ಇತ್ತೀಚಿನ ಸುದ್ದಿ
ಪೆಟ್ರೋಲ್ ಟ್ಯಾಂಕರ್ ಸ್ಫೋಟ: 70 ಮಂದಿ ಸಜೀವ ದಹನ; ಹಲವರು ಗಂಭೀರ
19/01/2025, 11:47
ನೈಜೀರಿಯಾ(reporterkarnataka.com): ಪೆಟ್ರೋಲ್ ಟ್ಯಾಂಕರ್ ಸ್ಫೋಟಗೊಂಡ ಪರಿಣಾಮ ಉಂಟಾದ ಭಾರಿ ಬೆಂಕಿ ಅನಾಹುತಕ್ಕೆ ಸುಮಾರು 70 ಮಂದಿ ಸಜೀವ ದಹನವಾಗಿದ ಘಟನೆ ನೈಜೀರಿಯಾ ದೇಶದಲ್ಲಿ ನಡೆದಿದೆ.
ದುರ್ಘಟನೆಯನ್ನು ರಾಷ್ಟ್ರೀಯ ತುರ್ತು ನಿರ್ವಹಣಾ ಏಜೆನ್ಸಿ ಮುಖ್ಯಸ್ಥ ಹುಸೇನಿ ಇಸಾ ಖಚಿತಪಡಿಸಿದ್ದಾರೆ. ನೈಜಿರಿಯಾದ ಡಿಕ್ಕೊ ಪ್ರದೇಶದಲ್ಲಿ ಟ್ಯಾಂಕರ್ ನಲ್ಲಿ ಪೆಟ್ರೋಲ್ ಸಾಗಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ.
ನೈಜರ್ ಗವರ್ನರ್ ಮೊಹಮ್ಮದ್ ಬಾಗೊ ಅವರು ಅಪಘಾತದ ಬಗ್ಗೆ ಪ್ರತಿಕ್ರಿಯಿಸಿ,ಗ್ಯಾಸೋಲಿನ್ ಟ್ಯಾಂಕರ್‌ನಿಂದ ಇಂಧನ ಕದಿಯಲು ಪ್ರಯತ್ನಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಸ್ಫೋಟ ಸಂಭವಿಸಿದೆ. ಸ್ಫೋಟದ ನಂತರ ಬೆಂಕಿ ಕಾಣಿಸಿಕೊಂಡಿದೆ. ಈ ಅಪಘಾತದಲ್ಲಿ ಸುಮಾರು 70 ಮಂದಿ ಸಾವನ್ನಪ್ಪಿದ್ದಾರೆ. ಹಲವು ಮಂದಿ ಗಾಯಗೊಂಡಿದ್ದಾರೆ. ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಬಂದು ಪರಿಸ್ಥಿತಿಯನ್ನು ಹತೋಟಿಗೆ ತಂದರು. ಸ್ಥಳದಲ್ಲಿ ಉಂಟಾದ ಗೊಂದಲವನ್ನು ಪೊಲೀಸರು ನಿಯಂತ್ರಿಸಿದರು. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.