ಇತ್ತೀಚಿನ ಸುದ್ದಿ
ಪರ್ತಗಾಳಿ ಸ್ವಾಮೀಜಿ ವಿಧಿವಶ: ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ಸಂತಾಪ
19/07/2021, 21:17
ಉಡುಪಿ(reporterkarnataka news): ಗೋಕರ್ಣ ಪರ್ತಗಾಳಿ ಮಠಾಧೀಶರಾದ ಶ್ರೀ ವಿದ್ಯಾಧಿರಾಜವಡೇರ್ ಸ್ವಾಮೀಜಿಯವರು ವಿಧಿವಶರಾಗಿರುವ ಬಗ್ಗೆ ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಶ್ರೀಗಳವರು ಆಗಲಿರುವುದು ತಿಳಿದು ವಿಷಾದವಾಗಿದೆ. ಶ್ರೀಗಳವರು ಮಧ್ವ ಸಿದ್ಧಾಂತ ಬಗ್ಗೆ ವಿಶೇಷ ನಿಷ್ಠೆಯುಳ್ಳವರಾಗಿದ್ದು, ಸನ್ಯಾಸ ಜೀವನ ಪರ್ಯಂತ ಅದನ್ನು ಶ್ರದ್ಧೆಯಿಂದ ಪಾಲಿಸಿದ್ದರು. ಸಮಾಜಕ್ಕೂ ಉತ್ತಮ ಮಾರ್ಗ ದರ್ಶನಗೈದಿದ್ದರು.
ಶ್ರೀ ಪೇಜಾವರ ಮಠ ಮತ್ತು ನಮ್ಮಗುರುಗಳಾದ ಶ್ರೀ ವಿಶ್ವತೀರ್ಥ ಶ್ರೀಪಾದರಲ್ಲಿ ಉತ್ತಮ ಬಾಂಧವ್ಯ ಹೊಂದಿದ್ದನ್ನು ವಿಶೇಷವಾಗಿ ಸ್ಮರಿಸುತ್ತೇನೆ ಎಂದು ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ತಮ್ಮ ಸಂತಾಪದಲ್ಲಿ ತಿಳಿಸಿದ್ದಾರೆ.