ಇತ್ತೀಚಿನ ಸುದ್ದಿ
ಪರ್ಯಾಯ ಪಂಪ್ ಕೊಳವೆ ಜೋಡಿಸಲು 2 ದಿನ ನೀರು ಸರಬರಾಜಿನಲ್ಲಿ ವ್ಯತ್ಯಯ: ಸಾರ್ವಜನಿಕರು ಸಹಕರಿಸಲು ಶಾಸಕರ ಮನವಿ
29/10/2021, 09:16
ಮಂಗಳೂರು(reporterkarnataka.com): ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ತುಂಬೆ ರೇಚಕ ಸ್ಥಾವರವನ್ನು ಉನ್ನತೀಕರಣ ಯೋಜನೆ ಕಾರ್ಯಗತ ನಿಟ್ಟಿನಲ್ಲಿ ಸರಿಸುಮಾರು 30-40 ದಿನಗಳ ಕಾಲಾವಕಾಶದ ಅವಶ್ಯಕತೆಯಿದೆ. ಆ ಸಂದರ್ಭದಲ್ಲಿ ಮಂಗಳೂರು ನಗರಕ್ಕೆ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವುದರಿಂದ, ಆ ಅಡಚಣೆಯನ್ನು ತಪ್ಪಿಸುವ ಸಲುವಾಗಿ ಈಗಿರುವಂತಹ ಹೆಚ್ಚುವರಿ ಸ್ಟಾಂಡ್ ಬೈ ಪಂಪ್ ಗಳನ್ನು ಉಪಯೋಸುವ ನಿಟ್ಟಿನಲ್ಲಿ ಅದಕ್ಕೆ ಬೇಕಿರುವ ಕೊಳವೆ ಜೋಡಣೆಯ ಮಾಡಲು ಎರಡು ದಿನಗಳ ಕಾಲ ನೀರು ಪೂರೈಕೆಯನ್ನು ಸ್ಥಗಿತಗೊಳಿಸುವ ಅನಿವಾರ್ಯತೆ ಎದುರಾಗಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಶಾಸಕ ಡಿ. ವೇದವ್ಯಾಸ ಕಾಮತ್ ಆಗ್ರಹಿಸಿದ್ದಾರೆ.
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ 50 ವರ್ಷ ಹಳೆಯ ಜ್ಯಾಕ್ ವೆಲನ್ನು ಉನ್ನತೀಕರಣಗೊಳಿಸುವ ಕಾಮಗಾರಿಗಳ ಪ್ರಾರಂಭವಾದಾಗ 30-40 ದಿನಗಳಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ಅಡೆತಡೆಯಾಗದಂತೆ ಈ ಕಾಮಗಾರಿ ಕೈಗೆತ್ತಿಕೊಳ್ಳಲಿದ್ದೇವೆ ಎಂದು ಶಾಸಕರು ಸ್ಪಷ್ಟಪಡಿಸಿದ್ದಾರೆ.