1:45 AM Saturday13 - September 2025
ಬ್ರೇಕಿಂಗ್ ನ್ಯೂಸ್
Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು… Kodagu | ಕಾಲೇಜಿನಲ್ಲಿ ಮಚ್ಚು ಹಿಡಿದು ರೀಲ್ಸ್: ವಿದ್ಯಾರ್ಥಿ ವಿರುದ್ದ ಪ್ರಕರಣ ದಾಖಲು;… Kodagu | ಕೇರಳದ ಕಸಾಯಿಖಾನೆಗೆ ಕೋಣಗಳ ಸಾಗಾಟ: 34 ಕೋಣಗಳ ರಕ್ಷಣೆ ಸಂತೋಷದ ಬಾಗಿಲಿನತ್ತ ಪೂಜಾಳ ಪಯಣ: ಬಿಹಾರದಲ್ಲಿರುವ ಕುಟುಂಬ ಜತೆ ಪುನರ್ಮಿಲನ ಕರಾವಳಿಯಲ್ಲಿ ಸಂಭ್ರಮದ ಮೊಂತಿ ಹಬ್ಬ: ಚರ್ಚ್ ಗಳಲ್ಲಿ ವಿಶೇಷ ಬಲಿಪೂಜೆ; ತೆನೆ ವಿತರಣೆ ಮೈಸೂರು ದಸರಾ: ಗೋಲ್ಡ್​ ಕಾರ್ಡ್​; ಟಿಕೆಟ್​ ದರ ಎಷ್ಟು? ಖರೀದಿ ಹೇಗೆ? ಇಲ್ಲಿದೆ… Kodagu | ಮಡಿಕೇರಿ: ಮಾಂದಲಪಟ್ಟಿಗೆಯಲ್ಲಿ ಪ್ರವಾಸಿಗನ ಮೇಲೆ ಜೀಪ್ ಚಾಲಕ ಹಲ್ಲೆ

ಇತ್ತೀಚಿನ ಸುದ್ದಿ

ನಿಯಮ ಉಲ್ಲಂಘಿಸಿದರೆ ಜೋಕೆ!:19 ಲಕ್ಷಕ್ಕೂ ಅಧಿಕ ಭಾರತೀಯರ ವಾಟ್ಸ್ಆ್ಯಪ್ ಖಾತೆ ಬ್ಯಾನ್!!

03/07/2022, 12:52

ಹೊಸದಿಲ್ಲಿ(reporterkarnataka.com): ಹೊಸ ಐಟಿ ನಿಯಮಗಳು 2021ರ ಅನುಸಾರವಾಗಿ ಮೇ ತಿಂಗಳಲ್ಲಿ ಭಾರತದಲ್ಲಿ 19 ಲಕ್ಷಕ್ಕೂ ಹೆಚ್ಚು ಕೆಟ್ಟ ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ವಾಟ್ಸ್ಆ್ಯಪ್ ಕಂಪನಿ ತಿಳಿಸಿದೆ.

ಮೆಟಾ ಒಡೆತನದ ಪ್ರಸಿದ್ದ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ ಆಪ್ ಬಳಕೆದಾರರು ನೀಡುವ ದೂರುಗಳ ಹಿನ್ನಲೆಯಲ್ಲಿ ಕೆಲವು ಸಮಯದಿಂದ ಕಠಿಣ ಕ್ರಮಗಳನ್ನು ವಾಟ್ಸಾಪ್ ಕೈಗೊಳ್ಳುತ್ತಿದ್ದು, ಐಟಿ ನಿಯಮಗಳಿಗೆ ಅನುಸಾರವಾಗಿ ಅಕೌಂಟ್‌ಗಳನ್ನು ಬ್ಯಾನ್ ಮಾಡಲಾಗುತ್ತಿದೆ. ಕಳೆದ ಎಪ್ರಿಲ್ ತಿಂಗಳಲ್ಲಿ ವಾಟ್ಸ್ ಆಪ್ 16.6 ಲಕ್ಷಕ್ಕೂ ಅಧಿಕ ಖಾತೆಯನ್ನು ಮಾಡಿತ್ತು. ಇದೀಗ ಮೇ ತಿಂಗಳ ವರದಿ ಬಿಡುಗಡೆ ಮಾಡಿದ್ದು ಭಾರತದ 19 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ನಿಷೇಧ ಮಾಡಿರುವುದಾಗಿ ಹೇಳಿದೆ.

