ಇತ್ತೀಚಿನ ಸುದ್ದಿ
ಪಡೀಲ್ ಜಂಕ್ಷನ್ ಬಳಿ ಕಾರು ಡಿಕ್ಕಿ: ಪಾದಚಾರಿ ಸಾವು, ಪೊಲೀಸ್ ಕಾನ್ ಸ್ಟೇಬಲ್ ಗೆ ಗಾಯ
22/01/2024, 23:58

ಮಂಗಳೂರು(reporterkarnataka.com):ನಗರದ ಪಡೀಲ್ ಜಂಕ್ಷನ್ ಬಳಿ ಚೆಕ್ ಪೋಸ್ಟ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬರು ಮೃತಪಟ್ಟಿದ್ದು, ಕರ್ತವ್ಯದಲ್ಲಿದ್ದ ಪೊಲೀಸ್ ಗಾಯಗೊಂಡಿದ್ದಾರೆ.
ಕ್ರೆಟಾ ಕಾರನ್ನು ಚಾಲಕ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಪದಾಚಾರಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ.
ಕಂಕನಾಡಿ ನಗರ ಠಾಣೆ ಪೊಲೀಸ್ ಕಾನ್ಸ್ಟೇಬಲ್ ಹರೀಶ್ ಅವರ ಕಾಲಿನ ಬೆರಳು ಮುರಿದಿದೆ. ಮೃತರನ್ನು ಒರಿಸ್ಸಾ ಮೂಲದ ದಂಡಸಿ ಮಲ್ಲಿಕ್ ಎಂದು ಗುರುತಿಸಲಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸ್ ಇನ್ಸ್ಪೆಕ್ಟರ್ ಗೋಪಾಲ ಕೃಷ್ಣ ಭಟ್,ಎ .ಎಸ್.ಐ ಚಂದ್ರ ಸ್ಥಳಕ್ಕೆ ಭೇಟಿ ನೀಡಿದ್ದಾರೆ.