸುವ ಟೈಟಲ್. ಇದೊಂದು ವಿಭಿನ್ನ ಚಿತ್ರವಾಗಿ ಮೂಡಿಬರುವುದರಲ್ಲಿ ಸಂಶಯವಿಲ್ಲ. ಒಂದೊಳ್ಳೆ ಕಥೆಯೊಂದಿಗೆ ಚಿತ್ರ ತಂಡ ನಮ್ಮ ಮುಂದೆ ಬರುತ್ತಿದೆ, ತುಳುನಾಡಿನ ಜನತೆ ಈ ಚಿತ್ರವನ್ನು ಗೆಲ್ಲಿಸಿ ಕೊಡ ಬೇಕು. ಗುರು ನಿತ್ಯಾನಂದರ ಆಶೀರ್ವಾದ ಚಿತ್ರ ತಂಡದ ಮೇಲಿರಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಶಿಯಾನ ಪ್ರೊಡಕ್ಷನ್ ಹೌಸ್ ನ ಪ್ರತೀಕ್ ಪೂಜಾರಿ, ಚಿತ್ರದ ನಿರ್ದೇಶಕ ಭರತ್ ಶೆಟ್ಟಿ, ಎಕ್ಸಿಕ್ಯುಟಿವ್ ಪ್ರೊಡ್ಯುಷರ್ ರಮೇಶ್ ರೈ ಕುಕ್ಕುವಳ್ಳಿ, ಮುಂಬಯಿಯ ರಂಗ ನಿರ್ದೇಶಕ, ಭ್ರಾಮರಿ ಸುದ್ದಿವಾಹಿನಿಯ ರೂವಾರಿ ಬಾಬಾ ಪ್ರಸಾದ್ ಅರಸ, ಪ್ರಕಾಶ್ ಶೆಟ್ಟಿ ಧರ್ಮನಗರ, ರಾಜೇಶ್ ಕಣ್ಣೂರು, ರಕ್ಷಣ್ ಮಾಡೂರು, ಅಕ್ಷತ್ ವಿಟ್ಲ, ಸುರೇಶ್ ಬಲ್ಮಠ,ಅಭಿಷೇಕ್ ಕುಲಾಲ್, ಚಿತ್ರದ ಸಂಕಲನಕಾರ ಶ್ರೀನಾಥ್ ಪವರ್ ಮುಂತಾದವರು ಉಪಸ್ಥಿತರಿದ್ದರು.
ನವೆಂಬರ್‌ 7ಕ್ಕೆ ಮಂಗಳೂರಿನಲ್ಲಿ ಚಿತ್ರೀಕರಣ ಪ್ರಾರಂಭಗೊಳ್ಳಲಿದೆ.
ಚಿತ್ರದಲ್ಲಿ ರಮೇಶ್ ರೈ ಕುಕ್ಕುವಳ್ಳಿ, ಭೋಜರಾಜ್ ವಾಮಂಜೂರು, ರವಿ ರಾಮಕುಂಜ, ಸುಂದರ್ ರೈ ಮಂದಾರ, ಶಿವಪ್ರಕಾಶ್ ಪೂಂಜ, ರೂಪಾಶ್ರೀ ವರ್ಕಾಡಿ, ಪ್ರಕಾಶ್ ಶೆಟ್ಟಿ ಧರ್ಮನಗರ, ರಕ್ಷಣ್ ಮಾಡೂರು, ಪ್ರವೀಣ್ ಕೊಡಕ್ಕಲ್, ರಂಜನ್ ಬೋಳಾರ್ , ದಿಶಾ ರಾಣಿ ಮುಂತಾದವರು ನಟಿಸಲಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು