4:32 AM Saturday17 - January 2026
ಬ್ರೇಕಿಂಗ್ ನ್ಯೂಸ್
88 ಪ್ರಕರಣಗಳಲ್ಲಿ ಪೊಲೀಸಿನವರೇ ಶಾಮೀಲು; ಬೇಲಿಯೇ ಎದ್ದು ಹೊಲ ಮೇಯುವುದು ಅಕ್ಷಮ್ಯ ಅಪರಾಧ:… ಬೆಂಗಳೂರಿನಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ: ಅಜೀಂ ಪ್ರೇಮ್‌ಜಿ ಫೌಂಡೇಷನ್ ಜತೆ ಕೈಜೋಡಿಸಿದ… ಕುಶಾಲನಗರ – ಮಡಿಕೇರಿ ಹೆದ್ದಾರಿಯ ಆನೆಕಾಡು ಬಳಿ ಅಪಘಾತ: ಕಾಡು ಕುರಿ ಸಾವು,… ಕೊಡಗಿನಲ್ಲಿ ಅಕ್ರಮ ವಲಸಿಗರ ಬಗ್ಗೆ ಹೈ ಅಲರ್ಟ್: ನೂತನ ಎಸ್ಪಿ ಬಿಂದುಮಣಿ ಮಂಗಳೂರಿನಲ್ಲಿ ಸ್ಕೂಲ್ ಆಫ್ ಇಂಜಿನಿಯರಿಂಗ್ ಮತ್ತು ಕಾನೂನು ಶಾಲೆಗೆ ರಾಜ್ಯಪಾಲ ಗೆಹ್ಲೋಟ್ ಚಾಲನೆ ಉಡುಪಿ ಪರ್ಯಾಯ ಮಹೋತ್ಸವಕ್ಕೆ ಸರ್ವ ಸಜ್ಜು: ಜ.18ರಂದು ಶೋಭಾ ಯಾತ್ರೆ; ಶೀರೂರು ಶ್ರೀಗಳಿಂದ… ಕೊಡಗಿನ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ: ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲು ಮನರೇಗಾ ಬಚಾವ್ ಸಂಗ್ರಾಮ: ಸ್ಥಳೀಯ ಸಂಸ್ಥೆಗಳ ಚುನಾವಣೆ ಪೂರ್ವಸಿದ್ದತಾ ಸಭೆ ಜಿ ರಾಮ್ ಜಿ ಬಗ್ಗೆ ಕಾಂಗ್ರೆಸ್ ಸುಳ್ಳು ಸಂಕಥನ: ಕೇಂದ್ರ ಸಚಿವ ಎಚ್.ಡಿ.… ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಿದಾಗ ಮಾತ್ರ ಸುಖಿ ರಾಜ್ಯ ಸ್ಥಾಪನೆ…

