ಇತ್ತೀಚಿನ ಸುದ್ದಿ
ಸಂಬಳವಿಲ್ಲದೆ ದುಡಿಯುತ್ತಿರುವ ಹೊರಗುತ್ತಿಗೆ ನೌಕರರು!: ವೈದ್ಯರಿಗೊಂದು ನ್ಯಾಯ?; ಇತರರಿಗೊಂದು ನ್ಯಾಯ? ಜೆಸಿ ಆಸ್ಪತ್ರೆಯಲ್ಲಿ ಇದೆಂತಾ ಅವ್ಯವಸ್ಥೆ..!?
29/07/2025, 13:00

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmail.com
ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಯಾಗಿರುವ ಜಯಚಾಮರಾಜೇಂದ್ರ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ನೌಕರರಾಗಿ ದುಡಿಯುತ್ತಿರುವ ಸಿಬ್ಬಂದಿಗಳಿಗೆ 5 ತಿಂಗಳಿನಿಂದ ಸಂಬಳ ಕೊಡದೇ ಸರ್ಕಾರ ಸತಾಯಿಸುತ್ತಿದ್ದು ವೈದ್ಯರಿಗೆ ಸಂಬಳವಾಗುತ್ತಿದೆ, ಆದರೆ ಅವರಿಗೆ ಸಹಾಯಕ್ಕಾಗಿ ಇರುವ ಸಿಬ್ಬಂದಿಗಳಿಗೆ ಸಂಬಳವಿಲ್ಲ ಎಂದು ಅಲ್ಲಿನ ಸಿಬ್ಬಂದಿಗಳು ಗೊಳೋ ಎಂದು ಅಂಗಲಾಚಿದ್ದಾರೆ.
ಜೆಸಿ ಆಸ್ಪತ್ರೆಯಲ್ಲಿ ತಾಲೂಕಿನ ಜನರಲ್ಲದೆ ಕೊಪ್ಪ, ಎನ್ ಆರ್ ಪುರ, ಹೊಸನಗರ, ಆಗುಂಬೆ ಭಾಗಗಳಿಂದ ದಿನ ನಿತ್ಯ ನೂರಾರು ರೋಗಿಗಳು ಆಗಮಿಸುತ್ತಾರೆ. ಜೆಸಿ ಆಸ್ಪತ್ರೆಯಲ್ಲಿ ಈಗ ನೂತನವಾಗಿ ಬಂದ ವೈದ್ಯರ ತಂಡ ಉತ್ತಮ ಸೇವೆ ನೀಡುತ್ತಿದ್ದು ದಿನದಿಂದ ದಿನಕ್ಕೆ ಜನಪ್ರಿಯ ಹೊಂದುತ್ತಿದ್ದು ಆದರೆ ಅಲ್ಲಿನ ಸಿಬ್ಬಂದಿಗಳಿಗೆ ಮಾತ್ರ ಯಾವುದೇ ಸಂಬಳ ನೀಡದೆ ಕಷ್ಟದ ಪರಿಸ್ಥಿತಿಗೆ ಸರ್ಕಾರ ದೂಕಿದಂತೆ ಕಾಣಿಸುತ್ತಿದೆ.
ಈಗಾಗಲೇ ಈ ವಿಚಾರ ಪ್ರತಿಯೊರ್ವ ರಾಜಕಾರಣಿಗಳಿಗೆ
ಗೊತ್ತಿದ್ದರೂ ಸಹ ಮೌನವಾಗಿದ್ದಾರೆ. ಶಾಸಕ ಆರಗ ಜ್ಞಾನೇಂದ್ರ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೂ ಸಹ ಸಂಬಳ ಆಗದ ಬಗ್ಗೆ ತಿಳಿದಿದೆ. ಆದರೆ ಇಲ್ಲಿಯವರೆಗೆ ಎಲ್ಲರೂ ಮೌನ ವಹಿಸಿದ್ದಾರೆ. ಹೀಗೆ ಆದರೆ ನಮ್ಮ ಕುಟುಂಬ ಬೀದಿಗೆ ಬರಬೇಕಾಗುತ್ತದೆ ಎಂದು ಅಲ್ಲಿನ ಸಿಬ್ಬಂದಿಗಳು ಬೇಸರ ವ್ಯಕ್ತಪಡಿಸಿದರು.