ಇತ್ತೀಚಿನ ಸುದ್ದಿ
ಪಾದಯಾತ್ರೆಯಲ್ಲಿ ಹರಿದು ಬಂದ ರೈತ ಪ್ರವಾಹ: ಬಾಕಿ ಹಣ ಪಾವತಿ ಒತ್ತಾಯಿಸಿ ಕೃಷ್ಣ ಸಕ್ಕರೆ ಕಾರ್ಖಾನೆಗೆ ಮುತ್ತಿಗೆ; ಭಾರಿ ಪ್ರತಿಭಟನೆ
20/09/2021, 14:10
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಕಬ್ಬಿನ ಬಾಕಿ ಹಣ ನೀಡುವಂತೆ ಒತ್ತಾಯಿಸಿ ರೈತರು ಜಿಲ್ಲೆಯ ಅಥಣಿ ತಾಲೂಕಿನ ಹಲ್ಯಾಳದ ಕೃಷ್ಣ ಸಕ್ಕರೆ ಕಾರ್ಖಾನೆ ವಿರುದ್ಧ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ಸಕ್ಕರೆ ಕಾರ್ಖಾನೆಗೆ ಮುತ್ತಿಗೆ ಹಾಕಿದರು.
ಕಬ್ಬಿನ ಬಾಕಿ ಹಣ ಬಿಡುಗಡೆ ಮಾಡುವಂತೆ ರೈತರ ಪಾದಯಾತ್ರೆಯಲ್ಲಿ ಹಲ್ಯಾಳಕ್ಕೆ ಆಗಮಿಸಿದರು. ನಂತರ ಅವರು ಕೃಷ್ಣ ಸಕ್ಕರೆ ಕಾರ್ಖಾನೆಗೆ ಮುತ್ತಿಗೆ ಹಾಕಿ ಆಡಳಿತ ಮಂಡಳಿಯ ವಿರುದ್ದ ಘೋಷಣೆ ಕೂಗಿದರು. ರೈತರ ಪ್ರವಾಹ ಅಥಣಿ ತಾಲೂಕಿನಿಂದ ದರೂರು ಗ್ರಾಮದಿಂದ ಕೃಷ್ಣ ಸಕ್ಕರೆ ಕಾರ್ಖಾನೆಗೆ ಹರಿದು ಬಂತು. ರೈತ ಮುಖಂಡ ಶಶಿಕಾಂತ ಪಡಸಲಗಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಟ್ರಾಕ್ಟರ್, ಬೈಕ್, ಹಾಗೂ ಪಾದಯಾತ್ರೆ ಮುಖಾಂತರ ಪಾದಯಾತ್ರೆಗೆ ಚಾಲನೆ ನೀಡಲಾಯಿತು.
ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸಹೋದರ ಪರಪ್ಪ ಸವದಿ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾಗಿದ್ದಾರೆ. ಇದು ಸಹಕಾರಿ ಸಂಘದಿಂದ ನಡೆಯುವ ಸಕ್ಕರೆ ಕಾರ್ಖಾನೆಯಾಗಿದೆ.
ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಪ್ರಮಾಣದಲ್ಲಿ ಅಥಣಿ ಪೋಲಿಸ್ ಜಮಾವಣೆ….