ಇತ್ತೀಚಿನ ಸುದ್ದಿ
ಪರ್ತಗಾಳಿ ಸ್ವಾಮೀಜಿ ವಿಧಿವಶ: ರಾಷ್ಟ್ರಪತಿ ಕೋವಿಂದ್, ಪ್ರಧಾನಿ ಮೋದಿ ಸಂತಾಪ
20/07/2021, 07:49
ನವದೆಹಲಿ: ಗೋಕರ್ಣ ಪರ್ತಗಾಳಿ ಮಠಾಧೀಶರಾದ ಶ್ರೀ ವಿದ್ಯಾಧಿರಾಜ ಸ್ವಾಮೀಜಿಯವರು ವಿಧಿವಶರಾಗಿರುವ ಬಗ್ಗೆ ರಾಷ್ಪ್ರಪತಿ ರಾಮ್ ನಾಥ್ ಕೋವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಸ್ವಾಮೀಜಿಯವರು ತನ್ನ ಅಸಂಖ್ಯಾತ ಅನುಯಾಯಿಗಳನ್ನು ಬಿಟ್ಟು ಹರಿಪಾದ ಸೇರಿದ್ದಾರೆ. ದಾನದ ಮೂಲಕ ಅವರು ಹೆಸರು ಪಡೆದಿದ್ದರು. ಅವರ ಆಧ್ಯಾತ್ಮಿಕ ಸಂದೇಶ ಹಾಗೂ ಆರೋಗ್ಯ ಮತ್ತು ಶಿಕ್ಷಣಕ್ಕೆ ನೀಡಿದ ಸೇವೆ ಅನುಪಮವಾದದ್ದು ಎಂದು ರಾಷ್ಟ್ರಪತಿಯವರು ಟ್ವೀಟ್ ಮೂಲಕ ತನ್ನ ಸಂತಾಪ ವ್ಯಕ್ತಪಡಿಸಿದ್ದಾರೆ.
ಸಮಾಜಕ್ಕೆ ಸ್ವಾಮೀಜಿ ನೀಡಿದ ಅನನ್ಯ ಸೇವೆ ಸ್ಮರಣೀಯ ಎಂದು ಪ್ರಧಾನಿ ತನ್ನ ಸಂತಾಪದಲ್ಲಿ ಹೇಳಿದ್ದಾರೆ.