ಐಟಿ ನಿಯಮ 2021ರ ಪ್ರಕಾರ ಈ ಕ್ರಮ ಕೈಗೊಳ್ಳಲಾಗಿದ್ದು, ಸಾಮಾಜಿಕ ಜಾಲತಾಣಗಳಿಂದ ತಿಂಗಳಿಗೆ 5 ಮಿಲಿನುಯನ್‌ಗೂ ಅಧಿಕ ದೂರುಗಳು ಬಂದಿದೆ ಎಂದು ವರದಿ ತಿಳಿಸಿದೆ.

ಮೇ ತಿಂಗಳ ಮಾಸಿಕ ವರದಿಯಲ್ಲಿ, ಸೊಶೀಯಲ್ ಮೀಡಿಯಾ ನಿಯಮ ಉಲ್ಲಂಘನೆ ಜೊತೆಗೆ ವಾಟ್ಸ್ ಆಪ್ ನಿಯಮಗಳನ್ನು ಉಲ್ಲಂಘನೆ ಮಾಡಿದವರ ಖಾತೆಗಳನ್ನು ನಿಷೇದಿಸಲಾಗಿದ್ದು,ವಾಟ್ಸ್ ಆಪ್‌ನಲ್ಲಿ ಬಳಕೆದಾರರು ಮಾಡುವ ರಿಪೋರ್ಟ್ ಆಧಾರದ ಮೇಲೂ ಕೂಡ ಅನೇಕ ಅಕೌಂಟ್‌ಗಳನ್ನು ನಿಷೇಧ ಮಾಡಲಾಗಿದೆ.

ಭಾರತದಲ್ಲಿ ಹೊಸ ಐಟಿ ನಿಯಮ ಜಾರಿಗೆ ಬಂದ ನಂತರ ಪ್ರತಿ ತಿಂಗಳು ಕೂಡ ಕುಂದುಕೊರತೆಯ ವರದಿ ನೀಡುವುದು ಕಡ್ಡಾಯವಾಗಿದ್ದು, ಅದರಂತೆ ವಾಟ್ಸ್ ಆಪ್ ಮಾರ್ಚ್ ತಿಂಗಳ ಅವಧಿಯಲ್ಲಿ ತಾನು ತೆಗೆದುಕೊಂಡ ನಿರ್ಧಾರಗಳ ಬಗ್ಗೆ ವರದಿಯಲ್ಲಿ ತಿಳಿಸಿದೆ.ಮೇ 1 ರಿಂದ ಮೇ 31 2022 ರ ನಡುವಿನ ಮಾಸಿಕ ವರದಿಯಲ್ಲಿ ಭಾರತದ 19 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ಬ್ಯಾನ್ ಮಾಡಿದ್ದು, ಇನ್ನು ಈ ಮಾಸಿಕ ಬಳಕೆದಾರ-ಸುರಕ್ಷತಾ ವರದಿಯು ಬಳಕೆದಾರರಿಂದ ಸ್ವೀಕರಿಸಿದ ದೂರುಗಳು ಮತ್ತು ವಾಟ್ಸ್‌ ಆಪ್ ತೆಗೆದುಕೊಂಡ ಕ್ರಮಗಳ ವಿವರಗಳನ್ನು ವರದಿ ಮಾಡಿದೆ. ಬ್ಯಾನ್ ಆಗಿರುವ ಖಾತೆಗಳು ಕಿರುಕುಳ, ನಕಲಿ ಮಾಹಿತಿಯನ್ನು ರವಾನೆ, ವಂಚನೆ, ಸೇರಿದಂತೆ ಇತರೆ ನಿಯಮ ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಖಾತೆಗಳನ್ನು ನಿಷೇಧಿಸಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು