ಇತ್ತೀಚಿನ ಸುದ್ದಿ
ಎನ್. ಆರ್. ಪುರ: ಭಾರೀ ಗಾಳಿಗೆ ಬೃಹತ್ ಮರ ಉರುಳಿ ಬಿದ್ದು ಮನೆ ಸಂಪೂರ್ಣ ಹಾನಿ
02/06/2023, 14:26
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka.com
ಭಾರಿ ಗಾಳಿಗೆ ಮನೆ ಮೇಲೆ ಬೃಹತ್ ಮರವೊಂದು ಉರುಳಿ ಬಿದ್ದ ಪರಿಣಾಮ ಮನೆ ಸಂಪೂರ್ಣ ಹಾನಿಗೀಡಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಸುಂಕದಕಟ್ಟೆ ಗ್ರಾಮದಲ್ಲಿ ನಡೆದಿದೆ.
ಕರಗುಂದ ಸುಂಕದಕಟ್ಟೆ ಗ್ರಾಮದ ಪ್ರಭಾಕರ್ ಎಂಬುವವರ ಮನೆ ಮೇಲೆ ಮರ ಬಿದ್ದ ಪರಿಣಾಮ ಮನೆ ಸಂಪೂರ್ಣ ಜಖಂಗೊಂಡಿದೆ. ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ವಸ್ತುಗಳು ಹಾನಿಗೀಡಾಗಿದೆ.
ಮಲೆನಾಡು ಭಾಗದಲ್ಲಿ ವೇಗವಾಗಿ ಬಿಸುತ್ತಿರುವ ಗಾಳಿಯಿಂದ ಮಲೆನಾಡಿಗರಲ್ಲಿ ಆತಂಕ ಉಂಟಾಗಿದೆ.