ಇತ್ತೀಚಿನ ಸುದ್ದಿ

ಬಹು ನಿರೀಕ್ಷಿತ ʻಪಯಣ್ʼ ಕೊಂಕಣಿ ಚಲನಚಿತ್ರದ ಪೋಸ್ಟರ್ ಬಿಡುಗಡೆ

31/07/2024, 22:16

ಪುತ್ತೂರು(reporterkarnataka.com): ʻಸಂಗೀತ್ ಘರ್ʼ ಮಂಗಳೂರು ಬ್ಯಾನರ್ ಅಡಿಯಲ್ಲಿ ತಯಾರಾಗಿರುವ ಕೊಂಕಣಿ ಚಲನಚಿತ್ರ ʻಪಯಣ್ʼ (ಪ್ರಯಾಣ) ಇದರ ಪೋಸ್ಟರ್ ಬಿಡುಗಡೆ ಸಮಾರಂಭ ಜು. 28ರಂದು ಸಂಜೆ ಪುತ್ತೂರಿನ ರೋಟರಿ ಮನಿಷಾ ಸಭಾಂಗಣದಲ್ಲಿ ನೆರವೇರಿತು.
ಮಾಯ್ದೆ ದೇವುಸ್ ಚರ್ಚಿನ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಜೆರಾಲ್ಡ್ ಡಿಕೋಸ್ಟಾ, ಡೊನ್ ಬೊಸ್ಕೊ ಕ್ಲಬ್ ಅಧ್ಯಕ್ಷರಾದ ಆಂಟನಿ ಒಲಿವೆರಾ ಮತ್ತು ಕಾರ್ಯದರ್ಶಿ ಜ್ಯೋ ಡಿಸೋಜಾರವರು ಜೊತೆಗೂಡಿ ಚಲನಚಿತ್ರದ ಪೋಸ್ಟರನ್ನು ಬಿಡುಗಡೆ ಗೊಳಿಸಿದರು. ಬಳಿಕ ಮಾತನಾಡಿದ ಅವರು ʻಪಯಣ್ ಚಲನಚಿತ್ರದ ನಾಯಕ ನಟ ನಮ್ಮವನೇ ಆದ ಬ್ರಾಯನ್ ಸಿಕ್ವೇರಾ. ಎಲ್ಲರೂ ಈ ಚಿತ್ರವನ್ನು ನೋಡಿ ನಮ್ಮ ಯುವ ಪ್ರತಿಭೆಯನ್ನು ಪ್ರೋತ್ಸಾಹಿಸಿ ಹರಸಬೇಕು. ಆ ಮೂಲಕ ಕೊಂಕಣಿ ಭಾಷೆಯ ಅಸ್ತಿತ್ವವನ್ನು ಮುಂದಿನ ಪೀಳಿಗೆಗೆ ಪ್ರಚುರಪಡಿಸುವಂತಾಗಬೇಕುʼ ಎಂದು ಹೇಳಿದರು. ʻಪಯಣ್ʼ ಸಿನಿಮಾ ತಂಡದ ಪರವಾಗಿ ನಟ, ಉದ್ಯಮಿ ಹಾಗೂ ಸಂಘಟಕ ಲೆಸ್ಲಿ ರೇಗೊ ಮಾತನಾಡಿ ʻಸಮಾಜಮುಖಿ ಕಾರ್ಯಕ್ರಮಗಳಿಂದ ಡೊನ್ಬೊಸ್ಕೊ ಕ್ಲಬ್ನ ಕೀರ್ತಿ ಎಲ್ಲೆಡೆ ಹಬ್ಬಿದೆ. ಗಾಯಕ ಅಲೆಕ್ಸ್ ಮಾಡ್ತಾರಂಥಹ ಸಂಗೀತ ಪ್ರತಿಭೆಯ ತವರೂರಾದ ಪುತ್ತೂರು ಪ್ರತಿಭಾವಂತರ ನಾಡು. ʻಅಸ್ಮಿತಾಯ್ʼ ಕೊಂಕಣಿ ಚಲನಚಿತ್ರದಲ್ಲಿ ಪುತ್ತೂರಿನ ಕಿಶೋರ್ ಫೆರ್ನಾಂಡಿಸ್ ಮತ್ತು ಪ್ರವೀಣ್ ಪಿಂಟೊರವರು ನಟಿಸಿದ್ದರು. ಇದೀಗ ಬ್ರಾಯನ್ ಸಿಕ್ವೇರಾ ನಾಟಕ ನಟನಾಗಿ ನಟಿಸಿದ್ದಾರೆ. ಎಲ್ಲರೂ ʻಪಯಣ್ʼ ಚಲನಚಿತ್ರದ ಪ್ರೀಮಿಯರ್ ಶೋ ವೀಕ್ಷಿಸಿ ಅವರನ್ನು ಹರಸಬೇಕುʼ ಎಂದು ಕೇಳಿಕೊಂಡರು. ಚಲನಚಿತ್ರದ ನಿರ್ದೇಶಕ ಕೊಂಕಣಿ ಸಂಗೀತ ಗುರುವೆಂದೇ ಪ್ರಸಿದ್ದರಾಗಿರು ಜೊಯೆಲ್ ಪಿರೇರಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದ ಚಲನಚಿತ್ರದ ನಾಯಕಿಯರಾದ ಕು| ಶೈನಾ ಡಿʼಸೋಜ, ಕು| ಕೇಟ್ ಪಿರೇರಾ ಹಾಗೂ ಇತರರನ್ನು ಪರಿಚಯಿಸಿದರು.
ʻಪಯಣ್ʼ ಚಲನಚಿತ್ರವು ಸೆನ್ಸಾರ್ ಹಂತಕ್ಕೆ ತಲಪಿದ್ದು ಸಪ್ಟೆಂಬರ್ ತಿಂಗಳಲ್ಲಿ ಮಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ.
ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ಬ್ರಾಯನ್ ಸಿಕ್ವೇರಾ, ಜಾಸ್ಮಿನ್ ಡಿʼಸೋಜಾ, ಕೇಟ್ ಪಿರೇರಾ, ಶೈನಾ ಡಿʼಸೋಜ, ರೈನಲ್ ಸಿಕ್ವೇರಾ, ಲೆಸ್ಲಿ ರೇಗೊ, ಜೆರಿ ರಸ್ಕಿನ್ಹಾ, ವಾಲ್ಟರ್ ನಂದಳಿಕೆ, ಜೀವನ್ ವಾಸ್, ಜೊಸ್ಸಿ ರೇಗೊ ಮತ್ತು ಇತರರಿದ್ದಾರೆ. ತಾಂತ್ರಿಕ ವರ್ಗ-ಸಂಗೀತ: ರೋಶನ್ ಡಿʼಸೋಜಾ, ಆಂಜೆಲೊರ್; ಛಾಯಾಗ್ರಹಣ: ವಿ. ರಾಮಾಂಜನೆಯ; ಸಂಕಲನ: ಮೆವಿನ್ ಜೊಯೆಲ್ ಪಿಂಟೊ. ನಿರ್ಮಾಪಕಿ: ನೀಟ ಜೋನ್ ಪೆರಿಸ್.

ಇತ್ತೀಚಿನ ಸುದ್ದಿ

ಜಾಹೀರಾತು