ಇತ್ತೀಚಿನ ಸುದ್ದಿ
ಪಚ್ಚನಾಡಿ ಅಕ್ರಮ ಮನೆಗಳ ವಾರದೊಳಗೆ ತೆರವು ಮಾಡದಿದ್ದರೆ ತ್ಯಾಜ್ಯ ವಿಲೇವಾರಿ ಸ್ಥಗಿತ: ಪಾಲಿಕೆಗೆ ದಲಿತ ಮುಖಂಡರ ಎಚ್ಚರಿಕೆ
11/06/2022, 17:10
ಮಂಗಳೂರು(reporterkarnataka.com): ನಗರದ ಪಚ್ಚನಾಡಿಯಲ್ಲಿ ಪೌರ ಕಾರ್ಮಿಕರಿಗೆ ಮೀಸiಲಿಟ್ಟ ನಿವೇಶನದಲ್ಲಿ ಅಕ್ರಮವಾಗಿ ನಿರ್ಮಿಸಿದ ಮನೆಗಳನ್ನು ಒಂದು ವಾರದೊಳಗೆ ತೆರವು ಮಾಡದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ದಲಿತ ಸಂಘರ್ಷ ಸಮಿತಿಯ ಮುಖಂಡ ಎಸ್.ಪಿ.ಆನಂದ್ ಎಚ್ಚರಿಕೆ ನೀಡಿದ್ದಾರೆ.
ರಿಪೋರ್ಟರ್ ಕರ್ನಾಟಕ ಜತೆ ಶನಿವಾರ ಮಾತನಾಡಿದ ಅವರು, ವಾರದೊಳಗೆ ತೆರವು ಮಾಡದೇ ಇದ್ದಲ್ಲಿ ಮುಂದಿನ ವಾರ ಪಾಲಿಕೆಯ ವ್ಯಾಪ್ತಿಯಲ್ಲಿ ಪೌರ ಕಾರ್ಮಿಕರು (ಆ್ಯಂಟೋನಿ ತ್ಯಾಜ್ಯ ವಿಲೇವಾರಿಯ ಕಾರ್ಮಿಕರು ಸೇರಿದಂತೆ) ಕೆಲಸ ಸ್ಥಗಿತ ಮಾಡಿ ಉಗ್ರ ಹೋರಾಟ ನಡೆಸುವುದಾಗಿ ಹೇಳಿದರು.
4 ಎಕರೆ ಸ್ಥಳ ಸರಿ ಸುಮಾರು 200 ಪೌರ ಕಾರ್ಮಿಕರಿಗೆ ತಲಾ2 ಸೆಂಟ್ ನ ಹಾಗೆ ಮೀಸಲಿರಿಸಿದ ಸ್ಥಳ. ಇತೀಚೆಗೆ ಸಹ ಪರವಾನಿಗೆ ಇಲ್ಲದೇ ಹಲವರು ಅತಿಕ್ರಮಿಸಿ ಮನೆ ನಿರ್ಮಾಣವಾಗುತ್ತಿದ್ದಾಗ
ಇದರ ಬಗ್ಗೆ ದಲಿತ ಸಂಘರ್ಷ ಸಮಿತಿ ಹಾಗೂ ಪೌರ ಕಾರ್ಮಿಕರ ಸಂಘ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರಿಂದ ಮಂಗಳೂರು ಮಹಾ ನಗರ ಪಾಲಿಕೆಯ ಆಯುಕ್ತರ ಆದೇಶದ ಮೇರೆಗೆ ನಗರ ಪಾಲಿಕೆಯ ನಗರ ಯೋಜನೆ ಅಧಿಕಾರಿಗಳು ಸ್ಥಳೀಯ ಪೋಲಿಸ್ ಇಲಾಖೆಯ ಸಹಾಕಾರದೊಂದಿಗೆ ತೆರವು ಮಾಡಲು ಮುಂದಾಗಿದ್ದರು. ಆದರೆ ಅಲ್ಲಿನ ಕಾರ್ಪೊರೇಟರ್ ಸಂಗೀತಾ ಆರ್. ನಾಯಕ್ ಹಾಗೂ ಅವರ ಪತಿ ರವಿಂದ್ರ ನಾಯಕ್ ಹಾಗೂ ಸ್ಥಳೀಯ ಕೆಲವರು ತೆರವು ಮಾಡಲು ತಡೆಮಾಡಿದ್ದಾರೆ. ಪಾಲಿಕೆ ತೆರವಿಗೆ ಇನ್ನೊಂದು ವಾರ ಗಡುವು ನೀಡುತ್ತೇವೆ. ತೆರವು ಮಾಡದೇ ಇದ್ದಲ್ಲಿ ಮುಂದಿನ ವಾರ ಪಾಲಿಕೆಯ ವ್ಯಾಪ್ತಿಯಲ್ಲಿ ಪೌರ ಕಾರ್ಮಿಕರು (ಆ್ಯಂಟೋನಿ ತ್ಯಾಜ್ಯ ವಿಲೇವಾರಿಯ ಕಾರ್ಮಿಕರು ಸೇರಿದಂತೆ) ಕೆಲಸ ಸ್ಥಗಿತ ಮಾಡಿ ಉಗ್ರ ಹೋರಟ ನಡೆಸುವುದಾಗಿ ಆನಂದ್ ತಿಳಿಸಿದರು.