ಇತ್ತೀಚಿನ ಸುದ್ದಿ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಂತ್ಯಕ್ರಿಯೆ: ನ್ಯೂಯಾರ್ಕ್ ನಿಂದ ಬೆಂಗಳೂರು ತಲುಪಿದ ಅಪ್ಪು ಪುತ್ರಿ
30/10/2021, 17:10
ಹೊಸದಿಲ್ಲಿ(reporterkarnataka.com): ಅಗಲಿದ ಹೆಸರಾಂತ ನಟ ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ನ್ಯೂಯಾರ್ಕ್ ನಿಂದ ದೆಹಲಿಗೆ ಆಗಮಿಸಿದ ಅವರ ಹಿರಿಯ ಪುತ್ರಿ ಧೃತಿ ಇದೀಗ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ್ದಾರೆ.
ನ್ಯೂಯಾರ್ಕ್ ನಿಂದ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಧೃತಿ ಅವರು ಮಧ್ಯಾಹ್ನ ವೇಳೆ ತಲುಪಿದ್ದರು. ನ್ಯೂಯಾರ್ಕ್ ನಿಂದ ಸುಮಾರು 11,800 ಕಿಮೀ. ಕ್ರಮಿಸಿ ದೃತಿ ಅವರು ದೆಹಲಿ ತಲುಪಿದ್ದರು. ಅಲ್ಲಿಂದ ಏರ್ ಇಂಡಿಯಾದ ವಿಮಾನ ಮೂಲಕ ಅವರು ಬೆಂಗಳೂರಿಗೆ ಆಗಮಿಸಿದ್ದಾರೆ.