ಇತ್ತೀಚಿನ ಸುದ್ದಿ
ಒಡಿಸ್ಸಾ ರೈಲು ದುರಂತ: ಕಳಸದಿಂದ ಸಮೇದ್ ಶಿಖರ್ಜಿ ಯಾತ್ರೆಗೆ ತೆರಳಿದ್ದ 110 ಮಂದಿ ಯಾತ್ರಾರ್ಥಿಗಳು
03/06/2023, 19:56
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಒಡಿಶಾದ ಬಹನಾಗ ರೈಲ್ವೆ ನಿಲ್ದಾಣದಲ್ಲಿ ದುರಂತಕ್ಕೀಡಾದ
ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಚಿಕ್ಕಮಗಳೂರು ಜಿಲ್ಲೆಯ
ಕಳಸ ತಾಲೂಕಿನ 110 ಮಂದಿ
ಕಳಸದಿಂದ ಸಮೇದ್ ಶಿಖರ್ಜಿ ಯಾತ್ರೆಗೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.
ಕಳಸ, ಹೊರನಾಡು, ಬಲಿಗೆ, ಯಡೂರು, ಸಂಸೆ, ಸುತ್ತ ಮುತ್ತಲ ಪ್ರದೇಶದ 110 ಜನ ಯಾತ್ರಿಕರು ರೈಲಿನಲ್ಲಿದ್ದರು. ಇವರಲ್ಲಿ ಹೆಂಗಸರು, ಮಕ್ಕಳು, ಹಿರಿಯ ನಾಗರಿಕರು ಕೂಡ ಸೇರಿದ್ದರು. ಒಟ್ಟಿಗೆ ಒಂದೇ ಕುಟುಂಬದ ಸದಸ್ಯರಂತೆ ಪ್ರಯಾಣ ಬೆಳೆಸಿದ್ದರು. ಅದೃಷ್ಟವಶಾತ್ ಕಳಸದ ಇವರೆಲ್ಲ ಸೇಫ್ ಆಗಿದ್ದಾರೆ.
ಗುರುವಾರ ಬೆಳಗ್ಗೆ 11:30ಕ್ಕೆ ಬೆಂಗಳೂರಿನ ಯಶವಂತಪುರದಿಂದ ರೈಲು ಹೊರಟಿತ್ತು. ಹೊರನಾಡಿನ ಅಜಿತ್ ಕುಮಾರ್ ಜೈನ್ ನೇತೃತ್ವದಲ್ಲಿ ಯಾತ್ರೆ ಹೊರಟಿತ್ತು.
ಮಲೆನಾಡಿನ ಸಂತ ಎಂದೇ ಖ್ಯಾತಿ ಪಡೆದಿದ್ದ ಮಹಿಮಾ ಸಾಗರ್ ಮುನಿ ಮಹಾರಾಜ್ ದರ್ಶನಕ್ಕೆ ಯಾತ್ರಾರ್ಥಿಗಳು ತೆರಳಿದ್ದರು. ಜೊತೆಗೆ 24 ತೀರ್ಥಂಕರರ ಮೋಕ್ಷ ಹೊಂದಿದ ಸ್ಥಳದ ದರ್ಶನ ಕೂಡ ಇತ್ತು. ಜೈನ ಕಾಶಿ ಎಂದೇ ಪ್ರಸಿದ್ಧಿಯಾದ ಸಮೇದ್ ಶಿಖರ್ಜಿ ಯಾತ್ರಾ ಸ್ಥಳವಾಗಿದೆ.
ಒಡಿಶಾ ಮೂಲಕ ಜಾರ್ಖಂಡ್ ತಲುಪಿ ಸಮೇದ್ ಶಿಖರ್ಜಿ ಯಾತ್ರಿಗಳು ತೆರಳಬೇಕಿತ್ತು.