ಇತ್ತೀಚಿನ ಸುದ್ದಿ
ಆಪರೇಶನ್ ಸಿಂಧೂರ್ ಬಳಿಕವೂ ಗಡಿಯಲ್ಲಿ ಪಾಕ್ ಪಡೆಯಿಂದ ಶೆಲ್ ದಾಳಿ; ಭಾರತದಿಂದ ಪ್ರತಿದಾಳಿ
08/05/2025, 10:33

ಶ್ರೀನಗರ(reporterkarnataka.com): ಭಾರತೀಯ ಸೇನೆ ನಡೆಸಿದ ಆಪರೇಶನ್ ಸಿಂಧೂರದ ಬೆನ್ನಲ್ಲೇ
ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ನಿಯಂತ್ರಣ ರೇಖೆಯ (ಎಲ್‌ಒಸಿ) ಉದ್ದಕ್ಕೂ ಪಾಕಿಸ್ತಾನಿ ಪಡೆಗಳು ಗುರುವಾರ ಶೆಲ್ ದಾಳಿ ನಡೆಸಿದ್ದು, ಭಾರತೀಯ ಸೇನೆ ಪ್ರತಿದಾಳಿ ನಡೆಸಿದೆ.
ಸತತ ಎರಡನೇ ದಿನವಾದ ಗುರುವಾರ ಪಾಕ್ ಪಡೆ ಶೆಲ್
ದಾಳಿ ನಡೆಸಿವೆ. ಪಾಕ್ ಮತ್ತೊಮ್ಮೆ ಕದನ ವಿರಾಮ ಉಲ್ಲಂಘಿಸಿದೆ.
ಪಹಲ್ಗಾಮ್ ನಲ್ಲಿ ಉಗ್ರರು ದಾಳಿ ನಡೆಸಿ 26 ಮಂದಿಯನ್ನು ಕೊಂದ ಬಳಿಕವೂ ಕಳೆದ 13 ದಿನಗಳಿಂದಲೂ ಪಾಕಿಸ್ತಾನವು ಗಡಿಯುದ್ದಕ್ಕೂ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಲೇ ಇದೆ.
ಚಿತ್ರ ಕೃಪೆ: ಇಂಡಿಯಾ ಟಿವಿ